14.7 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಬೆಂಗಳೂರಿನಲ್ಲಿ ಎಸ್.ಕೆ.ಎ.ಕೆಯಿಂದ ಎರಡು ದಿನಗಳ ರಾಜ್ಯಮಟ್ಟದ ಕರಾಟೆ ಕ್ರೀಡಾಕೂಟ ಆರಂಭ

ಬೆಂಗಳೂರಿನಲ್ಲಿ ಎಸ್.ಕೆ.ಎ.ಕೆಯಿಂದ ಎರಡು ದಿನಗಳ ರಾಜ್ಯಮಟ್ಟದ ಕರಾಟೆ ಕ್ರೀಡಾಕೂಟ ಆರಂಭ

ಬೆಂಗಳೂರು: ಅಖಿಲ ಭಾರತ ಕರಾಟೆ ಡು ಫೆಡರೇಶನ್ನಿಂದ ಗುರುತಿಸಲ್ಪಟ್ಟ ಏಕೈಕ ಅಧಿಕೃತ ಸಂಸ್ಥೆ ಎಸ್.ಕೆ.ಎ.ಕೆಯಿಂದ ಬೆಂಗಳೂರಿನ ಕೆಎಂಎಸ್ಕೆಎಸ್ಐನಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಕರಾಟೆ ಕ್ರೀಡಾಕೂಟ ನಡೆಯುತ್ತಿದೆ.
ಎಐಕೆಎಫ್ ಉಪಾಧ್ಯಕ್ಷ, ಕರ್ನಾಟಕ ಕ್ರೀಡಾ ಕರಾಟೆ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ರೆಂಶಿ ಆರ್.ಗಣೇಶ್ ಚಾಂಪಿಯನ್ಶಿಪ್ ಗೆ ಚಾಲನೆ ನೀಡಿದರು.
ಬಳಿಕ ರೈನ್ ಶಿ. ಆರ್. ಗಣೇಶ್ ಮಾತನಾಡಿ, ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತಿದ್ದು, ಸುಮಾರು 600 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಪ್ರಶಸ್ತಿ ಗೆದ್ದವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುತ್ತಾರೆ. ಚಾಂಪಿಯನ್ಶಿಪ್ ನಲ್ಲಿ ಸುಮಾರು 170 ಕ್ಕೂ ಹೆಚ್ಚು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
ಬೆಂಗಳೂರು ಇಂಟರ್ನ್ಯಾಷನ್ ಕರಾಟೆ ಅಕಾಡೆಮಿಯ ಪ್ರಾಂಶುಪಾಲ ಡಾ.ಆರೋಗ್ಯ ರಾಜ್ ಮಾತನಾಡಿ, ರೆನ್ಸಿ ಆರ್.ಗಣೇಶ್ ಮಕ್ಕಳಿಗೆ ಸ್ವಯಂ ರಕ್ಷಣೆಯ ಕರಾಟೆ ಕಲಿಸಿಕೊಡುವ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.
ಬ್ಲಾಕ್ ಬೆಲ್ಟ್ ಕರಾಟೆ ಪಟು ರಮ್ಯಾ ಮಾತನಾಡಿ, ಈ ಚಾಂಪಿಯನ್ ಶಿಪ್ನಲ್ಲಿ ಹೆಚ್ಚಾಗಿ ಹೆಣ್ಣುಮಕ್ಕಳು ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರ. ಸ್ ರಕ್ಷಣೆಗೆ ಕರಾಟೆಯನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತವಾಗಿದೆ ಎಂದರು.
ಬ್ಲಾಕ್ ಬೆಲ್ಟ್ ಕರಾಟೆ ಪಟು ಜನನಿ ತಂದೆ ಶರವಣ ಮಾತನಾಡಿ, ನನ್ನ ಮಗಳಿಗೆ ಹಿಂಜರಿಕೆ ಇತ್ತು ಹಾಗಾಗಿ ಕರಾಟೆಗೆ ಸೇರಿಸಿದೆ, ಈ ಕರಾಟೆ ಕಲಿತು ಓದಿನಲ್ಲು ಉತ್ತಮ ಸಾಧನೆ ಮಾಡುತ್ತಿದ್ದಾಳೆ ಎಂದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles