15.4 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

“””ಮಾಗಣಗೇರಿಯ ಮಾಣಿಕ್ಯ”” “”ಎರಡು ತಾಲೂಕುಗಳ ಅನ್ನದಾತ”

“”””ಮಾಗಣಗೇರಿಯ ಮಾಣಿಕ್ಯ”” “”ಎರಡು ತಾಲೂಕುಗಳ ಅನ್ನದಾತ”

“”ದಿ: ಶ್ರೀ ಭೀಮರಾಯಗೌಡ ಬಿರಾದಾರ ಅವರ 2ನೇ ವರ್ಷದ ಪುಣ್ಯಸ್ಮರಣೆಯ ಭಕ್ತಿ ಪೂವ೯ಕ ಪ್ರಣಾಮಗಳು “”

ಭೀಮರಾಯಗೌಡರು ಕೇವಲ ಹೆಸರಿಗಷ್ಟೇ ಶ್ರೀಮಂತರಾಗಿರಲಿಲ್ಲ ಅವರು ಮಾಗಣಗೇರಿ ಗ್ರಾಮದ ಪ್ರತಿಯೊಬ್ಬ ಬಡವನ ಕಷ್ಟಕ್ಕೆ ಹೆಗಲಾದವರು…..

ಅವರ ಪ್ರಭಾವ ಕೇವಲ ಅವರ ಊರಿಗೆ ಸೀಮಿತವಾಗಿರಲಿಲ್ಲ. ಸಿಂದಗಿ ಮತ್ತು ಜೇವ೯ಗಿ ಎರಡು ತಾಲೂಕುಗಳ ಯಾವುದೇ ಹಳ್ಳಿಗಳಲ್ಲಿ ಕಷ್ಟವೆಂದು ಬಂದವರಿಗೆ ಅವರು ಜಾತಿ-ಮತ ನೋಡದೆ ಸಹಾಯ ಹಸ್ತ ಚಾಚುತ್ತಿದ್ದರು. ಅವರ ಮನೆ ಸದಾ ಅತಿಥಿ ಅಭ್ಯಾಗತರಿಂದ, ಸಹಾಯ ಕೇಳಿ ಬರುವವರಿಂದ ತುಂಬಿರುತ್ತಿತ್ತು……

ಅವರ ಮನೆ ಬಾಗಿಲಿಗೆ ಬಂದ ಯಾವೊಬ್ಬ ಬಡವನೂ ಬರಿಗೈಲಿ ಹೋದ ಉದಾಹರಣೆಯಿಲ್ಲ. “ನನ್ನಲ್ಲಿರುವುದು ಸಮಾಜ ನೀಡಿದ ಆಸ್ತಿ, ಅದನ್ನು ಅವಶ್ಯಕತೆ ಇರುವವರಿಗೆ ಹಂಚಬೇಕು” ಎಂಬ ಉದಾತ್ತ ಚಿಂತನೆ ಅವರದಾಗಿತ್ತು. ಮದುವೆ, ಹಬ್ಬ ಅಥವಾ ಅನಾರೋಗ್ಯದಂತಹ ಸಂದರ್ಭಗಳಲ್ಲಿ ಅವರು ನೀಡುತ್ತಿದ್ದ ಗುಪ್ತದಾನಗಳು ಇಂದಿಗೂ ಅನೇಕರ ಬದುಕನ್ನು ಹಸನುಗೊಳಿಸಿವೆ…..

ಭೀಮರಾಯಗೌಡರು ಕೇವಲ ಆಸ್ತಿ-ಪಾಸ್ತಿ ಹೊಂದಿದ ಜಮೀನ್ದಾರರಾಗಿರಲಿಲ್ಲ; ಅವರು ಮೌಲ್ಯಗಳನ್ನು ಹೊಂದಿದ ಸಂಪ್ರದಾಯಸ್ಥ ಮನೆತನದವರು. ಎರಡು ತಾಲೂಕುಗಳಲ್ಲಿ ಹರಡಿರುವ ಅವರ ದೊಡ್ಡ ರೈತಾಪಿ ಕುಟುಂಬವು ಈ ಭಾಗದ ಕೃಷಿ ಸಂಸ್ಕೃತಿಯ ಬೆನ್ನೆಲುಬಾಗಿದೆ……

ಎಷ್ಟೇ ದೊಡ್ಡ ಕುಟುಂಬದವರಾಗಿದ್ದರೂ, ಅವರ ಮನಸ್ಸು ಮಾತ್ರ ಬಡವರ ಕಷ್ಟಕ್ಕೆ ಸದಾ ಮಿಡಿಯುತ್ತಿತ್ತು. ತಮಗೆ ಲಭ್ಯವಿರುವ ಸಂಪನ್ಮೂಲಗಳನ್ನು ಹಂಚಿಕೊಂಡು, ಹಸಿದವರಿಗೆ ಅನ್ನ, ಕಷ್ಟದಲ್ಲಿದ್ದವರಿಗೆ ಆರ್ಥಿಕ ನೆರವು ನೀಡಿದ ಮಹಾದಾನಿ ಇವರು……

ಅಷ್ಟೊಂದು ದೊಡ್ಡ ಆಸ್ತಿ-ಪಾಸ್ತಿ, ಜಮೀನ್ದಾರಿ ಮನೆತನದ ಹಿನ್ನೆಲೆ ಇದ್ದರೂ, ಅವರ ನಡೆ-ನುಡಿಗಳಲ್ಲಿ ಎಳ್ಳಷ್ಟೂ ಅಹಂಕಾರವಿರಲಿಲ್ಲ. “ಸಂಪತ್ತು ಸಮಾಜಕ್ಕೆ ವಿನಿಯೋಗವಾದರೆ ಮಾತ್ರ ಅದಕ್ಕೆ ಬೆಲೆ” ಎಂಬ ತತ್ವವನ್ನು ಅವರು ಅಕ್ಷರಶಃ ಪಾಲಿಸಿದವರು……

ಇಂದಿನ ದಿನಗಳಲ್ಲಿ ಜಂಟಿ ಕುಟುಂಬಗಳು ಮಾಯವಾಗುತ್ತಿರುವಾಗ, ಭೀಮರಾಯಗೌಡರು ತಮ್ಮ ದೊಡ್ಡ ಕುಟುಂಬವನ್ನು ಪ್ರೀತಿ ಮತ್ತು ಶಿಸ್ತಿನಿಂದ ಮುನ್ನಡೆಸಿದರು. ಇದು ಕೇವಲ ಒಂದು ಕುಟುಂಬಕ್ಕೆ ಮಾದರಿಯಲ್ಲ, ಇಡೀ ಸಮಾಜಕ್ಕೆ ಒಂದು ಪಾಠ…..

ಇಂದಿನ ಜಗತ್ತಿನಲ್ಲಿ ಮಾಲೀಕ ಮತ್ತು ಕಾರ್ಮಿಕರ ನಡುವೆ ಕೇವಲ ಕೆಲಸದ ಸಂಬಂಧವಿರುತ್ತದೆ. ಆದರೆ ಭೀಮರಾಯಗೌಡರು ಹಾಗಲ್ಲ. ತಮ್ಮ ಬಳಿ ಕೆಲಸ ಮಾಡುವವರನ್ನು ಅವರು ಎಂದಿಗೂ ಆಳುಗಳೆಂದು ನೋಡಲಿಲ್ಲ; ಬದಲಿಗೆ ತಮ್ಮದೇ ಕುಟುಂಬದ ಸದಸ್ಯರೆಂದು ಭಾವಿಸಿದರು. ಅವರ ವಿಶಾಲವಾದ ಜಮೀನಿನಲ್ಲಿ ದುಡಿಯುವ ಪ್ರತಿಯೊಬ್ಬರ ಮನೆಯ ಕಷ್ಟ-ಸುಖಗಳಿಗೆ ಅವರು ಮೊದಲಿಗರಾಗಿ ಧಾವಿಸುತ್ತಿದ್ದರು……

ಎಷ್ಟೋ ಜನರ ಮನೆ ಕಟ್ಟಲು, ಮಕ್ಕಳ ಮದುವೆಗೆ ಅಥವಾ ಶಿಕ್ಷಣಕ್ಕೆ ಇವರು ನೀಡಿದ ಸಹಾಯ ಅಕ್ಷರಶಃ ಅಳೆಯಲಾಗದ್ದು. ಒಬ್ಬ ಮಾಲೀಕನಾಗಿ ಅವರು ತೋರಿದ ಪ್ರೀತಿ ಮತ್ತು ಕಾಳಜಿ, ಇಂದು ಅವರನ್ನು ಪ್ರತಿಯೊಬ್ಬರ ಮನೆಯ ಸದಸ್ಯನನ್ನಾಗಿ ಮಾಡಿದೆ…..

ಭೌತಿಕವಾಗಿ ಅವರು ನಮ್ಮೊಂದಿಗಿಲ್ಲದಿದ್ದರೂ, ಅವರು ಹಾಕಿಕೊಟ್ಟ ಪ್ರಾಮಾಣಿಕತೆಯ ಹಾದಿ ಮತ್ತು ಸಾಮಾಜಿಕ ಕಳಕಳಿ ನಮ್ಮ ಜೊತೆಗಿದೆ. ಅವರ ತತ್ವಗಳನ್ನು ಪಾಲಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ……….

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles