14.6 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಡಿ.ವಿ.ಜಿ ಅವರ ಜೀವನ ದರ್ಶನದೊಂದಿಗೆ ಮತಯಾಚನೆ: ಪತ್ರಕರ್ತರ ಸಂಘದ ಅಭ್ಯರ್ಥಿ ಎ.ಬಿ. ಶಿವರಾಜ ಅವರಿಂದ ವಿಶಿಷ್ಟ ಪ್ರಚಾರ

ಡಿ.ವಿ.ಜಿ ಅವರ ಜೀವನ ದರ್ಶನದೊಂದಿಗೆ ಮತಯಾಚನೆ: ಪತ್ರಕರ್ತರ ಸಂಘದ ಅಭ್ಯರ್ಥಿ ಎ.ಬಿ. ಶಿವರಾಜ ಅವರಿಂದ ವಿಶಿಷ್ಟ ಪ್ರಚಾರ

ಬೆಂಗಳೂರು: ಜೀವನದಲ್ಲಿ ಸಂಕುಚಿತ ಮನೋಭಾವನೆಯನ್ನು ಬಿಟ್ಟು, ಸೂರ್ಯನ ಬೆಳಕಿನಂತೆ ವಿಶಾಲವಾಗಿ ಬದುಕಬೇಕು ಎಂಬ ಡಿ.ವಿ.ಜಿ ಅವರ ‘ಮಂಕುತಿಮ್ಮನ ಕಗ್ಗ’ದ ಜೀವನ ಸಂದೇಶದೊಂದಿಗೆ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣಾ ಕಣ ರಂಗೇರಿದೆ.
ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುವ ಎ.ಬಿ. ಶಿವರಾಜ (ಕ್ರಮ ಸಂಖ್ಯೆ 3) ಅವರು ಪ್ರತಿದಿನ “ದಿನಕ್ಕೊಂದು ಕಗ್ಗ”ದ ಮೂಲಕ ಪತ್ರಕರ್ತ ಮಿತ್ರರಲ್ಲಿ ಸಕಾರಾತ್ಮಕ ಚಿಂತನೆ ಮೂಡಿಸುತ್ತಾ ವಿಶಿಷ್ಟವಾಗಿ ಮತಯಾಚನೆ ಮಾಡುತ್ತಿದ್ದಾರೆ.
ಕಗ್ಗದ ಸಂದೇಶ:
“ವಿಸ್ತಾರದಲಿ ಬಾಳು, ವೈಶಾಲ್ಯದಿಂ ಬಾಳು” ಎಂಬ ಸಾಲುಗಳ ಮೂಲಕ ಬದುಕನ್ನು ವಿಶಾಲವಾಗಿ ಸ್ವೀಕರಿಸಬೇಕು. ಅಜ್ಞಾನದ ಕತ್ತಲೆಯಲ್ಲಿ ಮೂಲೆಯಲ್ಲಿ ಕುಳಿತುಕೊಳ್ಳದೆ, ಸೂರ್ಯನ ಕಿರಣಗಳಂತೆ ಹೊಸ ಜೀವನದ ಸತ್ವವನ್ನು ಅಳವಡಿಸಿಕೊಳ್ಳಬೇಕು. ಸಾವು ಎಂಬುದು ಬದುಕಿನ ವಿಸ್ತಾರದ ಮುಂದೆ ಅಲ್ಪವಾದದ್ದು ಎಂದು ಡಿ.ವಿ.ಜಿ ಅವರು ಹೇಳಿದ ಮಾತುಗಳನ್ನು ಎ.ಬಿ. ಶಿವರಾಜ ಅವರು ಪತ್ರಕರ್ತರಿಗೆ ನೆನಪಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಡಿ.ವಿ.ಜಿ ಅವರ ತತ್ವಗಳನ್ನು ಪಾಲಿಸುವ ಭರವಸೆಯೊಂದಿಗೆ, ಮುಂಬರುವ ಚುನಾವಣೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ತಮಗೆ ಕ್ರಮ ಸಂಖ್ಯೆ 3 ಕ್ಕೆ ಮತ ನೀಡಿ ಬೆಂಬಲಿಸಬೇಕೆಂದು ಅವರು ವಿನಂತಿಸಿದ್ದಾರೆ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles