ಚನ್ನಮ್ಮನ ಕಿತ್ತೂರು: ಕಿತ್ತೂರು ಸುತ್ತಮುತ್ತಲಿನ ಹಲವಾರು ಗ್ರಾಮಗಳಲ್ಲಿ ಮನೆಗಳ್ಳತನ ಮಾಡಿ ಪರಾರಿಯಾಗುತ್ತಿದ್ದ ಈರ್ವರು ಕಳ್ಳರನ್ನು ಕಿತ್ತೂರಿನ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ಬಂದಿಸಿದ್ದಾರೆ.
ಇತ್ತೀಚೆಗೆ ಕಿತ್ತೂರು ಸಮೀಪದ ಅವರಾದಿ ಹಾಗೂ ಸಂಗೋಳ್ಳಿ ಗ್ರಾಮಗಳಲ್ಲಿ ನಡೆದ ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿದ ಪೊಲೀಸರು ಕಳ್ಳರನ್ನು ಹಿಡಿಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಹೊಳಿ ನಾಗಲಾಪುರ ಗ್ರಾಮದ ಪತ್ರಯ್ಯ,ನಿಂಗಯ್ಯ,ಹಿರೇಮಠ ಹಾಗು ಬೈಲಹೊಂಗಲ ಗುಂಡ್ಲೂರ ಚಾಳ್ ನ ಅನಿಲಕುಮಾರ ಹಿರೇಮಠ ಆರೋಪಿಗಳಾಗಿದ್ದು ಇರ್ವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.
ಕಳ್ಳರಿಂದ 60 ಗ್ರಾಮ್ ಬಂಗಾರ,ಒಂದು ದ್ವಿಚಕ್ರ ವಾಹನ ಮತ್ತು ಒಂದು ಕಾರನ್ನು ವಶಪಡಿಸಿಕೊಂಡಿದ್ದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಡಿ, ವಯ್, ಎಸ್, ಪಿ, ವೀರಯ್ಯ ಹಿರೇಮಠ ತಿಳಿಸಿದ್ದಾರೆ.


ಕಿತ್ತೂರು ಮತ್ತು ಬೈಲಹೊಂಗಲ ಠಾಣಾ ವ್ಯಾಪ್ತಿಯ ಎರಡು ಮನೆಗಳ್ಳತನ ಬೇಧಿಸಿ, ಇಬ್ಬರು ಆರೋಪಿಗಳನ್ನು ಬಂದಿಸಿ ಅವರಿಂದ ಸುಮಾರು 09 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಮತ್ತು ಮಾರುತಿ ಸುಜಕಿ ಕಂಪನಿಯ ಒಂದು ಎರಿಗಾ ಕಾರ ಹಾಗೂ ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿಕೊಂಡ ಕಿತ್ತೂರಿನ ಪೊಲೀಸರು.
ಕಿತ್ತೂರು: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಅವರಾದಿ ಗ್ರಾಮದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಇಬ್ಬರು ಅಂತರ-ತಾಲ್ಲೂಕು ಖದೀಮರನ್ನು ಮಾನ್ಯ ನ್ಯಾಯಾಲಯದ ಆದೇಶದಂತೆ ಪೊಲೀಸ್ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಲಾಗಿದೆ. ಕಸ್ಟಡಿ ಅವಧಿಯಲ್ಲಿ ಆರೋಪಿಗಳು ನೀಡಿದ ಸ್ವಇಚ್ಛಾ ಹೇಳಿಕೆಯ ಮೇರೆಗೆ, ಕಿತ್ತೂರು ಹಾಗೂ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳುವಾಗಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಪೊಲೀಸರು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ.
ಘಟನೆಯ ಹಿನ್ನೆಲೆ ಮತ್ತು ತನಿಖೆ:
ಅವರಾದಿ ಗ್ರಾಮದ ನಿವಾಸಿ ಶ್ರೀಮತಿ ರೇಣುಕಾ ಆನಂದ ಪುರದ ಎಂಬುವವರ ಮನೆಯ ಮೇಲ್ದಾವಣಿಯ ಹಂಚುಗಳನ್ನು ತೆಗೆದು ಒಳನುಗ್ಗಿ, ಟ್ರೇಜರಿಯಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 161/2026 ರಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಕಿತ್ತೂರು ಪೊಲೀಸರು ದಿನಾಂಕ 22/06/2026 ರಂದು ಚಿಕ್ಕ ನಂದಿಹಳ್ಳಿ ಕ್ರಾಸ್ ಹತ್ತಿರ ಇಬ್ಬರು ಆರೋಪಿಗಳಾದ ಪತ್ರಯ್ಯ ನಿಂಗಯ್ಯ ಹಿರೇಮಠ ಹಾಗೂ ಅನಿಲಕುಮಾರ ಪ್ರಭುಸ್ವಾಮಿ ಹಿರೇಮಠ ಇವರನ್ನು ಮೋಟಾರ್ ಸೈಕಲ್ ಹಾಗೂ ಕಳವು ಮಾಡಿದ್ದ ಕೆಲವು ಬೆಳ್ಳಿ ಆಭರಣಗಳ ಸಮೇತ ಬಂಧಿಸಿದ್ದರು.
ಆರೋಪಿಗಳು ಕದ್ದ ಮಾಲನ್ನು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಅಡಮಾನ ಇಟ್ಟಿರುವುದಾಗಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಆ ಬಂಗಾರದ ಆಭರಣಗಳನ್ನು ಅವರಿಂದ ಜಪ್ತಿ ಮಾಡಲಾಗಿದೆ.
ಕಿತ್ತೂರು ಠಾಣೆ ವ್ಯಾಪ್ತಿಯ ಅವರಾದಿ ಗ್ರಾಮದ ಶ್ರೀಮತಿ ರೇಣುಕಾ ಅವರ ಮನೆಯಿಂದ ಕಳವಾಗಿದ್ದ ಬಂಗಾರದ ಹಾಗೂ ಬೆಳ್ಳಿಯ ಆಭರಣಗಳನ್ನು ಹಾಗೂ ಬೈಲಹೊಂಗಲ ಠಾಣೆ ವ್ಯಾಪ್ತಿಯ ಸಂಗೊಳ್ಳಿ ಗ್ರಾಮದಲ್ಲಿ ಕಳವು ಮಾಡಿದ ಆಭರಣ ಹೀಗೆ ಒಟ್ಟು 09 ಲಕ್ಷ ರೂಪಾಯಿ ಮೌಲ್ಯದ 60 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 15 ಸಾವಿರ ರೂಪಾಯಿ ಮೌಲ್ಯದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕಳೆದ ವರ್ಷ (ಡಿಸೆಂಬರ್ 2025 ರಲ್ಲಿ) ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಸಂಗೊಳ್ಳಿ ಗ್ರಾಮದ ಮನೆಯೊಂದರಲ್ಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದರು (ಬೈಲಹೊಂಗಲ ಪೊ.ಠಾ ಅಪರಾಧ ಸಂಖ್ಯೆ: 308/2025). ಕಸ್ಟಡಿ ಅವಧಿಯಲ್ಲಿ ಆರೋಪಿಗಳನ್ನು ಕರೆದೊಯ್ದು, ಅವರು ಕದ್ದ ಚಿನ್ನಾಭರಣಗಳನ್ನು ಅಡ ಇಟ್ಟಿದ್ದ ಬೈಲಹೊಂಗಲದ ಮಣಪುರಂ ಗೋಲ್ಡ್ ಫೈನಾನ್ಸ್,ಮುತ್ತೂಟ್ ಫೈನಾನ್ಸ್, ಕಿತ್ತೂರಿನ ಮುತ್ತೂಟ್ ಮಣಿ ಫೈನಾನ್ಸ್, ಹುಕ್ಕೇರಿಯ ಮುತ್ತೂಟ್ ಫಿನ್‌ಕಾರ್ಪ್ ಹಾಗೂ ಬೆಳಗಾವಿಯ ಖಡೇಬಜಾರ್‌ನ ಮುತ್ತೂಟ್ ಎಕ್ಸಿಮ್ ಫೈನಾನ್ಸ್ ಸಂಸ್ಥೆಗಳಿಂದ ಸಂಗೊಳ್ಳಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.
ಅಲ್ಲದೆ ಸದರಿ ಕಳುವಾದ ವಸ್ತುಗಳನ್ನು ಮಾರಿ ಬಂದ ಹಣವನ್ನು ಕಾರಿನ ಲೋನ್ ತುಂಬಲು ಬಳಸಿದ್ದರಿಂದ ಹಾಗೂ ಸದರಿ ಕಾರನ್ನು ಹಾಗೂ ದ್ವಿಚಕ್ರ ವಾಹನವನ್ನು ಕಳ್ಳತನಕ್ಕೆ ಉಪಯೋಗಸಿದ್ದರಿಂದ ಎರಡು ವಾಹನಗಳನ್ನು ಜಪ್ತ ಮಾಡಿರುತ್ತದೆ.
ಈ ಕಾರ್ಯಾಚರಣೆಯಲ್ಲಿ ಡಾ॥ ವೀರಯ್ಯ ಹಿರೇಮಠ, ಡಿ.ಎಸ್.ಪಿ ಬೈಲಹೊಂಗಲ ಹಾಗೂ ಶ್ರೀ ಶಿವಾನಂದ ಬಿ ಗುಡಗನಟ್ಟಿ, ಸಿ.ಪಿ.ಐ ಕಿತ್ತೂರ ವೃತ್ತ, ರವರ ರವರ ಮಾರ್ಗದರ್ಶನದಲ್ಲಿ ಶ್ರೀ ಭರತ್ ಎಸ್ ಪಿ.ಎಸ್.ಐ. (ಕಾ&ಸು), ಶ್ರೀ ಗಂಗಾಧರ ಜಿ ಹಂಪಣ್ಣವರ ಪಿ.ಎಸ್.ಐ (ಸಿಬಿ) ಕಿತ್ತೂರ ಠಾಣೆ, ಕಿತ್ತೂರ ಠಾಣೆಯ ಸಿಬ್ಬಂದಿ ಜನರಾದ, ಎಸ್.ಎ ದಪೇದಾರ, ಎ.ಎಮ್ ಚಿಕ್ಕೇರಿ, ಸುನೀಲ ಮುರಗೋಡ, ನಾಗರಾಜ ಕಡಗನ್ನವರ ಮತ್ತು ಬಾಹುಬಲಿ ಅಗಸಿಮನಿ, ರಾಜು ಗೌರಕ್ಕನವರ, ಹಾಗೂ ತನಿಖಾ ಸಹಾಯಕ ಎಮ್.ಬಿ.ಕಂಬಾರ, ಮತ್ತು ಬೆಳಗಾವಿ ಜಿಲ್ಲೆ ತಾಂತ್ರಿಕ ವಿಭಾಗದ ಸಿಪಿಸಿ 3146 ಸಚಿನ್ ಪಾಟೀಲ ರವರುಗಳು ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ. ತಂಡದ ಉತ್ತಮ ಪತ್ತೆ ಕಾರ್ಯಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಕೆ.ರಾಮರಾಜನ್ ಐಪಿಎಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಆರ್.ಬಿ ಬಸರಗಿ ಕೆ.ಎಸ್.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.
ಸಂಪಾದಕರು: ರಾಮಚಂದ್ರಪ್ಪ ಪೂಜೇರ

