15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಕೋಲಿ ಕಬ್ಬಲಿಗ ಯಾದಗಿರಿ ಜಿಲ್ಲಾ ಸಂಘದಿಂದ ನಿಜಶರಣರ ಮೂರ್ತಿ ಪ್ರತಿಸ್ಥಾಪನೆ ಭೂಮಿ ಪೂಜೆ.


ಯಾದಗಿರಿ ಜ 9 :: ಯಾದಗಿರಿ ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದ ವತಿಯಿಂದ ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನ ಭೂಮಿ ಪೂಜೆ ನೆರವೇರಿದರು.
ಯಾದಗರಿ ಜಿಲ್ಲಾ ಮುಖಂಡರು ಶ್ರೀ ನಿಜ ಶರಣ ಅಂಬಿಗೇರ ಚೌಡಯ್ಯನವರ ಮೂರ್ತಿಯ ಪ್ರತಿಷ್ಠಾಪನೆಯ ಕಾಮಗಾರಿಗೆ ಚಾಲನೆ ನೀಡಿದರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋಲಿ ಕಬ್ಬಲಿಗ ಸಮಾಜ ಹೆಚ್ಚಿನ ಪ್ರಮಾಣದಲ್ಲಿ ಇದ್ದು ಯಾದಗಿರಿ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇದೆ ಭಾರತದ ಮೂಲ ನಿವಾಸಿಗಳಾದ ಕೋಲಿ ಕಬ್ಬಲಿಗ ಸಮಾಜದಲ್ಲಿ ಗುರು ಭಗವಾನ ವೇದವ್ಯಾಸರು,ಶ್ರೀ ಮಹರ್ಷಿ ವಾಲ್ಯಕೋಳಿ ವಾಲ್ಮೀಕಿ, ಗೌತಮ ಬುದ್ದ,ಮಹರ್ಷಿ ಕಷ್ಯಪ,ನಿಷಾದ ಮಾಹಾರಾಜ,ಭೀಷ್ಮ,ಏಕಲವ್ಯ,ಕರ್ಣ ಹಲವಾರು ಮಹನೀಯರು ಜನಿಸಿದ್ದಾರೆ ಕರ್ನಾಟಕದಲ್ಲಿ ಬಸವಾದಿ ಶರಣ ಕಾಲದಲ್ಲಿ ಶ್ರೀ ನಿಜ ಶರಣ ಅಂಬಿಗೇರ ಚೌಡಯ್ಯ ನವರು ಜನಿಸಿದ್ದಾರೆ.ರಾಮಾಯಣ ಕಾಲದಲ್ಲಿ ಸರಾಯು ನದಿಯನ್ನು ನಿಷಾದ ಸಮೂಹದ ಕೆವಟ್ (ಅಂಬಿಗ) ವನವಾಸ ಪೂರ್ಣಗೊಳಿಸಿಬಂದ ಶ್ರೀ ರಾಮಚಂದ್ರ ನನ್ನು ದಾಟಿಸಿ ಅಯೋದ್ಯ ತಲುಪಿಸಿದ್ದಾನೆ ಅದೇ ರೀತಿಯಲ್ಲಿ ಕರ್ನಾಟಕದಲ್ಲಿ ನದಿ ದಾಟಿಸುವ ಕಾಯದ ಜೋತೆ ಅಸಮಾನತೆಯನ್ನು ತೋಡೆದು ಹಾಕಲು ಶ್ರೀ ನಿಜಶರಣ ಅಂಬಿಗೇರ ಚೌಡಯ್ಯ ನವರು ಶ್ರೀ ಬಸವೇಶ್ವರ ರ ಜೋತೆ ಸೇರಿ ಮೌಡ್ಯ ಕಂದಾಚಾರ ನಿರ್ಮೂಲನೆ ಮಾಡಿ ಸಮಸಮಾಜವನ್ನು ಕಟ್ಟಿದ್ದಾರೆ ಇಂತ ಮಾಹಾನ ಶರಣರ ಮೂರ್ತಿ ಸ್ಥಾಪಿಸುವ ಭಾಗ್ಯದೊರೆತ್ತಿದ್ದು ನಮ್ಮ ಸೌಭಾಗ್ಯ ಜಿಲ್ಲೆಯ ಎಲ್ಲ ಸಮಾಜಗಳ ಸಹಕಾರದೊಂದಿಗೆ ಅದ್ದೂರಿಯಾಗಿ ಮೂರ್ತಿ ಉದ್ಘಾಟನೆ ಮಾಡಲಾಗುತ್ತದೆ ಎಂದು ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಗೋಸಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕೋಲಿ ಸಮಾಜದ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಗೋಸಿ ,ಹಾಗೂ ತಾಲೂಕಾಧ್ಯಕ್ಷರಾದ ನಿಂಗಪ್ಪ ಜಾಲಗರ್ , ಜಿಲ್ಲಾ ಯೂತ್ ಅಧ್ಯಕ್ಷರಾದ ಮಲ್ಲು ಪೂಜಾರಿ , ಮತ್ತು ಮಾಜಿ ಜಿಲ್ಲಾಧ್ಯಕ್ಷರಾದ ಹನುಮಂತ ಮಡ್ಡಿ, ವಡಿಗೆರಾ ತಾಲೂಕು ಅಧ್ಯಕ್ಷರಾದ ಬಸವರಾಜ್ ಕೊಲ್ಕರ್ ಮತ್ತು ಜಿಲ್ಲಾ ಉಪಾಧ್ಯಕ್ಷರು ಅಯ್ಯಣ್ಣ ಹಾಲಗೇರಿ, ಶಂಕರ ಗೋಸಿ , ಮರೆಪ್ಪ ಗೋಸಿ,ಭೀಮ್ ರೆಡ್ಡಿ ಯರಗೋಳ, ಮಲ್ಲಿಕಾರ್ಜುನ ಗಿರಿಮಿಸೆ ,ಮಹೇಶ್ ಬಾಡಿಯಾಲ್ , ಶಿವರಾಜ್ ಬಳಿಚಕ್ರ ,ನಿಂಗಪ್ಪ ತಿಂಥಿಣಿ ಇನ್ನು ಅನೇಕ ಮುಖಂಡರು ಈ ಪ್ರಗತಿ ಕಾಮಗಾರಿಯಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles