14.7 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಜಮೀರ್ ದರ್ಗಾ ವಾಲೆ ಕೊಲೆ ಪ್ರಕರಣ :ಮತ್ತೊಬ್ಬ ಆರೋಪಿ ಬಂಧನ

ಮುಂಡಗೋಡ : ಜಮೀರ್ ಅಹ್ಮದ್ ದರ್ಗಾವಾಲೆ ಕೊಲೆ ಪ್ರಕರಣದ ತನಿಖೆಗೆ ಮುಂದುವರೆಸಿರುವ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದು. ಪ್ರಕರಣದಲ್ಲಿ ಬಂದಿ ತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ .
ಕೊಲೆ ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಎರಡು ಕಂಟ್ರಿ ಮೇಡ್ ಪಿಸ್ತೂಲುಗಳನ್ನು ಪೂರೈಸಿದ ಆರೋಪದ ಮೇಲೆ ಉತ್ತರ ಪ್ರದೇಶದ ರೋವಾಬ ಅಲ್ಲಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಘೋರ ಕಪೂರದ ಲಾರ್ಡ್ ಒಂದರಲ್ಲಿ ಅಡಗಿದ ಆರೋಪಿಯನ್ನು ಖಚಿತ ಮಾಹಿತಿ ಆಧರಿಸಿ ಕೋಕಾ ಕಾಯ್ದೆ ಅಡಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಂದಿತನ ವಿರುದ್ಧ ಕೊಲೆ ದರೋಡೆ ಹಾಗೂ ಅಕ್ರಮ ಶಾಸ್ತ್ರ ಸೇರಿದಂತೆ ಸುಮಾರು ಹತ್ತು ಪ್ರಕರಣಗಳನ್ನು ದಾಖಲೆಗಳಾಗಿವೆ ಎನ್ನಲಾಗಿದೆ.

ಕಳೆದ ಏಪ್ರಿಲ್ ನಲ್ಲಿ ಮುಂಡಗೋಡದಲ್ಲಿ ಜಮೀರ್ ಅಹ್ಮದ್ ದರ್ಗಾ ವಾಲೆ ಅವರನ್ನು ಕಾರದಪುಡಿ. ಹರಿತವಾದ ಆಯೋಧಗಳಿಂದ ಹಲ್ಲೆ ನಡೆಸಿ ಹಂತೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ತನಿಖೆಗೆ ಕೈಗೊಂಡ ಪೊಲೀಸರು ಹಂತ ಹಂತವಾಗಿ ಆರೋಪಿಗಳನ್ನು ಬಂಧಿಸಿದರು . ಈಗಾಗಲೇ ಬಂದಿತರಾಗಿರುವ 11 ಆರೋಪಿಗಳ ಹಿನ್ನೆಲೆ ಪರಿಶೀಲಿಸಿದಾಗ ಕೊಲೆ. ಕೊಲೆ ಯತ್ನ ರೌಡಿಸಂ, ಡಕಾಯಿತಿ ಹಾಗೂ ಸುಲಿಗೆ ಇದಂತೆ ಸೇರಿದಂತೆ ವಿವಿಧ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳು ಮತ್ತು ಅಪರಾಧ ದಾಖಲೆಗಳು ಪತ್ತೆಯಾಗಿದವು ಎಂದು ತಿಳಿದುಬಂದಿದೆ.

11 ಆರೋಪಿಗಳ ವಿರುದ್ಧ ಕೋಕಾ ಕಾಯಿದೆ : ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ್ ಕಾಜಗಾರ್ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಒಳಗೊಂಡು ಗುಂಪಿನೊಂದಿಗೆ ಸಂಘಟಿತವಾಗಿ ಕಾನೂನುಬಾಹಿರ ಚಟುವಟಿಕೆ ನಡೆಸುತ್ತದೆ ಬಗ್ಗೆ ತನಿಖೆಯಲ್ಲಿ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ. ಈಗಾಗಲೇ ಬಂಧಿಸಲಾಗಿರುವ 11 ಆರೋಪಿಗಳ ವಿರುದ್ಧ ಕೋಕಾ ಅಡಿ ಕ್ರಮ ಕೈಗೊಂಡಿದ್ದು. ಇಂದಿಗೆ 12 ಆರೋಪಿ ಮೇಲೆಯೂ ಕೋಕಾ ಕಾಯ್ದೆ ಅಡಿಯಲ್ಲಿ ಬಂಧಿಸಿದ್ದಾರೆ.

ವರದಿ: ಬಿ ಎಸ್ ತೋಟಯ್ಯನವರು ಮುಂಡಗೋಡ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles