ನೂತನವಾಗಿ ಆರಂಭಗೊಂಡ ನಾರಾಯಣಪೂರದಿಂದ ತಾಳಿಕೋಟಿಗೆ ಬಸ್ ಸಂಚಾರ
ನಾರಾಯಣಪುರ ಗ್ರಾಮದ ಜನತೆಯ ಬಹುದಿನಗಳ ಬೇಡಿಕೆಯಾದ ನಾರಾಯಣಪೂರ ಮೂಲಕ ತಾಳಿಕೋಟಿ ಪಟ್ಟಣಕ್ಕೆ ಕೊನೆಗೂ ನೂತನ ಬಸ್ ಸೇವೆ ಆರಂಭಗೊಂಡಿದ್ದು ಗ್ರಾಮಸ್ಥರಲ್ಲಿ ಸಂತಸ ಇಮ್ಮಡಿಗೊಳಿಸಿದೆ. ಕಳೆದ ಹಲವು ತಿಂಗಳಿಂದಲೂ ನಾರಾಯಣಪೂರ ಮೂಲಕ ತಾಳಿಕೋಟಿಗೆ ಸಿಟಿ ಬಸ್ ಮಾದರಿಯಲ್ಲಿ ಸೇವೆ ಆರಂಭಿಸಲು 2-3 ತಿಂಗಳಿಂದಾಚೆಗೆ ವಿಭಾಗೀಯ ನಿಯಂತ್ರಕರು ಯಾದಗಿರಿ ಮತ್ತು ಸುರುಪುರ ಘಟಕ ವ್ಯವಸ್ಥಾಪಕರಿಗೆ ಗ್ರಾಮಸ್ಥರು ಸೇರಿ ವಿವಿಧ ಮನವಿ ಸಲ್ಲಿಸಿದ್ದರು.
ಮನವಿಗೆ ಸ್ಪಂದಿಸಿದ ಅಧಿಕಾರಿಗಳಿಗೆ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ನೂತನವಾಗಿ ಸೇವೆ ನೀಡಿದ ಸುರಪುರ ಘಟಕ ವ್ಯವಸ್ಥಾಪಕರು, ಸ್ಥಳಿಯ ಸಾರಿಗೆ ನಿಯಂತ್ರಕರು, ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಶುಭಕೋರಿದರು.
ವಿಭಾಗೀಯ ಸಂಚಾರ ಅಧಿಕಾರಿ ವಿ ಆರ್ ರೆಡ್ಡಿ ಮತ್ತು ಸುರುಪುರ ಘಟಕ ವ್ಯವಸ್ಥಾಪಕ ಭೀಮ್ ಸಿಂಗ್ ರಾಠೋಡ್, ಟಿ ಐ ಸಂಗಮೇಶ್
ದಳವಾಯಿ, ನಿಯಂತ್ರಣ ಅಧಿಕಾರಿ ಅಶೋಕ್ ಶಹಾಬಾದಿ, ಚಾಲಕ ಶಿವಕುಮಾರ, ನಿರ್ವಾಹಕ ಉಮೇಶ್ ಹಾಗೂ ವ್ಯಾಪಾರಸ್ಥರು, ಗ್ರಾಮಸ್ಥರು ಉಪಸ್ಥಿತಿ ಇದ್ದರು.
ಸಮಯ ನಿಗಧಿ: ಕೋಡೆಕಲ್, ಹಗರಟಗಿ ಹಾಗೂ ಬಿಳೇಬಾವಿ ಮಾರ್ಗದ ಮೂಲಕ ಸಂಚಾರ ಆರಂಭಿಸಿದ ಬಸ್ ನಾರಾಯಣಪೂರದಿಂದ ಬೆಳಿಗ್ಗೆ 8.30, 11.15, ಮದ್ಯಾಹ್ನ 2.20 ಕ್ಕೆ ಹೊರಡುತ್ತದೆ. ತಾಳಿಕೋಟಿಯಿಂದ ಬೆಳಿಗ್ಗೆ 10ಗಂಟೆಗೆ. ಮದ್ಯಾಹ್ನ 12.45 ಕ್ಕೆ ಹಾಗೂ 3.30 ಕ್ಕೆ ಹೊರಡಲಿದೆ ಎಂದು ಸ್ಥಳಿಯ ಸಾರಿಗೆ ನಿಯಂತ್ರಕರು ತಿಳಿಸಿದ್ದಾರೆ.

