ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಗ್ರಾಮೀಣ ಕರ್ನಾಟಕದ ಹಿರಿಯ ನಾಗರಿಕರಿಗೆ ಸ್ಮೃತಿ ಕುಗ್ಗುವಿಕೆಯ (ಡಿಮೆನ್ಷಿಯಾ) ಜಾಗೃತಿ ಮತ್ತು ಆರೋಗ್ಯಕರ ವಯೋವೃದ್ಧಾಪ್ಯ ಮಾದರಿ ರೂಪಿಸುವ ಉದ್ದೇಶದಿಂದ ಡಿಮೆನ್ಷಿಯಾ ಇಂಡಿಯಾ ಅಲಯನ್ಸ್ (ಡಿಐಎ) ಸಂಸ್ಥೆಯೊಂದಿಗೆ ಹಣ-ಕಾಸು ರಹಿತ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದ್ದು, ಈ ಸಹಭಾಗಿತ್ವದ ಮೂಲಕ ಸಮುದಾಯದ ಜ್ಞಾನ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ‘ವಯೋಮಿತ್ರ’ ಕಾರ್ಯಕ್ರಮಗಳು ಮತ್ತು ‘ಡಿಮೆನ್ಷಿಯಾ’ ಹಾಗೂ ‘ಆರೋಗ್ಯಕರ ವಯೋ ವೃದ್ಧಾಪ್ಯ’ ಕುರಿತ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಒಪ್ಪಂದದಡಿ ಡಿಐಎ ಸಂಸ್ಥೆ ಆಯ್ದ ಅರಿವು ಕೇಂದ್ರಗಳಲ್ಲಿ ಹಿರಿಯ ನಾಗರಿಕರಿಗೆ ಸಂಬಂಧಿಸಿದ ಚಟುವಟಿಕೆಗಳಿಂದ ಅವರ ದೈಹಿಕ, ಬೌದ್ಧಿಕ ಮತ್ತು ಸಾಮಾಜಿಕ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುವುದರ ಜೊತೆಗೆ ಆರೋಗ್ಯಕರ ವಯೋವೃದ್ಧಾಪ್ಯ ಚಟುವಟಿಕೆಗಳನ್ನು ನಡೆಸಲು ಗ್ರಂಥಾಲಯ ಮೇಲ್ವಿಚಾರಕರು ಮತ್ತು ಸಮುದಾಯ ಸ್ವಯಂಸೇವಕರಿಗೆ ತರಬೇತಿ ನೀಡಲು ಗ್ರಾಮೀಣಾಭಿವೃದ್ಧಿ ಇಲಾಖೆಯೊಂದಿಗೆ ಕೈಜೋಡಿಸಿದೆ ಎಂಬ ಮಾಹಿತಿ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಯೋಜನೆ ಅಂಗವಾಗಿ ಸಮುದಾಯ ಮಟ್ಟದ ಸ್ಮರಣಾಶಕ್ತಿ ತಪಾಸಣೆ ಶಿಬಿರಗಳು, ಜಾಗೃತಿ ಚಟುವಟಿಕೆಗಳನ್ನು ಪಂಚಾಯತ್ ರಾಜ್ ಸಂಸ್ಥೆಗಳ ಸಹಯೋಗದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ವೈದ್ಯಕೀಯ ಕಾಲೇಜುಗಳ ಸಹಕಾರದೊಂದಿಗೆ ಆಯೋಜಿಸಲಾಗುತ್ತದೆ ಮತ್ತು ಮಾನಸಿಕ ಆರೋಗ್ಯ ಸೇವೆಗಳೊಂದಿಗೆ ರೆಫೆರಲ್ ಸಂಪರ್ಕಗಳನ್ನು ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದ ಆಯ್ದ ತಾಲ್ಲೂಕುಗಳ ಆಯ್ದ ಗ್ರಾಮ ಪಂಚಾಯತಿಗಳಲ್ಲಿ ಪ್ರಾಯೋಗಿಕವಾಗಿ ಮಾದರಿ ಕೇಂದ್ರಗಳನ್ನು ಸ್ಥಾಪಿಸುವುದರಿಂದ ಪ್ರಾರಂಭವಾಗುವ ಈ ಕಾರ್ಯಕ್ರಮವನ್ನು ಮುಂದಿನ ಮೂರು ವರ್ಷಗಳಲ್ಲಿ ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತದೆ. ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರ ನೇತೃತ್ವದ ಜಂಟಿ ಚಾಲನಾ ಸಮಿತಿಯು ಯೋಜನೆಯ ಅನುಷ್ಠಾನವನ್ನು ಮಾರ್ಗದರ್ಶನ ಮಾಡಿ, ಮೇಲ್ವಿಚಾರಣೆ ಮಾಡುತ್ತದೆ ಹಾಗೂ ಡಿಮೆನ್ಷಿಯಾ ಸ್ಪಂದನಶೀಲ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಗಳಲ್ಲಿ ವ್ಯವಸ್ಥಿತವಾಗಿ ಅಳವಡಿಸುವುದನ್ನು ಖಾತ್ರಿಪಡಿಸುತ್ತದೆ ಎಂಬ ವಿವರಗಳನ್ನು ಸಚಿವರು ನೀಡಿದ್ದಾರೆ.
ಗ್ರಾಮ ಡಿಜಿ ವಿಕಸನಾ (ಜಿಡಿವಿ) ಕಾರ್ಯಕ್ರಮ
ಅದೇ ರೀತಿ, ಗ್ರಾಮ ಡಿಜಿ ವಿಕಸನಾ (ಜಿಡಿವಿ) ಕಾರ್ಯಕ್ರಮವನ್ನು ಇನ್ನಷ್ಟು ಬಲಪಡಿಸಲು ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್ಡಿಪಿಆರ್) ಇಲಾಖೆಯು ಶಿಕ್ಷಣ ಫೌಂಡೇಶನ್ನೊಂದಿಗೆ ಹೊಂದಿದ್ದ ಅನುದಾನ ರಹಿತ ಒಡಂಬಡಿಕೆಯನ್ನು ನವೀಕರಿಸಲಾಗಿದೆ, ನವೀಕರಿಸಿದ ಈ ಒಪ್ಪಂದವು ಸಂಸ್ಥೆಯ ಸಹಕಾರದ ವ್ಯಾಪ್ತಿಯನ್ನು ವಿಸ್ತರಿಸಿ, ರಾಜ್ಯದ ಎಲ್ಲಾ ಸಕ್ರಿಯ ಅರಿವು ಕೇಂದ್ರಗಳು ಹಾಗೂ ಇತ್ತೀಚೆಗೆ ಆರಂಭಿಸಲ್ಪಟ್ಟ ಅರಿವು ಕೇಂದ್ರಗಳಲ್ಲಿ ಉನ್ನತೀಕರಿಸಿದ ಡಿಜಿಟಲ್ ಮೂಲಸೌಕರ್ಯವನ್ನು ಹೊಂದುವಂತೆ ಮಾಡುವುದರ ಜೊತೆಗೆ ಸಮುದಾಯದ ಡಿಜಿಟಲ್ ಕಲಿಕೆಗಾಗಿ ಶಿಕ್ಷಣ ಫೌಂಡೇಶನ್ ಅಭಿವೃದ್ಧಿಪಡಿಸಿರುವ ‘ಶಿಕ್ಷಣಪೀಡಿಯ’ ವೆಬ್ಆ್ಯಪ್ಗೆ ಪ್ರವೇಶ ಕಲ್ಪಿಸುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಜಿಡಿವಿ ಕಾರ್ಯಕ್ರಮದ ಅನುಷ್ಠಾನ ಕುರಿತು ಗ್ರಂಥಾಲಯ ಮೇಲ್ವಿಚಾರಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ)ಗಳು ಹಾಗೂ ಮಾಸ್ಟರ್ ಬುಕ್ ಕೀಪರ್ಗಳಿಗೆ ಶಿಕ್ಷಣ ಫೌಂಡೇಶನ್ ತರಬೇತಿ ನೀಡಲಿದೆ. ಜೊತೆಗೆ ಸಮುದಾಯ ಸದಸ್ಯರು ಮತ್ತು ಸ್ವಸಹಾಯ ಗುಂಪುಗಳಿಗೆ ಡಿಜಿಟಲ್ ಸಾಕ್ಷರತಾ ತರಬೇತಿಯನ್ನು ಕೂಡ ಒದಗಿಸುತ್ತದೆ. ನವೀಕರಿಸಲಾದ ಈ ಸಹಭಾಗಿತ್ವವು ಗ್ರಾಮೀಣ ಯುವಜನರಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸುವುದಕ್ಕೆ ವಿಶೇಷ ಮಹತ್ವ ನೀಡುತ್ತಿದ್ದು, ಡಿಜಿಟಲ್ ಸಾಧನಗಳು, ಮೃದು ಕೌಶಲ್ಯಗಳು, ಉದ್ಯೋಗಾರ್ಹತೆ ಮತ್ತು ಮೂಲ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ವಿಷಯಗಳಲ್ಲಿ ಕೌಶಲ್ಯಾಭಿವೃದ್ಧಿಗೆ ಒತ್ತು ಕೊಡುತ್ತದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗ್ರಾಮೀಣ ಮಟ್ಟದಲ್ಲಿ ಡಿಜಿಟಲ್ ಸಶಕ್ತಿಕರಣ
ಮುಂದಿನ ಮೂರು ವರ್ಷಗಳಲ್ಲಿ ಹಂತ ಹಂತವಾಗಿ ರಾಜ್ಯದಾದ್ಯಂತ Model Inclusive Digital Centre ಗಳನ್ನು ಸ್ಥಾಪಿಸಿ, ವಿದ್ಯಾರ್ಥಿಗಳು ಮತ್ತು ಸ್ಥಳೀಯ ಸಮುದಾಯಗಳಿಗೆ ತಂತ್ರಜ್ಞಾನ ಕೇಂದ್ರಗಳಾಗಿ ಸೇವೆ ಸಲ್ಲಿಸುವ ವ್ಯವಸ್ಥೆಯನ್ನು ನಿರ್ಮಿಸಲಾಗುತ್ತದೆ. ಗ್ರಾಮೀಣ ಮಟ್ಟದಲ್ಲಿ ಡಿಜಿಟಲ್ ಸಶಕ್ತಿಕರಣವನ್ನು ಹೆಚ್ಚಿಸುವುದು, ತಂತ್ರಜ್ಞಾನ ಬಳಕೆಯನ್ನು ವಿಸ್ತರಿಸುವುದು ಮತ್ತು ಅರಿವು ಕೇಂದ್ರಗಳನ್ನು ಡಿಜಿಟಲ್ ಅಂಶಗಳನ್ನು ತೊಡಗಿಸಿಕೊಳ್ಳುವ ಕೇಂದ್ರಗಳಾಗಿ ರೂಪಾಂತರಿಸುವುದು ಇದರ ಉದ್ದೇಶವಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಗ್ರಾ.ಪಂ ಅರಿವು ಕೇಂದ್ರಗಳಲ್ಲಿ ಹಿರಿಯ ನಾಗರಿಕರಿಗಾಗಿ
ಆರೋಗ್ಯಕರ ವಯೋವೃದ್ಧಾಪ್ಯ ಚಟುವಟಿಕೆ: ಪ್ರಿಯಾಂಕ್ ಖರ್ಗೆ