15.1 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಚನ್ನಮ್ಮನ ಕಿತ್ತೂರಿನಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ 29 ರಂದು:ಕಿತ್ತೂರು ಕರ್ನಾಟಕ ರೈತ ಸಂಘ ರಾಜ್ಯಧ್ಯಕ್ಷರಾದ ಎಂ ಎಫ್ ಜಕಾತಿ ಹೇಳಿಕೆ..

ಸಂಪಾದಕರು: ರಾಮಚಂದ್ರಪ್ಪ ಪೂಜೇರ

ಚನ್ನಮ್ಮನ ಕಿತ್ತೂರು – ರಾಜ್ಯ ಸರ್ಕಾರವು ವಿದ್ಯುತವನ್ನು ಖಾಸಗಿಕರಣಗೊಳಿಸಲು ಹೊರಟಿರುವದನ್ನು ಖಂಡಿಸಿ ಜೂನ್ 29ರಂದು ಕಿತ್ತೂರು ಕರ್ನಾಟಕ ರೈತ ಸಂಘ ಮತ್ತು ವಿವಿಧ ಸಂಘಟನೆಗಳು ಸೇರಿದಂತೆ ವಿದ್ಯುತ್ ಬಳಸುವ ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಕಿತ್ತೂರು ಕರ್ನಾಟಕ ರೈತ ಸಂಘ ರಾಜ್ಯಧ್ಯಕ್ಷರಾದ ಎಂ ಎಫ್ ಜಕಾತಿ ಅವರು ಹೇಳಿದರು.


ಕಿತ್ತೂರಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ರಾಣಿ ಚನ್ನಮ್ಮಜಿಯವರ ವೃತ್ತದಿಂದ ಬೆಳಗ್ಗೆ 10 ಗಂಟೆಗೆ ಸೇರಿ ಇಲ್ಲಿಂದ ತಹಶೀಲ್ದಾರ್ ಕಚೇರಿವರೆಗೆ ಸಾಗಿ ಮನವಿ ಸಲ್ಲಿಸಲಿದ್ದೇವೆ ವಿದ್ಯುತ ಖಾಸಗೀಕರಣವಾದರೆ ಎಲ್ಲರಿಗೂ ತೊಂದರೆಯಾಗುವದೆಂದು ಎಂದು ಹೇಳಿದರು.


ಕರ್ನಾಟಕ ಜಾಗೃತಿ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪೇಶ ದಳವಾಯಿ ಅವರು ಮಾತನಾಡಿ ವಿದ್ಯುತ ಜನರ ಮೂಲಭೂತ ಹಕ್ಕಾಗಿದ್ದು ಅದನ್ನು ವ್ಯಾಪರದ ವಸ್ತುವಾಗಿ ಪರಿಗಣಿಸಬಾರದು ಸಾರ್ವಜನಿಕರ ಅಭಿಪ್ರಾಯವನ್ನು ಗೌರವಿಸಿ ಸರ್ಕಾರ ಖಾಸಗೀಕರಣ ಕ್ರಮವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಕಬ್ಬು ಬೆಳೆಗಾರರ ಸಂಘದ ತಾಲೂಕ ಅಧ್ಯಕ್ಷರಾದ ಪ್ರವೀಣ ಸರದಾರ ಅವರು ಮಾತನಾಡಿ ರೈತರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವ ಪ್ರಯತ್ನವನ್ನು ರೈತ ಸಮುದಾಯ ವಿರೋಧಿಸಲಿದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ವಿಜಯಕುಮಾರ ಶಿಂದೆ, ಜಿಎಸ್ ಹಿರೇಮಠ, ಮಡಿವಾಳಪ್ಪ ವಪಗಣ್ಣವರ,ಸತೀಶ ಲಂಗೋಟಿ, ಮತ್ತು ಮಂಜು ಸರದಾರ, ಹಲವಾರು ರೈತರು ಉಪಸ್ಥಿತಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles