ಚನ್ನಮ್ಕನ ಕಿತ್ತೂರ: ಮನೆ ಖಾಲಿ ಮಾಡುವ ವಿಚಾರಕ್ಕೆ ಸಂಬಂಧಿಸಿ ಕಿತ್ತೂರಿನ ಪ್ರತಿಷ್ಠಿತ ಸವದಿ ಕುಟುಂಬದ ಕಲಹ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ನೀರಿನ ಸಂಪರ್ಕ ಕಡಿತಗೊಳಿಸಿರುವುದನ್ನು ವಿರೋಧಿಸಿ ಕುಟುಂಬದ ಸದಸ್ಯರೊಬ್ಬರಿಂದ ಕಿತ್ತೂರು ತಹಶೀಲ್ದಾರರಿಗೆ ದಯಾಮರಣ ಕೋರಿ ಮನವಿ ಸಲ್ಲಿಸಿದ ಘಟನೆ ಚೆನ್ನಮ್ಮನ ಕಿತ್ತೂರಿನಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ಕಳೆದ ಹಲವು ವರ್ಷಗಳಿಂದ ಅವರದೇ ಕುಟುಂಬ ಸದಸ್ಯರೊಬ್ಬರು ಮನೆ ಒಂದರಲ್ಲಿ ವಾಸವಾಗಿದ್ದರು… ಆ ಮನೆಯ ಮಾಲೀಕ ಹಾಗೂ ಸಂಬಂಧಿಯು ಆದ ಅವರ ಚಿಕ್ಕಪ್ಪ ಮನೆ ಖಾಲಿ ಮಾಡಿ ಎಂದು ವಾಸವಿರುವ ಸದಸ್ಯರಿಗೆ ಕೆಲ ದಿನಗಳಿಂದ ಸೂಚನೆ ನೀಡುತ್ತಾ ಬಂದಿದ್ದರು ಎನ್ನಲಾಗಿದೆ. ಆದರೆ, ಕುಟುಂಬದ ಸದಸ್ಯರು ಮನೆ ಖಾಲಿ ಮಾಡುವುದಿಲ್ಲ ಎಂದು ಹಠ ಹಿಡಿದ ಪರಿಣಾಮವೇ.. ಈ ವಿವಾದಕ್ಕೆ ಕಾರಣ ಎನ್ನಲಾಗಿದೆ…
ಇದಾದ ಬಳಿಕ ಆ ಮನೆಯ ಮಾಲೀಕ ರಾಜು ಸವದಿ ತನ್ನ ಮನೆಗೆ ಒದಗಿಸಿರುವ ನೀರಿನ ಸರಬರಾಜು ನಿಲ್ಲಿಸುವಂತೆ ಕಿತ್ತೂರು ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ ಪರಿಣಾಮ ಮಾಲೀಕರ ಮನವಿ ಆಧರಿಸಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ನೀರಿನ ಸರಬರಾಜನ್ನು ಸ್ಥಗಿತಗೊಳಿಸಿದ್ದಾರೆ… ನೀರಿನ ಸೌಲಭ್ಯ ಇಲ್ಲದೆ ಸಂಕಷ್ಟಕ್ಕೀಡಾದ ಕುಟುಂಬದ ಸದಸ್ಯರು ಮನನೊಂದು “ನಮಗೆ ನೀರು ಕೊಡಿ, ಇಲ್ಲವೇ ದಯಾಮರಣ ಕೊಡಿ” ಎಂದು ಕಿತ್ತೂರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಘಟನೆಯ ಗಂಭೀರತೆಯನ್ನು ಅರಿತ ಕಿತ್ತೂರು ತಾಲೂಕು ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರು ಹಾಗೂ ಮನೆಯ ಮಾಲೀಕರ ಮಾಹಿತಿ ಕಲೆಹಾಕಿ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಮನೆಯ ಮಾಲೀಕರ ಮನವಿಯ ಆಧಾರದ ಮೇಲೆ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿರುವುದು ತಿಳಿದುಬಂದಿದೆ.
*ಒಂದೆಡೆ ಮನೆಯ ಮಾಲೀಕರ ಆಸ್ತಿ ಹಕ್ಕು, ಮತ್ತೊಂದೆಡೆ ಮೂಲಭೂತ ಸೌಲಭ್ಯಕ್ಕಾಗಿ ಕುಟುಂಬದ ಹೋರಾಟ—ಈ ಎರಡರ ನಡುವೆ ಕಾನೂನುಬದ್ಧ ಪರಿಹಾರ ಯಾವ ರೂಪ ಪಡೆಯಲಿದೆ ಎಂಬುದು ಇದೀಗ ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.*

