16 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ನಾಗನೂರ ಮಠದ ಪ್ರತಿಷ್ಠಿತ” ಮಹಿಳಾ ರತ್ನ “ಪ್ರಶಸ್ತಿಗೆ ಶ್ರೀಮತಿ ರೋಹಿಣಿ ಬಾಬಾಸಾಹೇಬ್ ಪಾಟೀಲ ಭಾಜನಾರಾಗಿದ್ದಾರೆ..

ಬೈಲಹೊಂಗಲ: ಬೈಲಹೊಂಗಲ ನಾಡಿನ ಹೆಮ್ಮೆಯ ಮಗಳು, ಕಿತ್ತೂರ ನಾಡಿನ ಪ್ರತಿಷ್ಠಿತ ಮನೆತನದ ಸೊಸೆ ರೋಹಿಣಿ ಬಾಬಾಸಾಹೇಬ್ ಪಾಟೀಲ ಅವರು ನಾಗನೂರ ಮಠದ ಪ್ರತಿಷ್ಠಿತ” ಮಹಿಳಾ ರತ್ನ “ಪ್ರಶಸ್ತಿಯನ್ನು ಗದಗ ಡಂಬಳ ಮಠದ ಪೂಜ್ಯ ಶ್ರೀ ಸಿದ್ದರಾಮ ಸ್ವಾಮಿಜಿಗಳು ಹಾಗೂ ನಾಗನೂರ ಮಠದ ಡಾ, ಅಲ್ಲಮಪ್ರಭು ಸ್ವಾಮೀಜಿಗಳು ಕೊಡ ಮಾಡಿದ ಪ್ರಶಸ್ತಿಗೆ ಭಾಜನಾರಾಗಿರುವುದು ನಮ್ಮ ನಾಡಿಗೆ ಅಷ್ಟೇ ಅಲ್ಲದೆ ಇಡೀ ಲಿಂಗಾಯತ ಸಮುದಾಯಕ್ಕೆ ಸಂದ ಗೌರವವಾಗಿದೆ,

ಈ ಪ್ರಶಸ್ತಿಗಳು ಅರಸಿಕೊಂಡು ಬರುವುದಕ್ಕೆ ಅದರ ಹಿಂದಿರುವ ಪರಿಶ್ರಮ ನೆನೆದರೆ ಪ್ರತಿಯೊಬ್ಬ ಯಶಶ್ವಿ ಪುರುಷನ ಹಿಂದೆ (ಮುಂದೆ )ಮಹಿಳೆ ಇರುತ್ತಾಳೆ ಈ ಮಾತು ಅಕ್ಷರ ಸಹ ಸತ್ಯವೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು,ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಎಲ್ಲರೊಡನೆ ಬೆರೆತು ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಅವರ ಗುಣ ಊಹೆಗೂ ನಿಲುಕದ್ದು,
ಬೈಲಹೊಂಗಲ ಹಾಗೂ ಕಿತ್ತೂರ ನಾಡಿನಲ್ಲಿ ರೋಹಿಣಿ ಅಕ್ಕಾ ಎಂದರೆ ಪ್ರತಿ ಮನೆಗೂ ಚಿರಪರಿಚಿತರಾಗಿ ಬಿಟ್ಟಿದ್ದಾರೆ, ಚಿರಪರಿಚಿತರಾಗುವುದು ಎಂದರೆ ಮನೆ ಮಠ ಬಿಟ್ಟು ಪ್ರತಿ ಮನೆಯವರ ಅವರು ಹೇಳಲಿ ಬಿಡಲಿ, ಸಂತೋಷವಿರಲಿ, ಕಷ್ಟದ ಕಾರ್ಯಕ್ರಮ ಇರಲಿ ವಿಷಯ ತಿಳಿದು ಭಾಗಿಯಾಗುವ ಅವರ ಗುಣವಾಗಿದೆ ಇದು ಅವರ ತಂದೆಯವರ ಬಳುವಳಿಯಾಗಿದೆ ಎಂದು ತಿಳಿಸಿದರು.

ಅವರಿಗೆ ಸಂದ ಈ ಪ್ರಶಸ್ತಿ ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚು ಮಾಡಿದೆ ಎಂದು ಅವರ ಅಭಿಮಾನಿಗಳು ತಿಳಿಸಿದರು..

ವರದಿಗಾರರು: ಕಾಸಿಂ ಸಾಬ್ ಕುಸುಗಲ್

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles