15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ನಾಗರಾಳಡೋಣದಲ್ಲಿ ಶ್ರೀ ಜಟ್ಟಿಂಗರಾಯ ದೇವಸ್ಥಾನ ಲೋಕಾರ್ಪಣೆ: ಭಕ್ತಿಯ ಪಥದಲ್ಲಿ ನಡೆಯಲು ಬಸನಗೌಡ ಪಾಟೀಲ ಯಡಿಯಾಪುರ ಕರೆ

ನಾಗರಾಳಡೋಣದಲ್ಲಿ ಶ್ರೀ ಜಟ್ಟಿಂಗರಾಯ ದೇವಸ್ಥಾನ ಲೋಕಾರ್ಪಣೆ: ಭಕ್ತಿಯ ಪಥದಲ್ಲಿ ನಡೆಯಲು ಬಸನಗೌಡ ಪಾಟೀಲ ಯಡಿಯಾಪುರ ಕರೆ

ದೇವನ ಹಿಪ್ಪರಗಿ: ತಾಲೂಕಿನ ಸುಕ್ಷೇತ್ರ ನಾಗರಾಳಡೋಣ ಗ್ರಾಮದ ಆರಾಧ್ಯ ದೈವ ಶ್ರೀ ಜಟ್ಟಿಂಗರಾಯ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಅತ್ಯಂತ ಸಡಗರ-ಸಂಭ್ರಮದಿಂದ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಶ್ರೀ ಬಸನಗೌಡ ಎಸ್. ಪಾಟೀಲ (ಯಡಿಯಾಪುರ) ಅವರು ಭಾಗವಹಿಸಿದ್ದರು.
ದೇವಸ್ಥಾನದ ಕಟ್ಟಡವನ್ನು ಉದ್ಘಾಟಿಸಿ, ನಂತರ ದೈವದ ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡಿದ ಅವರು, ಆಧ್ಯಾತ್ಮಿಕ ಚಿಂತನೆಗಳ ಕುರಿತು ಮಾರ್ಮಿಕವಾಗಿ ಪ್ರವಚನ ನೀಡಿದರು. “ಈ ಪುಣ್ಯಕ್ಷೇತ್ರದ ದರ್ಶನವು ನಮ್ಮ ಮನಸ್ಸಿನ ಮೈಲಿಗೆಯನ್ನು ತೊಳೆದು, ಭಕ್ತಿಯ ಬೆಳಕನ್ನು ಚೆಲ್ಲುವಂತಿದೆ. ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ನಡೆಯುವಂತಾಗಲಿ ಮತ್ತು ಈ ಕ್ಷೇತ್ರವು ಎಲ್ಲರಿಗೂ ಸನ್ಮಾರ್ಗದಲ್ಲಿ ನಡೆಯುವ ಶಕ್ತಿಯನ್ನು ನೀಡಲಿ” ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದು, ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದರು. ಶ್ರೀ ಜಟ್ಟಿಂಗರಾಯನ ಕೃಪೆಯಿಂದ ಗ್ರಾಮದಲ್ಲಿ ಸುಖ-ಶಾಂತಿ ನೆಲೆಸಲಿ ಎಂಬ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು

ವರದಿಗಾರರು : ವಿಜಯಕುಮಾರ ದರ್ಶನಾಪುರ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles