14.7 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಮುಂಡಗೋಡ ತಾಲೂಕ ಆರೋಗ್ಯ ಅಭಿಯಾನ ಸಮಿತಿ

ಮುಂಡಗೋಡ ತಾಲೂಕ ಆರೋಗ್ಯ ಅಭಿಯಾನ ಸಮಿತಿಯ ಸದಸ್ಯರು ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಮಾನ್ಯ ಜಿಲ್ಲಾಧಿಕಾರಿಗಳು ಕಾರವಾರ ಹಾಗೂ ಮಾನ್ಯ ಜಿಲ್ಲಾ ಆರೋಗ್ಯ ಅಧಿಕಾರಿಗಳು ಕಾರವಾರ ಅವರಿಗೆ ಮನವಿಯನ್ನು ಸಲ್ಲಿಸಿ, ಪ್ರಮುಖವಾದ ಬೇಡಿಕೆಗಳನ್ನು ಮುಂದಿಟ್ಟು ಆದಷ್ಟು ಬೇಗನೆ ಅವುಗಳನ್ನು ಜಾರಿಗೊಳಿಸಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಹಕರಿಸಬೇಕೆಂದು ಮನವಿಯನ್ನು ಸಲ್ಲಿಸಲಾಯಿತು…

ಜನ ವೇದಿಕೆ ಕರ್ನಾಟಕ ಜನಾರೋಗ್ಯ ಚಳುವಳಿ ಮೂಲಕ ಕರ್ನಾಟಕ ರಾಜ್ಯದ 17 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಧ್ಯಯನವನ್ನು ಮಾಡಿದ್ದು ಅದರಲ್ಲಿ ಮುಖ್ಯವಾಗಿ ಕಂಡುಬಂದದ್ದು ವೈದ್ಯರು ಸೇರಿದಂತೆ ಸಿಬ್ಬಂದಿ ವರ್ಗದವರು ನೇಮಕದಲ್ಲಿ ಕೊರತೆ ಅತಿ ಮುಖ್ಯವಾದ 104 ತರಹದ ಔಷಧಿ ವಿತರಣೆ, ಅಂಬುಲೆನ್ಸ್ ಸೇವೆ, ಹೆರಿಗೆ ಸೇವೆ ಹೀಗೆ ಮುಖ್ಯವಾಗಿ ಸಾರ್ವಜನಿಕರಿಗೆ ಸಿಗಬೇಕಾದ ಆರೋಗ್ಯ ಸೇವೆಯು ಸಮರ್ಪಕವಾಗಿ ದೊರಕಬೇಕೆಂಬ ನಿಟ್ಟಿನಲ್ಲಿ ಹಾಗೂ ಮೈನಳ್ಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಬೇಕು ಎಂದು ಮುಂಡಗೋಡ ತಾಲೂಕ ಆರೋಗ್ಯ ಅಭಿಯಾನ ಸಮಿತಿಯ ಸದಸ್ಯರು ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಮಾನ್ಯ ಜಿಲ್ಲಾಧಿಕಾರಿಗಳು ಕಾರವಾರ ಹಾಗೂ ಮಾನ್ಯ ಜಿಲ್ಲಾ ಆರೋಗ್ಯ ಅಧಿಕಾರಿಗಳು, ಕಾರವಾರ ಅವರಿಗೆ ಮನವಿಯನ್ನು ಸಲ್ಲಿಸಿ ಪ್ರಮುಖವಾದ ಬೇಡಿಕೆಗಳನ್ನು ಮುಂದಿಟ್ಟು ಆದಷ್ಟು ಬೇಗನೆ ಅವುಗಳನ್ನು ಜಾರಿಗೊಳಿಸಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಹಕರಿಸಬೇಕೆಂದು ಮನವಿಯನ್ನು ಕೊಟ್ಟು ವಿನಂತಿಸಿದರು.
ಸದರಿ ಮನವಿ ಜೊತೆಗೆ ಈ ಹಿಂದೆ 2020 ರಿಂದ ಇಲ್ಲಿಯವರೆಗೆ ಸಲ್ಲಿಸಿದ 42 ಮನವಿಗಳು, ಮುಂಡಗೋಡನ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಧ್ಯಯನ ವರದಿ, ಆರೋಗ್ಯ ವಿಷಯವಾಗಿ ಸಮಸ್ಯೆ ಎದುರಿಸಿ ಸಾವು ನೋವು ಅನುಭವಹಿಸಿದ 5 ವ್ಯಕ್ತಿ ಅಧ್ಯಯನಗಳನ್ನು ಮನವಿ ಜೊತೆ ಕೊಟ್ಟರು. ಸದರಿ ಕಾರ್ಯಕ್ರಮದಲ್ಲಿ ಆರೋಗ್ಯ ಅಭಿಯಾನ ಸಮಿತಿಯ ಅಧ್ಯಕ್ಷರಾದ ರವಿ ಲಮಾಣಿ ಸದಸ್ಯರಾದ ಫಾತೀಮ ಸುಲೇಮಾನ್, ಮಹಾಲಕ್ಷ್ಮಿ ನಾಯ್ಕ್ ಜನ್ನಬಾಯಿ ವಿಟ್ಟು ವರಕ್, ಮೈಲಾರಿ ಬೆಂಡಿಗೇರಿ, ಮಂಜುನಾಥ ಪಾಟೀಲ್, ಶ್ರೀಧರ್ ಗುತ್ತಲ, ಭರಮಣ್ಣ ಚಕ್ರಸಾಲಿ, ಮಮತಾ ಎ ಎಲ್ ಹಾಗೂ ರೂಪಾ ಬಾರ್ಕೆರ್ ಅವರು ಹಾಜರಿದ್ದರು.

ಸಂಪಾದಕರು: ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು)

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles