15.1 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಮರಕುಂಬಿಯ ಇನಾಂದಾರ್ ಶುಗರ್ಸನಲ್ಲಿ ಬಾಯ್ಲರ್ ಸ್ಪೋಟ 3 ಕಾರ್ಮಿಕರ ದುರ್ಮರಣ 5 ಕಾರ್ಮಿಕರ ಸ್ಥಿತಿ ಚಿಂತಾಜನಕ…

ಮರಕುಂಬಿಯ ಇನಾಂದಾರ್ ಶುಗರ್ಸನಲ್ಲಿ ಬಾಯ್ಲರ್ ಸ್ಪೋಟ 3 ಕಾರ್ಮಿಕರ ದುರ್ಮರಣ 5 ಕಾರ್ಮಿಕರ ಸ್ಥಿತಿ ಚಿಂತಾಜನಕ…

ಮುರಗೋಡ: ಮರಕುಂಬಿ: ದಿನಾಂಕ 07.01.2026 ರಂದು ೦1.30 ಗಂಟೆ ಸುಮಾರಿಗೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಉಪವಿಭಾಗದ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಮರಕುಂಬಿ ಗ್ರಾಮದ ಇನಾಮ್ಹಾರ್ ಶುಗರ್ಸ್ ಫ್ಯಾಕ್ಟರಿಯಲ್ಲಿ ಜ್ಯೂಸ್ ಬಾಯಿಲಿಂಗ್ ಹೌಸ್ ಕುದಿಯುವ ಕಬ್ಬಿನದ ಹಾಲು ಸಿಡಿದು ಎಂಟು ಜನ ಕಾರ್ಮಿಕರಿಗೆ ತೀವ್ರ ಗಾಯವಾಗಿದ್ದು. ಸದರಿಯವರನ್ನು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಕುರಿತು ದಾಖಲಿಸಿ ಉಪಚಾರ ಹೊಂದುತ್ತಿದ್ದಾಗ ಒಬ್ಬ ಕಾರ್ಮಿಕ ಹಾಗೂ ಇನ್ನಿಬ್ಬರು KLE ಆಸ್ಪತ್ರೆ ಬೆಳಗಾವಿಯಲ್ಲಿ ಮೃತರಾಗಿರುತ್ತಾರೆ. ಇನ್ನುಳಿದ 05 ಜನರನ್ನು ಪ್ರಥಮ ಚಿಕಿತ್ಸೆ ಮಾಡಿಸಿ ಹೆಚ್ಚಿನ ಉಪಚಾರ ಕುರಿತು KLE ಆಸ್ಪತ್ರೆ ಬೆಳಗಾವಿಯಲ್ಲಿ ದಾಖಲು ಮಾಡಲಾಗಿದೆ. ಪೊಲೀಸ್ ಅಧೀಕ್ಷಕರು, ಬೆಳಗಾವಿ ರವರು KLE ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿರುತ್ತಾರೆ. ಡಿಎಸ್‌ಪಿ ರಾಮದುರ್ಗ ಹಾಗೂ ಪಿಐ ಮುರಗೋಡ ರವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದು ಸದರಿ ಘಟನೆಗೆ ಸಂಬಂಧಪಟ್ಟಂತೆ ಮುರಗೋಡ ಠಾಣೆಯ ಪೊಲೀಸ್‌ರು ತನಿಖೆ ಕಾರ್ಯ ನಿರ್ವಹಿಸುತ್ತಿದ್ದಾರೆ…

ಮೃತರು ವಿವರಣೆ-

  1. ಅಕ್ಷಯ ಸುಭಾಷ ಚೋಪಡೆ ವಯಸ್ಸು: 48 ಸಾ॥ ಚಾವಡಿ ಗಲ್ಲಿ ರಬಕವಿ ತಾ|| ರಬಕವಿ-ಬನಹಟ್ಟಿ (ಬೈಲಹೊಂಗಲ ಸರ್ಕಾರಿ ಆಸ್ಪತ್ರೆಯಲ್ಲಿ)
  2. ಸುರ್ದಶನ ಮಹಾದೇವ ಬನೋಶಿ ವಯಸ್ಸು:25 ಸಾ॥ ಚಿಕ್ಕಮುನವಳ್ಳಿ ತಾ।। ಖಾನಾಪೂರ(KLE ಆಸ್ಪತ್ರೆ ಬೆಳಗಾವಿಯಲ್ಲಿ)
  3. ದೀಪಕ ನಾಗಪ್ಪ ಮುನವಳ್ಳಿ ವಯಸ್ಸು:32 ಸಾ|| ನೇಸರಗಿ ತಾ॥ ಬೈಲಹೊಂಗಲ (KLE ಆಸ್ಪತ್ರೆ ಬೆಳಗಾವಿಯಲ್ಲಿ)

ಗಾಯಾಳುಗಳ ವಿವರಣೆ –

  1. ಮಂಜುನಾಥ ಗೋಪಾಲ ತೇರದಾಳ.ವಯಸ್ಸು 31 ವರ್ಷ, ಸಾ॥ ಹೂಲಿಕಟ್ಟಿ ತಾ॥ ಅಥಣಿ
  2. ರಾಘವೇಂದ್ರ ಮಲ್ಲಪ್ಪ ಗಿರಿಯಾಳ, ವಯಸ್ಸು 36 ವರ್ಷ. ಸಾ।। ಗಿಳಿಹೊಸುರ ತಾ।। ಗೋಕಾಕ
  3. ಗುರುಪಾದಪ್ಪ ಬೀರಪ್ಪ ತಮ್ಮಣ್ಣವರ, ವಯಸ್ಸು 38 ವರ್ಷ, ಸಾ।। ಮರೆಗುದ್ದಿ, ತಾ।। ಜಮಖಂಡಿ
  4. ಭರತೇಶ ಬಸಪ್ಪ ಸಾರವಾಡಿ. ವಯಸ್ಸು 27 ವರ್ಷ, ಸಾ॥ ಗೊಡಚಿನಮಲ್ಕಿ ತಾ|| ಗೋಕಾಕ
  5. ಮಂಜುನಾಥ ಮಡಿವಾಳಪ್ಪ ಕಾಜಗಾರ, ವಯಸ್ಸು 28 ವರ್ಷ, ಸಾ॥ ಅರವಳ್ಳಿ ತಾ।। ಬೈಲಹೊಂಗಲ
    ಎಲ್ಲರೂ ಕೆ.ಎಲ್.ಇ ಆಸ್ಪತ್ರೆ ಬೆಳಗಾವಿಯಲ್ಲಿ ಉಪಚಾರ ನಡೆಯುತ್ತಿದೆ ಎಂದು ಮಾಧ್ಯಮಗಳ ಮೂಲಕ ಮಾಹಿತಿ ಒದಗಿಸಿದರು…

ವರದಿಗಾರು: ರಾಮಚಂದ್ರಪ್ಪ ಪೂಜೇರ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles