15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಗಣರಾಜ್ಯೋತ್ಸವ ಸಮಾನತೆಯ ಸಂದೇಶ ಸಾರಿದೆ : ಎಸ್ ಡಿ

ಗಣರಾಜ್ಯೋತ್ಸವ ಸಮಾನತೆಯ ಸಂದೇಶ ಸಾರಿದೆ : ಎಸ್ ಡಿ ಎಂ ಸಿ ಅಧ್ಯಕ್ಷ ಮಹದೇವಪ್ಪ ಬಸರಿಕಟ್ಟಿ

ಶಿಗ್ಗಾಂವ: ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಪೂರಕವಾದ ವಾತಾವರಣ ಕಲ್ಪಿಸಿ, ಗ್ರಾಮದ ಗುರು ಹಿರಿಯರ ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿಯೇ ಅತ್ಯಂತ ಮಾದರಿ ಶಾಲೆಯನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷ ಮಹದೇವಪ್ಪ ಬಸರಿಕಟ್ಟಿ ಹೇಳಿದರು.

ತಾಲೂಕಿನ ಕುನ್ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಗಂಡುಮಕ್ಕಳ ಶಾಲೆಯಲ್ಲಿ ಸೋಮವಾರ ಆಯೋಜಿಸಲಾದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಗಣರಾಜ್ಯೋತ್ಸವ ಸಮಾನತೆಯ ಸಾಮಾಜಿಕ ಸಂದೇಶ ಸಾರಲಿದೆ ನಮ್ಮ ಸರ್ಕಾರಿ ಶಾಲೆಯ ಮಕ್ಕಳು ಸಾಧನೆ ಮಾಡಬೇಕು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಆದ್ದರಿಂದ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ನೆರವಾಗುವ ಸರ್ಕಾರದ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಶೈಕ್ಷಣಿಕ ಪ್ರಗತಿಗೆ ಮಕ್ಕಳನ್ನು ಸಜ್ಜುಗೊಳಿಸುತ್ತೇವೆ ಎಂದರು.

ಹಿರಿಯ ಪತ್ರಕರ್ತ ಬಿ ಎಸ್ ಹಿರೇಮಠ ಅವರು ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಸ್ವಾತಂತ್ರ್ಯ, ಸಮಾನತೆಯ ಸಂವಿಧಾನ ಎತ್ತಿ ಹಿಡಿಯಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮ ಮಾಡಿ ತಮ್ಮ ಕೌಶಲ್ಯ ಪ್ರದರ್ಶನ ಮಾಡಿದ್ದಾರೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿ ಎಂದರು.

ಸರ್ಕಾರಿ ಕಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಮುಖ್ಯಯೊಪಾಧ್ಯಯಿನಿ ಮಮತಾಜಬೇಗಂ ಅವರು ಸ್ವಾಗತಿಸಿದರು, ಸರ್ಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯ ಸಹ ಶಿಕ್ಷಕ ಮೌಲಾಲಿ ನಾಗನೂರ ಕಾರ್ಯಕ್ರಮ ನಿರೂಪಿಸಿದರು.

ಗ್ರಾಮದ ಅಂಗನವಾಡಿ ಮಕ್ಕಳು, ಸರ್ಕಾರಿ ಕಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಮಕ್ಕಳಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ವೇದ ಮೂರ್ತಿ ಸೋಮಯ್ಯನವರ ಹಿರೇಮಠ ಅವರು ಸಾನಿಧ್ಯ ವಹಿಸಿದ್ದರು, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ನಿರ್ಮಲಾ ಹಿರೇಮಠ, ಗ್ರಾಮ ಪಂಚಾಯತ್ ಸದಸ್ಯರಾದ ಮರೆವ್ವ ಬಸರಿಕಟ್ಟಿ, ಮಲ್ಲವ್ವ ಮಮದಾಪುರ, ಬಸನಗೌಡ ಬ್ಯಾಹಟ್ಟಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನಿಂಗಪ್ಪ ಮಾದರ, ಎಸ್.ಡಿ ಎಂ ಸಿ ಮಾಜಿ ಅಧ್ಯಕ್ಷ ಪಕ್ಕೀರಗೌಡ ಪಾಟೀಲ, ಮೈಲಾರಪ್ಪ ಮಾಮಾದಾಪುರ, ಮುದಕಯ್ಯಸ್ವಾಮಿ ಹಿರೇಮಠ, ಮುಖಂಡರಾದ ಅಶೋಕ ಮರಿಸಿದ್ದಣ್ಣವರ, ಈರಣ್ಣ ಮಾಳೋಜನವರ, ಬಸವರಾಜ ಬೂದಿಹಾಳ, ವರ್ಧಮಾನ ಶೆಟ್ಟಪ್ಪನವರ, ಮುಖ್ಯಉಪಾಧ್ಯಯರಾದ ಪಿ.ಬಿ ಸಾಬೋಜಿ, ಸಹ ಶಿಕ್ಷಕಿ ಪಿ ಹೆಚ್ ಚಿಂತಪ್ಪನವರ, ಎಂ.ಎಸ್ ಮುಂದಿನಮನಿ, ಎಸ್.ಜಿ ಹಿರೇಮಠ, ಎಂ.ಡಿ ಲಮಾಣಿ ಸೇರಿದಂತೆ ಗ್ರಾಮದ ಶಿಕ್ಷಣ ಪ್ರೇಮಿಗಳು, ಮುಖಂಡರು ಸೇರಿದಂತೆ ಎಸ್ ಡಿ ಎಂ ಸಿ ಹಾಲಿ ಮಾಜಿ ಸದಸ್ಯರು ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles