ಯಾದಗಿರಿ: ರೈತರನ್ನು ನಂಬಿಸಿ ಅವರಲ್ಲಿದ್ದ ಒಂದು ಕೋಟಿ ತೊಂಬತ್ತು ಮೂರು ಲಕ್ಷದ ನಲವತ್ತೆರಡುಸಾವಿರ (1,93,42000 ) ರೂಪಾಯಿ ಮೌಲ್ಯದ 129 23 ಪ್ಯಾಕೆಟ್ ಗಳು ಖರೀದಿಸಿದ ದಲ್ಲಾಳಿ ಒಬ್ಬರು ಈಗ ನಾಪತ್ತೆಯಾಗಿದ್ದು, ಅವರನ್ನು ಕೂಡಲೆ ಬಂಧಿಸಿ ನಮಗೆ ತಮಗೆ ಬರಬೇಕಾದ ಹಣವನ್ನು ದೊರಕಿಸಿ ಕೊಡುವಂತೆ ಹುಣಸಿಗಿ ತಾಲೂಕಿನ ಬೈಚಬಾಳ, ಕೂಡಲಿ, ಕರಡಕಲ್, ಗ್ರಾಮಗಳ 40 ರೈತರು ಶನಿವಾರ ಸಂಜೆ ಹೆಚ್ಚುವರಿ ಎಸ್ ಪಿ ಧರಣೇಶ್ ರವರಿಗೆ ದೂರು ನೀಡಿದ್ದಾರೆ.
ಕರಡಕಲ್ ಕ್ಯಾಂಪಿನ ಶ್ರೀನಿವಾಸ ರೆಡ್ಡಿ, ಸತ್ಯನಾರಾಯಣ ಹಾಗೂ ಕನ್ನಳ್ಳಿ ಕ್ಯಾಂಪಿನ ಪ್ರಸಾದ್, ಪ್ರೇಮ್ ರೆಡ್ಡಿ ,ಕೊಂಡಯ್ಯ, ವೆಂಕಿ, ಮುರಳಿ, ತ್ರಿಮೂರ್ತಿ ರವರ ವಿರುದ್ಧ ನೀಡಲಾಗಿದೆ. ಪ್ರತಿ ವರ್ಷ ಈ ರೈತರಿಂದ ಭತ್ತವನ್ನು ಖರೀದಿಸಿ. ತಿಂಗಳ ನಂತರ ಹಣ ಮುಟ್ಟಿಸುವ ಈ ದಲ್ಲಾಳಿಗಳು. ಕಳೆದ ಎರಡು ತಿಂಗಳಿಂದ ಆಗಮಿಸಿ , ರೈತನರನ್ನು ಭೇಟಿ ಮಾಡಿ ಭತ್ತ ಖರೀದಿಸಿ ಅದಕ್ಕೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ದರ ನಿಗದಿಗೊಳಿಸಿ ಒಟ್ಟು ಒಂದು ಕೋಟಿ ತೊಂಬತ್ತು ಮೂರು ಲಕ್ಷದ ನಲವತ್ತೆರಡು ಸಾವಿರದ ರೂಪಾಯಿ ಮೌಲ್ಯದ ಹನ್ನೆರಡು ಸಾವಿರದ ಒಂಬೈನೂರು ಇಪ್ಪತ್ತು ಮೂರು ಪಾಕೆಟ್ ಭತ್ತವನ್ನು 35 ಲಾರಿಗಳಲ್ಲಿ ತುಂಬಿಕೊಂಡು ಹೋಗಿದ್ದಾರೆ. ಐದು ಆರು ವರ್ಷಗಳ ಹಿಂದೆ ಇವರೇ ಖರೀದಿಸಿ ನಂತರ ದುಡ್ಡು ಕೊಡುತ್ತಿದ್ದ ಶ್ರೀನಿವಾಸ್ ರೆಡ್ಡಿ ಮತ್ತು ಇತರರನ್ನು ನಂಬಿ ರೈತರು ಮಾರಾಟ ಮಾಡಿದ್ದಾರೆ. ಈಗ ಹಣ ಕೊಡುವ ಸಮಯದಲ್ಲಿ ಅವನು ಮತ್ತು ಅವನ ಜೊತೆ ಇರುವವರು ಎಲ್ಲಿದ್ದಾರೋ ಗೊತ್ತಿಲ್ಲ. ಅವರು ಬಂದ ನಂತರ ಹಣದ ಲೆಕ್ಕಪತ್ರ ಮಾಡುವುದಾಗಿ ಕನ್ನಳ್ಳಿ ಕ್ಯಾಪಿನಲ್ಲಿರುವ ದಲ್ಲಾಳಿಗಳು ಹೇಳುತ್ತಾ ಕಾಲ ಹರಣ ಮಾಡುತ್ತಿದ್ದಾರೆಂದು ರೈತರು ವಿವರಿಸಿದ್ದಾರೆ.
ಮೋಸ ಹೋದ ರೈತರು
ರೈತರಾದ ಶಾಂತಪ್ಪ ಮಾದರ್, ಬಂದೆ ನವಾಜ್, ಪರಶುರಾಮ್ ದೊಡ್ಡಮನಿ, ಹಳ್ಳೆಪ್ಪ ಪೂಜಾರಿ, ಸಣ್ಣಲಿಂಗಣ್ಣ ಐಕೂರ್, ಅಂಬರೀಶ್ ಸಗರ, ಪ್ರಶಾಂತ ತತಾ, ದ್ಯಾವಪ್ಪ ಮಾಲಹಳ್ಳಿ, ತಿರುಪತಿ ಅಮ್ಮಪುರ, ವೆಂಕೋಬ ಉಜರತ್ತಿ, ಯಂಕು ಬಿರಾದಾರ್, ರೇವಣಸಿದ್ದಪ್ಪ. ಬಿಳೆಬಾವಿ, ಸುರೇಶ್ ಬಿರೇದಾರ್, ಬಸವರಾಜ್ ಮಾಲಿ ಪಾಟೀಲ್, ಆನಂದ ಗೌಡ ಬಿರಾದಾರ್, ಬಲ ಭೀಮ ಗೂಡದನಾಳ, ಭೀಮಣ್ಣ ಶೆಟ್ಟಿ, ಕೂಡ್ಲಿಗಪ್ಪ ಕೈತೋಟ, ಶಿವಣ್ಣ ಪೂಜಾರಿ, ಶಂಕ್ರಪ್ಪ ಇಸ್ಲಾಂಪುರ್, ವೆಂಕು ಗೌಡ ಬಿರಾದಾರ್, ಶಂಕ್ರಪ್ಪ ಶೆಟ್ಟಿ ಬೈಚಬಾಳ, ಮಲ್ಲನಗೌಡ ಬಿರಾದಾರ್, ಭೀಮರಾಯ ಬಾಗಲಿ, ಬಸವರಾಜ್ ತತ್ರ, ಶಾಂತಪ್ಪ ಐಕುರ್, ಸಂಗನಗೌಡ ಬಿರಾದಾರ್, ಭೀಮಣ್ಣ, ವೀರೇಶ, ಮಾನಯ್ಯ, ಅವರು ದೂರಿಗೆ ರುಜು ಹಾಕಿ ಮನವಿ ಸಲ್ಲಿಸಿದ್ದಾರೆ.
ಆಂಧ್ರ ಮೂಲದ ವಲಸೆ ರೈತ ಆರ್ ಶ್ರೀನಿವಾಸ್, ಸತ್ಯನಾರಾಯಣ, ಇವನ ಅಳಿಯನಾದ ಪ್ರೇಮರೆಡ್ಡಿ, ಪ್ರಸಾದ್ ರೆಡ್ಡಿ, ಕೊಂಡಯ್ಯ ರೆಡ್ಡಿ, ಮುರಳಿ, ವೆಂಕಿ, ತ್ರಿಮೂರ್ತಿ ರೆಡ್ಡಿ, ಇವರೆಲ್ಲರೂ ವ್ಯವಹಾರ ಮಾಡುತ್ತೇವೆ ಎಂದು ನಂಬಿಸಿ ಭತ್ತ ಖರೀದಿ ಮಾಡಿದ್ದಾರೆಂದು ದೂರಿನಲ್ಲಿ ನೊಂದ ರೈತರು ಉಲ್ಲೇಖಿಸಿದ್ದಾರೆ.

