14.7 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ದಿಕ್ಕು ತಪ್ಪೀತೆ.! ಪಿ ಎಂ ವಿಶ್ವಕರ್ಮ ಯೋಜನೆ”ಸರಿ ದಾರಿಗೆ ತರಲು ಸುಜಯ ಶೆಟ್ಟಿ ಗೋಕರ್ಣ ಆಗ್ರಹ

“ದಿಕ್ಕು ತಪ್ಪೀತೆ.! ಪಿ ಎಂ ವಿಶ್ವಕರ್ಮ ಯೋಜನೆ”
ಸರಿ ದಾರಿಗೆ ತರಲು ಸುಜಯ ಶೆಟ್ಟಿ ಗೋಕರ್ಣ ಆಗ್ರಹ

ಬೆಂಗಳೂರು: ಕೇಂದ್ರ ಸರಕಾರವು ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಕೌಶಲ್ಯ ತರಬೇತಿ, ಉಚಿತ ಟೂಲ್‌ಕಿಟ್‌ಗಳು ಮತ್ತು ರಿಯಾಯಿತಿ ಬಡ್ಡಿ ದರದಲ್ಲಿ 1 ರಿಂದ 3 ಲಕ್ಷದವರೆಗೆ ಮೇಲಾಧಾರ-ಮುಕ್ತ ಸಾಲವನ್ನು ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ
ಯೋಜನೆಯು ಯಾಕೋ ದಿಕ್ಕು ತಪ್ಪಿದೆ ಎನ್ನುವ ಸಂಶಯ ತರಬೇತಿ ಪಡೆದವರಲ್ಲಿ ಕಾಡುತ್ತಿದೆ.

ಕೇಂದ್ರ ಸರಕಾರವು ಬಡಗಿ, ದೋಣಿ, ಮೀನು ಬಲೆ, ಬುಟ್ಟಿ, ಚಾಪೆ, ಅಸ್ತ್ರ, ಬೊಂಬೆ ಮತ್ತು ಆಟಿಕೆ, ಕಮ್ಮಾರ, ಹ್ಯಾಮರ್ ಮತ್ತು ಟೂಲ್ ಕಿಟ್, ಬೀಗ ತಯಾರಕರು, ಕುಂಬಾರ, ಶಿಲ್ಪಿ, ಕಲ್ಲು ಕೆತ್ತುವವರು, ಚಮ್ಮಾರ, ಮೇಸ್ತ್ರಿ, ಕ್ಷೌರಿಕ, ಹೂವು ಮಾರುವವರು, ದೋಬಿ, ದರ್ಜಿ, ಚಿನ್ನದ ಕೆಲಸ, ಟೈಲರಿಂಗ್, ಟೈಲ್ಸ್ ಜೋಡನೆ ಹೀಗೆ ಹತ್ತಾರು ಕೌಶಲ್ಯ ಅಭಿವೃದ್ದಿ ತರಬೇತಿ ನೀಡಿ ಜೀವನ ನಿರ್ವಹಣೆಯ ಹಾದಿ ತೋರಿಸುವ ಕಾರ್ಯವು ಪಿ ಎಂ ವಿಶ್ವಕರ್ಮ ಯೋಜನೆಯ ಉದ್ದೇಶವಾಗಿದೆ.
ಅಲ್ಲದೆ ಶಿಬಿರಾರ್ಥಿಗಳಿಗೆ ಐದರಿಂದ ಏಳು ದಿನಗಳ ತನಕ ತರಬೇತಿ ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಹದಿನೈದು ದಿನಗಳ ತನಕ ತರಬೇತಿ ನೀಡಿ ಪ್ರತಿ ದಿನ ಐದುನೂರು ರೂಪಾಯಿಗಳ ತರಬೇತಿ ಭತ್ಯೆ ನೀಡುತ್ತಿದ್ದು, ಅಲ್ಲದೆ ತರಬೇತಿ ಪಡೆದ ಪ್ರತಿಯೊಬ್ಬರಿಗೆ ಒಂದು ಲಕ್ಷದಿಂದ ಮೂರು ಲಕ್ಷದ ವರೆಗೆ ರಿಯಾಯತಿ ಬಡ್ಡಿ ದರದಲ್ಲಿ ಸಾಲ ನೀಡಿ ಜನರ ಜೀವನ ಮಟ್ಟ ಹೆಚ್ಚಿಸುವ ಜನಪರ ಕಾಯಕ ಈ ಯೋಜನೆ ಹೊಂದಿದೆ.

ತರಬೇತಿ ಪಡೆದ ಹೆಚ್ಚಿನ ಶಿಬಿರಾರ್ಥಿಗಳಿಗೆ ವರುಷಗಳೇ ಕೆಳೆದರೂ 15,000 ರೂ ಬೆಲೆಯ ಟೂಲ್ ಕಿಟ್ ಬಂದಿಲ್ಲ.

ಆದರೆ ಇತ್ತೀಚಿನ ದಿನಗಳಲ್ಲಿ ತರಬೇತಿ ಪಡೆದ ರಾಜ್ಯದ ಬಹುತೇಕ ಶಿಬಿರಾರ್ಥಿಗಳಿಗೆ ಎರಡು ಮೂರು ವರ್ಷ ಕಳೆದರೂ ಹದಿನೈದು ಸಾವಿರ ರೂಪಾಯಿ ಮೌಲ್ಯದ ಟೂಲ್ ಕಿಟ್ ಕೆಲವರಿಗೆ ಮಾತ್ರ ಬಂದಿದ್ದು ಹೆಚ್ಚಿನ ಜನರಿಗೆ ಬರುತ್ತಿಲ್ಲ ಎನ್ನುವ ಅಪವಾದ ಕೇಳಿಬಂದಿದೆ. ಇನ್ನು ಈ ಯೋಜನೆಗೆ ಅರ್ಜಿ ಹಾಕಿ ಎರಡು ಮೂರು ವರ್ಷವಾದರೂ ತರಬೇತಿಗೆ ಕರೆಯುತ್ತಿಲ್ಲ.
ಮೊದಲಿನಂತೆ ಸರಿಯಾಗಿ ತರಬೇತಿಯನ್ನು ಸಹ ನಡೆಸುತ್ತಿಲ್ಲ.
ಇನ್ನೂ ಟೂಲ್ ಕಿಟ್ ವೋಚರ್ ಮೊಬೈಲ್ ನಂಬರ್ ಗೆ ಬರುತ್ತಿದ್ದು ಪ್ರತಿ ಆರು ತಿಂಗಳು ನಂತರ ಮತ್ತೆ 6 ತಿಂಗಳು ದಿನಾಂಕ ಮುಂದೂಡಿ ಸಂದೇಶ (ಮೆಸೇಜ್) ಬರುತ್ತಿದೆ.

ಈ ಬಗ್ಗೆ ಪತ್ರಿಕಾ ಹೇಳಿಗೆ ನೀಡಿರುವ ಸಾಮಾಜಿಕ ಕಾರ್ಯಕರ್ತರಾದ ಸುಜಯ ಶೆಟ್ಟಿ ಗೋಕರ್ಣ ಅವರು ಈ ಕೂಡಲೇ ಸಂಭಂದಪಟ್ಟ ಇಲಾಖೆ ಅಧಿಕಾರಿಗಳು, ಮಾನ್ಯ ಸಂಸದರು,
ಸಂಬಂಧಪಟ್ಟ ಕೇಂದ್ರ ಸಚಿವರೊಂದಿಗೆ ಚರ್ಚಿಸಿ
ಪಿ ಎಂ ವಿಶ್ವಕರ್ಮ
ಯೋಜನೆಯನ್ನು ಸರಿಯಾದ ದಾರಿಗೆ ತಂದು, ತರಬೇತಿ ಪಡೆದ ಪ್ರತಿಯೊಬ್ಬ ಶಿಬಿರಾರ್ಥಿಗಳಿಗೆ ಕೂಡಲೇ 15,000 ರೂ ಮೌಲ್ಯದ ಟೂಲ್ ಕಿಟ್ ಒದಗಿಸಬೇಕು, ಹಾಗೂ ಈ ಯೋಜನೆ
ಯಶಸ್ವಿಯಾಗಿ ಪ್ರಧಾನ ಮಂತ್ರಿಗಳ ಹಾಗೂ ಶಿಬಿರಾರ್ಥಿಗಳ, ಕುಶಲಕರ್ಮಿಗಳ ಕನಸು ನನಸು ಮಾಡಬೇಕಾಗಿದೆ.

ಸುಜಯ ಸುಧೀರ ಶೆಟ್ಟಿ ಗೋಕರ್ಣ
ಸಾಮಾಜಿಕ ಕಾರ್ಯಕರ್ತರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles