16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಮುಂಡಗೋಡ ತಾಲೂಕಿನಲ್ಲಿ 78428 ಮತದಾರರಲ್ಲಿ 75321 ಮತದಾರ ಮ್ಯಾಪಿಂಗ್‌ ಕಾರ್ಯವಾಗಿದ್ದು ಶೇ.99 ರಷ್ಟು ಮ್ಯಾಪಿಂಗ್‌ ಪೂರ್ಣ..

ಮುಂಡಗೋಡ : ಭಾರತದ ಚುನಾವಣಾ ಆಯೋಗದ ಆದೇಶದಂತೆ  ೭-೧೦-೨೦೨೬ ರವರೆಗೆ ಮತದಾರರ ಪಟ್ಟಿ ವಿಶೇಷ  ಸಮಗ್ರ ಪರಿಷ್ಕರಣೆ ನಡೆಯಲಿದೆ ಎಂದು ಯಲ್ಲಾಪುರ ವಿಧಾನ ಸಭಾ ಮತ ಕ್ಷೇತ್ರದ ಮತದಾರರ ನೋಂದಾವಣಿ ಅಧಿಕಾರಿ ಹಾಗೂ ಶಿರಸಿ ಕೃಷಿ  ಉಪನಿರ್ದೇಶಕರಾದ ಕೆ.ಎಸ್‌.ಪಾಂಡು ಹಾಗೂ ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಮುಂಡಗೋಡ ತಾಲೂಕಿನ  ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ ಪ್ರಸಾದ ಎಸ್.ಎ ರವರು ಗುರುವಾರ ಮುಂಡಗೋಡ ತಹಶೀಲ್ದಾರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  ಮಾಹಿತಿ ನೀಡಿದರು.
ತಹಶೀಲ್ದಾರರು ಮಾಹತಿ ನೀಡುತ್ತಾ ಮುಂಡಗೋಡ ತಾಲೂಕಿನಲ್ಲಿ೭೮೪೨೮ ಮತದಾರರಿದ್ದು ೨೪-೬-೨೦೨೬ ರವರೆಗೆ  ಮ್ಯಾಪಿಂಗ್‌ ಕಾರ್ಯನಡೆದಿದ್ದು ಒಟ್ಟು೭೫೩೨೧ ಮ್ಯಾಪಿಂಗ್‌ ಕಾರ್ಯನಡೆದಿದೆ ಅಂದರೆ ಶೇ.೯೬.೦೪ ರಷ್ಟು ಮ್ಯಾಪಿಂಗ್‌ ಆಗಿದೆ ಕೇವಲ ೩೧೦೭(ಶೇ.೪ ರಷ್ಟು) . ಜನರ ಮ್ಯಾಪಿಂಗ್‌ ಕಾರ್ಯವಾಗಬೇಕಿದೆ.
ಪುರುಷ ಮತದಾರರು ೩೯೭೧೩ ಮಹಿಳಾ ಮತದಾರರು ೩೮೭೧೫ ಇದ್ದಾರೆ. ಉಳಿದಿರುವ  ೩೧೦೭(ಶೇ.೪ ರಷ್ಟು) . ಜನರ ಮ್ಯಾಪಿಂಗ್‌ ಕಾರ್ಯವಾಗಬೇಕಾಗಿದ್ದು     ಅವರಲ್ಲಿ ಸುಮಾರು ೨೦೦೦ ಮತದಾರರು ಮೃತಪಟ್ಟಿರಬಹುದು, ಇಲ್ಲಿಂದ ಬೇರೆಡೆಗೆ ಹೋಗಿರಬಹುದು     ಅವರ ಮಾಹಿತಿಯನ್ನು ಸಹ ಶೀಘ್ರವಾಗಿ ಬೂತಮಟ್ಟದ(ಬಿಎಲ್‌ಒ) ಅಧಿಕಾರಿಗಳಿಗೆ ಕೊಡಬೇಕು. ಬೂತ ಏಜಂ(ಬಿಎಲ್‌ಎ) ಬಿಎಲ್‌ಒ ಗಳಿಗೆ ಸಹಕಾರ ನೀಡಿ ಮಾಹಿತಿ ನೀಡಿಬೇಕು.   ಇದರಿಂದ ನಾವು ೧೦೦ ಕ್ಕೆ ೧೦೦ ರಷ್ಟು ಮ್ಯಾಪಿಂಗ್‌ ಮಾಡಲು ಸಾಧ್ಯವಾಗುತ್ತದೆ ಹಾಗೂ ಮತದಾರರ ಮಟ್ಟಿಯಲ್ಲಿ ಮುಂದುವರೆಯಲು ಸಾಧ್ಯವಾಗುತ್ತದೆ ಎಂದರು.

ಮುಂಡಗೋಡ ತಾಲೂಕಿನಲ್ಲಿ ಕೇವಲ ೨ ಜನರು ಶತಾಯುಷಿ ಮತದಾರರು ಮಾತ್ರ ಇದ್ದಾರೆ.
ಮುಂಡಗೋಡ ತಾಲೂಕಿನಲ್ಲಿ ೯೧ ಮತಗಟ್ಟೆಗಳು ಇದ್ದು ಸುಮಾರು  ೨೧ ಮತಗಟ್ಟೆಗಳಲ್ಲಿ  ೯೦ ರಿಂದ೯೫ ರಷ್ಟುಮ್ಯಾಪಿಂಗ್‌ ಆಗಿದೆ. ಹಾಗೂ ೬೪ ಮತಗಟ್ಟೆಗಳಲ್ಲಿ     ೯೫ ದಿಂದ ೧೦೦ ರಷ್ಟು ಮ್ಯಾಪಿಂಗ್‌ ಆಗಿದೆ.
ದಿನಾಂಕ ೩೦-೬-೨೦೨೬ ರಿಂದ ೨೯-೦೭-೨೦೨೬ ರವರೆಗೆ  ಮತಗಟ್ಟೆ ಮಟ್ಟದ ಅಧಿಕಾರಿಗಳು(ಬಿಎಲ್‌ಒ)   ಮನೆಗಳಿಗೆ ಭೇಟಿನೀಡಿ ಎರಡು ಎನ್ನುಮರೇಷನ್‌ ಫಾರ್ಮಗಳನ್ನು  ಮತದಾರರಿಗೆ  ನೀಡಲಿದ್ದು ಎರಡೂ ಎನ್ನುಮರೇಷನ್‌ ಫಾರ್ಮಗಳನ್ನು   ತುಂಬಿ   ಮತದಾರರು ಇಲ್ಲವೆ ಕುಟುಂಬದ ಸದಸ್ಯರು ಮತ್ತು ಬಿಎಲ್‌ಒ ಅಧಿಕಾರಿ ಕಡ್ಡಾಯವಾಗಿ ಸಹಿ ಮಾಡಿ ಒಂದನ್ನು ಮತದಾರರು ತಮ್ಮಲ್ಲಿ ಇಟ್ಟುಕೊಂಡು ಇನ್ನೊಂದನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ನೀಡಬೇಕು. ಮತದಾರರು ನೀಡಿದ ಗಣತಿ ನಮೂನೆಗಳನ್ನು ಸ್ವೀಕರಿಸಿ ಮತದಾರರ ಪಟ್ಟಿ ಪರಿಷ್ಕರಿಸಲಾಗುವುದು ಎಂದರು. ಮತಗಟ್ಟೆಗಳ ಪುನರವಿಂಗಡಣಾ ಕಾರ್ಯ ೨೯-೭-೨೦೨೬ ರಂದು ನಡೆಯಲಿದೆ. ೫-೮-೨೦೨೬ ರಂದು ಕರಡು ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದೆ. ದಿನಾಂಕ ೫-೮-೨-೨೬ ರಿಂದ ೪-೯-೨೦೨೬ ರವರೆಗೆ  ಹಕ್ಕು ಮತ್ತು ಆಕ್ಷೇಪಗಳನ್ನು ಸಲ್ಲಿಸುವ ಅವಧಿಯಾಗಿದೆ.  ೫-೮-೨೦೨೬ ರಿಂದ ೩-೧೦-೨೦೨೬ ರವರೆಗೆ  ಸೂಚನೆ ಹಂತ/ ಹಕ್ಕು ಮತ್ತು ಆಕ್ಷೇಪಣೆಗಳ ವಲೇವಾರಿ ಮಾಡುವ ಅವಧಿಯಾಗಿದೆ. ವಿಶೇಷ ಸಮಗ್ರ ಪರಿಷ್ಕರಣೆಗೆಅರ್ಹತಾ ದಿನಾಂಕ೧-೧೦-೨೦೨೬ ಆಗಿದೆ. ಅಂತಿಮ ಮತದಾರರ ಪಟ್ಟಿ ಪ್ರಕಟವಾಗುವದು ೭-೧೦-೨೦೨೬ ರಂದು.  ತಹಶೀಲ್ದಾರರು ತಿಳಿಸಿದರು.
ಯಲ್ಲಾಪುರ ವಿಧಾನ ಸಭಾ ಮತ ಕ್ಷೇತ್ರದ ಮತದಾರರ ನೋಂದಾವಣಿ ಅಧಿಕಾರಿ ಹಾಗೂ ಶಿರಸಿ ಕೃಷಿ  ಉಪನಿರ್ದೇಶಕರಾದ ಕೆ.ಎಸ್‌.ಪಾಂಡು ಪತ್ರಕರ್ತರಿಗೆ ಮಾಹಿತಿ ನೀಡುತ್ತಾ ೨೦೦೨ ಮತದಾರರ ಪಟ್ಟಿಯಲ್ಲಿದ್ದವರನ್ನು ೨೦೨೫ ಮತದಾರರ ಪಟ್ಟಿಗೆ ಜೋಡಣೆ ಮಾಡಿ ನೋಡುತ್ತಾರೆ. ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಕಂಡ ಬರದೇ ಇದ್ದರೆ ನಾವು ನಮ್ಮ ತಂದೆ-ತಾಯಿಯ ಅಜ್ಜ ಅಜ್ಜಿಯ  ಮೂಲಕ ಸೇರ್ಪಡೆಯಾಗಬಹುದಾಗಿದೆ.
ಈಗಾಗಲೇ ಮ್ಯಾಪಿಂಗ್‌ ಕಾರ್ಯವು ಯಲ್ಲಾಪುರ ಕ್ಷೇತ್ರದಲ್ಲಿ ಶೇ.೯೬ ರಷ್ಟು ಆಗಿದೆ. ಅಕ್ಟೋಬರ್‌ ೧ ರಂದು ೧೮ ವಯಸ್ಸು ಪೂರ್ಣಗೊಂಡವರು ಸಹ ಮತದಾರರ ಪಟ್ಟಿಯಲ್ಲಿ ನೊಂದಣಿಮಾಡಿಕೊಳ್ಳಬಹುದಾಗಿದೆ.ನಮೂನೆ ೬೪ ತುಂಬಬೇಕು. ಮತದಾರರ ಮನೆಯು ೧೦ ವರ್ಷಗಳಿಂದ ಮನೆಗೆ ಕೀಲಿ ಹಾಕಲಾಗಿರುತ್ತದೆ  ಅಂತಹ ಮನೆಗೆ ಚುನಾವಣೆಗೆ ಸಂಬಂದಪಟ್ಟ ಸ್ಟೀಕರ್‌ ಅಂಟಿಸಿ ಹೋಗಿರುತ್ತವೆ  ಆ ಸ್ಟೀಕರಿಗೆ ೩ ಬೇರೆ ಬೇರೆ ದಿನಾಂಕಗಳಿಗೆ ಭೇಟಿಯಾಗಿ ಎಂದು   ಅಲ್ಲಿ ಬಿಎಲ್‌ಒ ರವರ ಮೊಬೈಲ್‌ ನಂಬರ ಹಾಕಿ ಈ ನಂಬರಿಗೆ ಫೋನ್‌ ಮಾಡಿ ತಿಳಿಸಿರುತ್ತೇವ ಅವರು ೩ ದಿನಗಲ್ಲಿಯೂ ಬರದೆ ಇದ್ದರೆ ಅವರ ಮತದಾರರ ಪಟ್ಟಿಯಿಂದ ಹೊರಗೂಳಿಯುತ್ತಾರೆ  ಒಟ್ಟಾರೆಯಾಗಿ ಯಾವಬ್ಬ ಭಾರತ ನಾಗರಿಕನು ಮತದಾನದಿಂದ ವಂಚಿತನಾಗಬಾರದು ಎಂದು ಅತ್ಯಂತ ಪಾರದರ್ಶಕತೆಯಿಂದ ಮತದಾರರ ಮ್ಯಾಪಿಂಗ್‌ ಕಾರ್ಯವನ್ನು ಮಾಡಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವರು ಅರ್ಹತೆ ಏನೆಂದರೆ ಆತ/ಆಕೆ ಭಾರತೀಯ ನಾಗರಿಕರಾಗಿರಬೇಕು. ೧೮ ವರ್ಷ ತುಂಬಿರಬೇಕು ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ ಪ್ರಾಂಶುಪಾಲ್‌ ಪ್ರಸನ್ನಸಿಂಗ್‌ ಹಜೇರಿ ಹಾಗೂ ಎಸ್‌ಡಿಸಿ ರಾಘವೇಂದ್ರ ಗಿರಡ್ಡಿ ಇದ್ದರು

ವರದಿಗಾರರು: ಬಸಯ್ಯ ತೋಟಯ್ಯನವರ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles