15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ನಾಗಬೇನಾಳ ತಾಂಡದಲ್ಲಿ ಅರ್ಥಪೂರ್ಣವಾಗಿ 80ನೇ ಸ್ವಾತಂತ್ರ್ಯ ದಿನಾಚರಣೆ : ಎಸ್.ಡಿ.ಎಂ.ಸಿ.ವತಿಯಿಂದ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ.

ನಾಗಬೇನಾಳ ತಾಂಡಾ : ರಾಷ್ಟ್ರೀಯ ಹಬ್ಬಗಳ ಆಚರಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗಬೇನಾಳ ತಾಂಡದ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶನಿವಾರ ಶಾಲೆಯ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಶಾಲೆಯ ಮುಖ್ಯ ಗುರುಮಾತೆ ಶ್ರೀಮತಿ ಎಸ್.ಎ. ಗಂಗನಗೌಡರವರು ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿದ ಅವರು, ‘ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯಿತು. ಮಹಾತ್ಮ ಗಾಂಧಿ, ಪಂಡಿತ್ ಜವಾಹರ್ ಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ, ಭಗತ್ ಸಿಂಗ್‌, ಚಂದ್ರಶೇಖ‌ರ್ ಆಜಾದ್ ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ’ ಎಂದರು.

‘ಸ್ವಾತಂತ್ರ್ಯ ಕೇವಲ ಕೆಲವೇ ಜನರಿಗೆ ಸೀಮಿತವಾಗಿರಬಾರದು. ಅದರ ಲಾಭವು ದೇಶದಲ್ಲಿರುವ ಶ್ರೀಮಂತರಿಗೆ, ಪ್ರಭಾವಿ ಜನರಿಗೆ, ಕಟ್ಟಕಡೆಯ ಮನುಷ್ಯನಿಗೂ ಸಮಾನವಾಗಿ ತಲುಪಬೇಕು ಎಂಬ ಆಸೆಯದಿಂದ ಡಾ. ಬಾಬಾಸಾಹೇಬ್ ಅಂಬೇಡ್ಕ‌ರ್ ಅವರು ವಿಶ್ವಕ್ಕೆ ಮಾದರಿಯಾದ ಸಂವಿಧಾನ ಬರೆದರು’ ಎಂದು ಹೇಳಿದರು.

‘ಈ ದೇಶದಲ್ಲಿ ಜನಿಸಿದ ಸಾಮಾನ್ಯ ಪ್ರಜೆಯು ಪ್ರಧಾನಮಂತ್ರಿ ಆಗಬಹುದಾದ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ. ಬಂಡವಾಳಶಾಹಿಗೂ ಕೂಡ ಒಂದೇ ಮತವಿದೆ, ಒಬ್ಬ ಕೂಲಿಕಾರನಿಗೂ ಒಂದೇ ಮತವಿದೆ. ಭಾರತವನ್ನು ಸಮಾನತೆಯ ತಳಹದಿಯ ಮೇಲೆ ಕಟ್ಟಲಾಗಿದೆ’ ಎಂದರು.

‘ಸ್ವಾತಂತ್ರ್ಯದ ನಂತರ ದೇಶದ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಯೂರಬೇಕು. ಸ್ವಾತಂತ್ರ್ಯದ ಫಲ ಕಟ್ಟಕಡೆಯ ಮನುಷ್ಯನಿಗೆ ತಲುಪಬೇಕು. ಎಲ್ಲರಿಗೂ ಸ್ವಾಭಿಮಾನದ ಬದುಕನ್ನು ಸಿಗಬೇಕು ಎಂಬುದು ಮಹಾತ್ಮ ಗಾಂಧಿ ಮತ್ತು ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಕನಸಾಗಿತ್ತು. ಅದನ್ನು ನೆನಪು ಮಾಡಿಕೊಳ್ಳುವ ದಿನ ಇವತ್ತು’ ಎಂದು ಹೇಳಿದರು

ಈ ಸಂದರ್ಭದಲ್ಲಿ ಮುಖ್ಯ ಅಥಿತಿಯಾಗಿ ಶಿವು ರಾಠೋಡ ಪ್ರತ್ರಕರ್ತರು, ಆನಂದ ನಾಯಕ, ಜಗದೇವ ನಾಯಕ,ಜ್ಯೋತಿ ನಾಯಕ,ಶ್ರೀದೇವಿ ನಾಯಕ, ಶಿವು ರಾಠೋಡ , ಗೋವಿಂದ್ ನಾಯಕ,ರಮೇಶ್ ನಾಯಕ,ಮಲ್ಲೇಶ್ ಚವಾಣ್ ಹಣಮಂತ ನಾಯಕ, ಕುಮಾರ್ ನಾಯಕ, ಪ್ರೇಮಾ ನಾಯಕ ರಘು ಪವಾರ್, ಮಹದೇವಪ್ಪ ನಾಯಕ, ದೇವಪ್ಪ ನಾಯಕ, ಬಾಲು ನಾಯಕ ಶ್ರೀಮತಿ ಎಸ್.ಎ. ಗಂಗನಗೌಡರ್, ಶ್ರೀಮತಿ ಎ.ಎ. ಉಪನಾಳ್, ಶ್ರೀಮತಿ ಪ್ರಿಯಾ.ಬಿ.ಯರನಾಳ್ ಹಾಗೂ ಶ್ರೀ ವಿರೇಶ್ ನವಲಿ ಗುರುಬಳಗದಿಂದ ಉಪಸ್ಥಿತರಿದ್ದರು

ವರದಿ : ಶಿವು ರಾಠೋಡ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles