15.4 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಬೆಂಗಳೂರು ಇಂಡಿಯಾ ನ್ಯಾನೋ ಸಮಾವೇಶ ಆಗಸ್ಟ್ 3ರಿಂದ

ಕೃತಕ ಬುದ್ಧಿಮತ್ತೆ–ನ್ಯಾನೋ ತಂತ್ರಜ್ಞಾನ ಸಂಯೋಜನೆಗೆ ಜಾಗತಿಕ ವೇದಿಕೆ

ಬೆಂಗಳೂರು, ಜುಲೈ 25: ನ್ಯಾನೋ ತಂತ್ರಜ್ಞಾನ ಕ್ಷೇತ್ರದ ದೇಶದ ಅತಿದೊಡ್ಡ ಹಾಗೂ ಸಮಗ್ರ ಅಂತರರಾಷ್ಟ್ರೀಯ ಸಮ್ಮೇಳನ ಮತ್ತು ಪ್ರದರ್ಶನವಾಗಿರುವ 14ನೇ ಬೆಂಗಳೂರು ಇಂಡಿಯಾ ನ್ಯಾನೋ ಸಮಾವೇಶ ಇದೇ ಆಗಸ್ಟ್ 3ರಿಂದ 5ರವರೆಗೆ ನಗರದ ದಿ ಲಲಿತ್ ಹೋಟೆಲ್ ನಲ್ಲಿ ನಡೆಯಲಿದೆ.

ಈ ಬಾರಿಯ ಸಮಾವೇಶದ ಧ್ಯೇಯ “ನ್ಯಾನೋ ತಂತ್ರಜ್ಞಾನದ ಮುಂದಿನ ಗಡಿ: ಕೃತಕ ಬುದ್ಧಿಮತ್ತೆ ಮತ್ತು ಅದರಾಚೆಗೆ – ಪರಿಕಲ್ಪನೆ, ಸಮನ್ವಯ, ವಾಣಿಜ್ಯೀಕರಣ” ಆಗಿದ್ದು, ನ್ಯಾನೋ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಸಂಯೋಜನೆಯ ಮೂಲಕ ಭವಿಷ್ಯದ ತಂತ್ರಜ್ಞಾನ ಅಭಿವೃದ್ಧಿಗೆ ಹೊಸ ದಿಕ್ಕು ತೋರಿಸುವ ಉದ್ದೇಶ ಹೊಂದಿದೆ.

ಸಮಾವೇಶದಲ್ಲಿ ದೇಶ–ವಿದೇಶಗಳ ಖ್ಯಾತ ವಿಜ್ಞಾನಿಗಳು, ಕೈಗಾರಿಕಾ ವಲಯದ ಪ್ರಮುಖರು, ನವೋದ್ಯಮ ಸಂಸ್ಥೆಗಳು, ಹೂಡಿಕೆದಾರರು, ನೀತಿ ನಿರೂಪಕರು ಹಾಗೂ ತಂತ್ರಜ್ಞಾನ ತಜ್ಞರು ಭಾಗವಹಿಸಿ ಸಂಶೋಧನೆ, ನಾವೀನ್ಯತೆ ಮತ್ತು ವಾಣಿಜ್ಯೀಕರಣ ಕುರಿತಂತೆ ಚರ್ಚಿಸಲಿದ್ದಾರೆ. ನ್ಯಾನೋ ತಂತ್ರಜ್ಞಾನ ಆಧಾರಿತ ಸಂಶೋಧನೆಗಳನ್ನು ಕೈಗಾರಿಕಾ ಉತ್ಪನ್ನಗಳಾಗಿ ರೂಪಿಸುವತ್ತ ಸಮಾವೇಶ ಮಹತ್ವದ ವೇದಿಕೆಯಾಗಲಿದೆ.

ಪೂರ್ವಭಾವಿ ಕಾರ್ಯಕ್ರಮ

ಸಮಾವೇಶದ ಪೂರ್ವಭಾವಿ ಕಾರ್ಯಕ್ರಮವು ಶನಿವಾರ ವಿಧಾನಸೌಧದಲ್ಲಿ ನಡೆಯಿತು. ಗೃಹ, ಐಟಿ-ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ, ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್., ನ್ಯಾನೋ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷ ಪ್ರೊ. ನವಕಾಂತ ಭಟ್, ಕೇಂದ್ರ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಪ್ರೊ. ಅನಿಲ್ ಕುಮಾರ್ ಪಿ.ಎಸ್. ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ದೂರದೃಷ್ಟಿಯ ನೀತಿಗಳು ಮತ್ತು ಕೈಗಾರಿಕಾ ಸಹಭಾಗಿತ್ವದ ಮೂಲಕ ಕರ್ನಾಟಕವು ವಿಜ್ಞಾನ ಕ್ಷೇತ್ರದಲ್ಲಿ ಹೊಸ ಸಾಧನೆಗಳನ್ನು ಮಾಡುತ್ತಿದ್ದು, ಅತ್ಯಾಧುನಿಕ ಸಂಶೋಧನೆಗಳನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಉತ್ಪನ್ನಗಳು ಹಾಗೂ ಜನಜೀವನ ಸುಧಾರಿಸುವ ಪರಿಹಾರಗಳಾಗಿ ರೂಪಿಸುವ ಪರಿಸರ ವ್ಯವಸ್ಥೆ ನಿರ್ಮಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಕಾರ್ಯದರ್ಶಿ ಡಾ. ಮಂಜುಳಾ ಎನ್. ಮಾತನಾಡಿ, ನ್ಯಾನೋ ವಿಜ್ಞಾನ ಸಂಶೋಧನೆಗಳನ್ನು ವಾಸ್ತವ ಜಗತ್ತಿನ ತಂತ್ರಜ್ಞಾನಗಳಾಗಿ ರೂಪಿಸುವಲ್ಲಿ ಈ ಸಮಾವೇಶ ಮಹತ್ವದ ಪಾತ್ರ ವಹಿಸುತ್ತಿದ್ದು, ಕರ್ನಾಟಕವನ್ನು ನ್ಯಾನೋ ತಂತ್ರಜ್ಞಾನ ಕ್ಷೇತ್ರದ ಜಾಗತಿಕ ನಾವೀನ್ಯತಾ ಕೇಂದ್ರವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ವೈವಿಧ್ಯಮಯ ಕಾರ್ಯಕ್ರಮಗಳು

ಆಗಸ್ಟ್ 3ರಂದು ಸಮ್ಮೇಳನ ಪೂರ್ವ ವಿಶೇಷ ಕಾರ್ಯಾಗಾರ ನಡೆಯಲಿದ್ದು, ನ್ಯಾನೋ ತಯಾರಿಕೆ, ನ್ಯಾನೋ ವಿಶ್ಲೇಷಣೆ ಹಾಗೂ ಜೈವಿಕ ವಿಜ್ಞಾನದಲ್ಲಿ ನ್ಯಾನೋ ತಂತ್ರಜ್ಞಾನದ ಬಳಕೆ ಕುರಿತು ತರಬೇತಿ ನೀಡಲಾಗುತ್ತದೆ.

ಆಗಸ್ಟ್ 4 ಮತ್ತು 5ರಂದು ನಡೆಯುವ ಮುಖ್ಯ ಸಮ್ಮೇಳನದಲ್ಲಿ ಸೆಮಿಕಂಡಕ್ಟರ್ ಕೃಷಿ ಮತ್ತು ಆರೋಗ್ಯ, ಹಾಗೂ ಇಂಧನ ಮತ್ತು ಪರಿಸರ ಕ್ಷೇತ್ರಗಳಲ್ಲಿ ನ್ಯಾನೋ ತಂತ್ರಜ್ಞಾನದ ಬಳಕೆಯ ಕುರಿತು ವಿಶೇಷ ಅಧಿವೇಶನಗಳು ನಡೆಯಲಿವೆ.

ನವೋದ್ಯಮಿಗಳಿಗೆ ವಿಶೇಷ ಅವಕಾಶ

‘ನ್ಯಾನೋ ಸ್ಪಾರ್ಕ್ಸ್ ಸ್ಟಾರ್ಟ್‌ಅಪ್ ಪಿಚಿಂಗ್‘ ಕಾರ್ಯಕ್ರಮದ ಮೂಲಕ ನವೋದ್ಯಮ ಸಂಸ್ಥೆಗಳು ತಮ್ಮ ಆವಿಷ್ಕಾರಗಳನ್ನು ಹೂಡಿಕೆದಾರರ ಮುಂದೆ ಪ್ರಸ್ತುತಪಡಿಸುವ ಅವಕಾಶ ಪಡೆಯಲಿವೆ. ಜೊತೆಗೆ ‘ನ್ಯಾನೋ ನಾವೀನ್ಯತೆ ಪ್ರಶಸ್ತಿ‘ ಮೂಲಕ ಭರವಸೆಯ ನವೋದ್ಯಮಿಗಳು ಮತ್ತು ಸಾಧಕರನ್ನು ಗೌರವಿಸಲಾಗುತ್ತದೆ.

ಯುವ ಸಂಶೋಧಕರಿಗೆ ಉತ್ತೇಜನ

‘ಯುವಕರಿಗಾಗಿ ನ್ಯಾನೋ’, ನ್ಯಾನೋ ರಸಪ್ರಶ್ನೆ ಹಾಗೂ ‘ಅನ್ವೇಷಣೆಯ ಪಥ’ ಸಂಶೋಧನಾ ಪ್ರಬಂಧ ಪ್ರದರ್ಶನದ ಮೂಲಕ ಯುವ ಸಂಶೋಧಕರು ತಮ್ಮ ಸಂಶೋಧನೆಗಳನ್ನು ಪ್ರದರ್ಶಿಸಿ ತಜ್ಞರೊಂದಿಗೆ ನೇರ ಸಂವಾದ ನಡೆಸುವ ಅವಕಾಶ ಪಡೆಯಲಿದ್ದಾರೆ.

ಸಮಾವೇಶದ ವಿಶೇಷತೆಗಳು

  • 26ಕ್ಕೂ ಹೆಚ್ಚು ತಾಂತ್ರಿಕ ಅಧಿವೇಶನಗಳು
  • 200ಕ್ಕೂ ಹೆಚ್ಚು ವೈಜ್ಞಾನಿಕ ಸಂಶೋಧನಾ ಪ್ರಬಂಧಗಳು
  • 80ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ತಜ್ಞ ಭಾಷಣಕಾರರು
  • 1,000ಕ್ಕೂ ಹೆಚ್ಚು ಪ್ರತಿನಿಧಿಗಳ ಭಾಗವಹಿಸುವಿಕೆ
  • 10ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು
  • 50ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳು

ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಹೆಚ್ಚಿನ ಮಾಹಿತಿಗಾಗಿ www.bengaluruindianano.in ವೆಬ್‌ತಾಣಕ್ಕೆ ಭೇಟಿ ನೀಡಬಹುದು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles