14.6 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಮಟ್ಟೂರು ಗ್ರಾಮಸಭೆಯಲ್ಲಿ PDO ವಿರುದ್ಧ ಗ್ರಾಮಸ್ಥರ ಆಕ್ರೋಶ.

📰 ಮಟ್ಟೂರು ಗ್ರಾಮಸಭೆಯಲ್ಲಿ PDO ವಿರುದ್ಧ ಗ್ರಾಮಸ್ಥರ ಆಕ್ರೋಶ

ಮುದಗಲ್‌:
ಸಮೀಪದ ಮಟ್ಟೂರು ಗ್ರಾಮದಲ್ಲಿ ನಡೆದ ಗ್ರಾಮಸಭೆ ಹಾಗೂ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ ಜನರ ಆಕ್ರೋಶಕ್ಕೆ ವೇದಿಕೆಯಾಯಿತು. ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ವಿವರ ನೀಡುವಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಹಿಂಜರಿದ ಹಿನ್ನೆಲೆಯಲ್ಲಿ ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

15ನೇ ಹಣಕಾಸು ಯೋಜನೆ, ನಗರ ಗಾಂಧಿ ಕಾಮಗಾರಿಗಳು ಸೇರಿದಂತೆ ಕಳೆದ ಕೆಲ ತಿಂಗಳಲ್ಲಿ ಕೈಗೊಂಡ ಕಾಮಗಾರಿಗಳ ಸಂಪೂರ್ಣ ಮಾಹಿತಿ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದರು. ಆದರೆ PDO ಸ್ಪಷ್ಟನೆ ನೀಡದ ಕಾರಣ ಸಭೆಯಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಗ್ರಾಮಸ್ಥರು, “ಕಾಮಗಾರಿಗಳ ಗುಣಮಟ್ಟ ಕುಸಿತವಾಗಿದೆ, ಹಣ ಬಳಸಿದ ವಿವರ ನೀಡಲಾಗುತ್ತಿಲ್ಲ, ಪಾರದರ್ಶಕತೆ ಕಾಣುತ್ತಿಲ್ಲ. ಜನರ ಹಣ ವ್ಯರ್ಥವಾಗುತ್ತಿದೆ. ಅಧಿಕಾರಿಗಳು ಜನರ ಮುಂದೆ ಲೆಕ್ಕ ಹೇಳಲೇಬೇಕು” ಎಂದು ಗಟ್ಟಿಯಾಗಿ ಅಭಿಪ್ರಾಯಪಟ್ಟರು.

ಸಭೆಯಲ್ಲಿ ಪಂಚಾಯಿತಿ ಸದಸ್ಯರು– ಜೈ…ನೋಡಲ್ ಅಧಿಕಾರಿಗಳು ಗೈರುಹಾಜರಿದ್ದರು.

ಸಭೆಯ ಆರಂಭದಲ್ಲಿ PDO ನಡವಳಿಕೆಗಳನ್ನು ನೀಡಿದದೆ ಜನರಿಂದ ಸಹಿ ಮಾಡಿಸಿಕೊಂಡರು ಉತ್ತರಗಳಿಂದ ತೃಪ್ತಿಗೊಳ್ಳದೇ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ಸಭೆಗಳಲ್ಲಿ ಜನರ ಮುಂದೆ ಸಂಪೂರ್ಣ ವಿವರ ನೀಡದೇ ಇದ್ದರೆ ಗಂಭೀರ ನಿರ್ಧಾರಕ್ಕೆ ಮುಂದಾಗುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.

ವರದಿ-ಶರಣಪ್ಟ.ನಂದವಡಗಿ. ಮಟ್ಟೂರ


Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles