14.6 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಬಸನಗೌಡ ಬಾದರ್ಲಿ ವಿರುದ್ಧ ಹೈಕಮಾಂಡ್ ಗೆ ಅಹಿಂದ ದೂರು :ಮರಿಯಪ್ಪ ಜಾಲಿಹಾಳ

ಬಸನಗೌಡ ಬಾದರ್ಲಿ ವಿರುದ್ಧ ಹೈಕಮಾಂಡ್ ಗೆ ಅಹಿಂದ ದೂರು :ಮರಿಯಪ್ಪ ಜಾಲಿಹಾಳ

ಸಿಂಧನೂರು : ತಾಲೂಕಿನ ಶಾಸಕರಾದ ಹಂಪನಗೌಡ ಬಾದರ್ಲಿ ರಾಜಕಾರಣದ ಇತಿಹಾಸದಲ್ಲಿ ಕೆಳವರ್ಗದ ಯಾವ ಜಾತಿ ಸಮುದಾಯದವರಿಗೂ ಅನ್ಯಾಯ ಮತ್ತು ವಿರೋಧ ಮಾಡಿದವರು ಅಲ್ಲ. ಇವತ್ತಿಗೂ ಶಾಸಕ ಹಂಪನಗೌಡ ಬಾದರ್ಲಿ ಜೊತೆಗೆ ಅಹಿಂದ ವರ್ಗಗಳ ಜನರಿದ್ದಾರೆ. ಇವತ್ತಿನ ರಾಜಕಾರಣದಲ್ಲಿ ಎಂ. ಎಲ್. ಸಿ ಬಸನಗೌಡ ಬಾದರ್ಲಿ ಶಾಸಕ ಹಂಪನಗೌಡ ಬಾದರ್ಲಿಯವರನ್ನು ದಲಿತ ವಿರೋಧಿ ಅಂತ ಆರೋಪ ಮಾಡಿಸಿರುವದು ಖಂಡನೀಯವಾಗಿದೆ.ಶಾಸಕ ಹಂಪನಗೌಡ ಬಾದರ್ಲಿ ಜನಪರ ಮತ್ತು ಅಭಿವೃದ್ಧಿ ಪರ ಆಡಳಿತಕ್ಕೆ ಅಡ್ಡಿ ಪಡಿಸುವದೇ ಎಂ. ಎಲ್. ಸಿ. ಬಸನಗೌಡ ಬಾದರ್ಲಿ ಚಾಳಿಯಾಗಿದೆ. 2028ಕ್ಕೆ ಮತ್ತೆ ಹಂಪನಗೌಡ ಬಾದರ್ಲಿ ಕ್ಷೇತ್ರದ ಶಾಸಕರಾಗುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಮರಿಯಪ್ಪ ಜಾಲಿಹಾಳ ಹೇಳಿದರು

ಗುರುವಾರರoದು ನಗರದ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡುತ್ತಾ ಎಸ್. ಸಿ ಮತ್ತು ಎಸ್. ಟಿ. ಜನ ಸಮುದಾಯಗಳಿಗೆ ಕೊಳವೆಭಾವಿ ಮತ್ತು ಪಂಪ್ ಸೆಟ್ ಮುಂಜೂರಾತಿ ವಿಚಾರದಲ್ಲಿ ಎಂ. ಎಲ್. ಸಿ ಬಸನಗೌಡ ಬಾದರ್ಲಿ ಸುಮ್ಮನೆ ಗೊಂದಲವನ್ನು ಸೃಷ್ಠಿ ಮಾಡಿದ್ದಾರೆ. ಬಸನಗೌಡ ಬಾದರ್ಲಿ ಎಸ್. ಸಿ /ಎಸ್. ಟಿ ಜನರಿಗೆ ಕೊಳವೆ ಭಾವಿ ಮತ್ತು ಪಂಪ್ ಸೆಟ್ ಗಳನ್ನು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿಯವರ ಗಮನಕ್ಕೆ ತರದೆ ಅನ್ಯ ಪಕ್ಷಗಳ ಜನರಿಗೆ ಮುಂಜೂರು ಮಾಡಿಸಲು ಪ್ರಯತ್ನ ಮಾಡಿದ್ದರು.
ಕಳೆದ 2023ರ ಚುನಾವಣೆಯಲ್ಲಿ ಬಸನಗೌಡ ಬಾದರ್ಲಿ ಮತ್ತು ಅವರ ಕಾರ್ಯಕರ್ತರು ಎಲ್ಲಿದ್ದರು? ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಂ. ಎಲ್. ಸಿ ಬಸನಗೌಡ ಬಾದರ್ಲಿಯಿಂದಲೇ ಪಕ್ಷಕ್ಕೆ ಸಾರ್ವಜನಿಕ ಮುಜುಗರ ಮತ್ತು ಹಾನಿಯಾಗುತ್ತಲಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಅಹಿಂದ ಒಕ್ಕೂಟದಿಂದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ದೂರು ನೀಡಲಾಗುವದು. ಮುಂದಿನ ದಿನಗಳಲ್ಲಿ ಕೂಡ ಹಂಪನಗೌಡ ಬಾದರ್ಲಿಯವರೇ ಕ್ಷೇತ್ರದ ಶಾಸಕರು ಆಗುತ್ತಾರೆ. ಅವರ ಹಿಂದೆ ಅಹಿಂದ ವರ್ಗದ ಜನ ಸಮುದಾಯಗಳ ಜನರಿದ್ದಾರೆ ಎಂದರು

ನಂತರ ಕಾಂಗ್ರೆಸ್ ಅರುಣಕುಮಾರ ಯಾಪಲಪರ್ವಿ ಮಾತನಾಡಿ ಈ ಹಿಂದೆ ರಾಗಲ ಪರ್ವಿ ಮತ್ತು ಗೋನು ವಾರ ಜಿಲ್ಲಾ ಮತ್ತು ತಾ.ಪಂ. ಚುನಾವಣೆಗಳಲ್ಲಿ ಎರೆಡು ಕ್ಷೇತ್ರಗಳು ಮೇಲ್ವರ್ಗದ ಜನರ ಸ್ಪರ್ಧೆ ಮೀಸಲಾಗಿದ್ದರು ದಲಿತ ಸಮುದಾಯದವರಿಗೆ ಪಕ್ಷದ ಟಿಕೇಟ್ ನೀಡಿ ಶಾಸಕ ಹಂಪನಗೌಡ ಬಾದರ್ಲಿ ಗೆಲ್ಲಿಸಿದ್ದರು. ಸರೋಜ ವೆಂಕಟೇಶ ರಾಗಲಪರ್ವಿ ಯವರನ್ನು ತಾ.ಪಂ.ಅಧ್ಯಕ್ಷರನ್ನಾಗಿ ಇದೆ ಶಾಸಕ ಹಂಪನಗೌಡ ಬಾದರ್ಲಿ ಹೊರತು ಎಂ. ಎಲ್. ಸಿ ಬಸನಗೌಡ ಬಾದರ್ಲಿ ಅಲ್ಲ ಎಂದು ಹಂಪನಗೌಡ ಬಾದರ್ಲಿಗೆ ದಲಿತ ವಿರೋಧಿ ಎಂಬ ಹೇಳಿಕೆಗೆ ತಿರುಗೇಟು ನೀಡಿದರು
ಎಂ. ಎಲ್. ಸಿ ಬಸನಗೌಡ ಬಾದರ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಗುರಿತಿಸಿಕೊಂಡ ಕಾರ್ಯಕರ್ತರಿಗೆ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಕೊಡಿಸಿದ್ದಾರೆ ಎನ್ನುವದಕ್ಕೆ ನಮ್ಮಲ್ಲಿ ದಾಖಲೆಗಳಿವೆ. ಶಾಸಕ ಹಂಪನಗೌಡ ಬಾದರ್ಲಿಯವರು ಯಾವ ದೇವರ ಮೇಲೆ ನೆಂಬಿಕೆ ಇಟ್ಟಿದ್ದರೋ ಆ ದೇವರ ಮೇಲೆ ಆಣೆ ಮಾಡಲು ಸಿದ್ದರಿದ್ದಾರೆ. ಎಂ. ಎಲ್. ಸಿ ಬಸನಗೌಡ ಬಾದರ್ಲಿ ಅವರ ನೆಂಬಿ ರುವ ದೇವರ ಮೇಲೆ ಆಣೆ ಮಾಡಲು ಸಿದ್ದರಿದ್ದಾರೆಯೇ? ಎಂದು ಸವಾಲ್ ಹಾಕಿದರು

ಡಾ, ರಾಮಣ್ಣ ಗೋನುವಾರ ಮಾತನಾಡಿ ಎಂ. ಎಲ್. ಸಿ ಬಸನಗೌಡ ಬಾದರ್ಲಿ ಮತ್ತು ಅವರ ಕಾರ್ಯಕರ್ತರು ಫೇಸ್ ಬುಕ್ ಹಾಗೂ ವಾಟ್ಸಪ್ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಹಾಕುವ ಮೂಲಕ ಮತ್ತು ಪತ್ರಿಕಾ ಮಧ್ಯಮಗಳಲ್ಲಿ ಹೇಳಿಕೆಗಳನ್ನು ಕೊಡುವ ಮೂಲಕ ಶಾಸಕ ಹಂಪನಗೌಡ ಬಾದರ್ಲಿ ವಿರುದ್ಧ ಸುಳ್ಳು ಅಪಪ್ರಚಾರ ಮಾಡುತ್ತಿರುವದು ನಾಚಿಕೆಗೇಡಿನ ವಿಷಯವಾಗಿದೆ.ಎಂ. ಎಲ್. ಸಿ ಬಸನಗೌಡ ಬಾದರ್ಲಿ ನೂರು ಜನರಿಗೆ ಬೋರ್ ವೆಲ್ ಮಾಡಿಸಿದ್ದು ಸ್ವಾಗತ. ಆದರೆ ಆ ನೂರು ಪಲಾನುಭವಿಗಳು ಯಾವ ಪಕ್ಷದವರು ಎನ್ನುವದನ್ನು ಸ್ಪಷ್ಟಪಡಿಸಲಿ? ಶಾಸಕ ಹಂಪನಗೌಡ ಬಾದರ್ಲಿ ಎಸ್. ಸಿ/ ಎಸ್. ಟಿ ಜನ ಸಮುದಾಯಗಳ ಜನರಿಗೆ ಅನ್ಯಾಯ ಮಾಡಿದ್ದರೆ ಅವರು ಈ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗುತ್ತಿರಲಿಲ್ಲ. ಹಂಪನಗೌಡ ಬಾದರ್ಲಿ ಕ್ಷೇತ್ರದಲ್ಲಿ ಎಸ್. ಸಿ./ ಎಸ್. ಟಿ ಜನ ಸಮುದಾಯಗಳ ಜನರಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳನ್ನು ಒದಗಿಸಿದ್ದಾರೆ. ಎಂ. ಎಲ್. ಸಿ ಬಸನಗೌಡ ಬಾದರ್ಲಿ ಮಾತೆತ್ತಿದರೆ ನಾನು ರೈತನ ಮಗ? ರೈತನ ಮಗ ರಾಜಕೀಯವಾಗಿ ಬೆಳೆ ಬಾರದ? ಎಂದು ಹೇಳುತ್ತಿದ್ದಾರೆ. ಶಾಸಕ ಹಂಪನಗೌಡ ಬಾದರ್ಲಿ ಸೇರಿದಂತೆ ಕ್ಷೇತ್ರದ ಎಲ್ಲಾ ಹಿರಿಯ ರಾಜಕಾರಣಿಗಳು ರೈತರ ಮಕ್ಕಳೇ ಆಗಿದ್ದಾರೆ. ಎಲ್ಲಾ ಹಿರಿಯ ರಾಜಕಾರಣಿಗಳು ರೈತರ ಹಿತಕ್ಕಾಗಿ ರಾಜಕಾರಣ ಮಾಡಿದ್ದಾರೆ ಎನ್ನುವದು ನೆನಪಿಟ್ಟುಕೊಳ್ಳಲಿ ಎಂದು ತಿರುಗೇಟು ನೀಡಿದರು

ಎಂ. ಎಲ್. ಸಿ ಬಸನಗೌಡ ಬಾದರ್ಲಿ ಜೊತೆಗಿರುವ ಕಾರ್ಯಕರ್ತರೆಲ್ಲರೂ ಬಿಜೆಪಿ. ಜೆಡಿಎಸ್ ಪಕ್ಷಗಳಲಿದ್ದವರು ಹೊರತು ಅವರೆಲ್ಲ ಕಾಂಗ್ರೆಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಲ್ಲ. ಅವರೆಲ್ಲ ಅವಕಾಶವಾದಿಗಳು. ಅಂತವರನ್ನು ಹತ್ತಿರ ಇಟ್ಟುಕೊಂಡು ಎಂ.ಎಲ್.ಸಿ ಬಸನಗೌಡ ಬಾದರ್ಲಿ ರಾಜಕಾರಣ ಮಾಡುವದು ತೋರಿಕೆಗೆ ವಿನಃಹ ಕ್ಷೇತ್ರದಲ್ಲಿ ಜನಪರ ಕೆಲಸಗಳನ್ನು ಮಾಡಲು ಅಲ್ಲ ಎಂದರು

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್. ಅಂಬ್ರುಸ್, ವೈ, ಅಶೋಕ ಉಮಲೂಟಿ ಮುಖಂಡರಾದ ಅಮರಯ್ಯ ವಲ್ಕoದಿನ್ನಿ, ಸುಭಾಸ್ ಪ್ರಾಂಕ್ಲಿನ್, ನೆರಸಪ್ಪ ಕಟ್ಟಿಮನಿ, ಬಿ.ಹೆಚ್. ನಾಯಕ, ಅನಿಲಕುಮಾರ. ವೈ, ನಾಗರಾಜ ರಾಮಾತ್ನಾಳ, ಹನುಮಂತ ಬೂದಿಹಾಳ, ಶರಣಬಸವ ಮಲ್ಲಾಪುರು, ಶೇಖರಪ್ಪ ದುಮುತಿ, ರಾಮಣ್ಣ ಸಾಸಲಮರಿ, ಹನುಮಂತ ಗೋಮಾರ್ಶಿ, ಮೌಲಪ್ಪ ಮಾಡಸಿರಿವಾರ, ಸೇರಿದಂತೆ ಕಾಂಗ್ರೆಸ್ ಪಕ್ಷದ ಅಹಿಂದ ವರ್ಗದ ಮುಖಂಡರುಗಳು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles