15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಮುಂಡಗೋಡ ಶಾಲೆಯ ಬೀಸಿಯೂಟ ಸೇವನೆಯಿಂದಾಗಿ ಅಸ್ವಸ್ತಗೊಂಡು ಆಸ್ಪತ್ರೆಗೆ ದಾಖಲಾದ ಪ್ರಕರಣ…

ಉತ್ತರ ಕನ್ನಡ:ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನಲ್ಲಿರುವ ಕ್ರೀಯಾಶೀಲ ಮಹಿಳೆಯರ ಸಬಲೀಕರಣಕ್ಕಾಗಿರುವ ಸಿಸಿಎಫ್‌ ಲೊಯೋಲ ಜನಸ್ಫೂರ್ತೀ ಮಹಿಳಾ ಸ್ವಸಹಾಯ ಸಂಘಗಳ ಟ್ರಸ್ಟ್‌ ವತಿಯಿಂದ ಇತ್ತೀಚೆಗೆ ಮುಂಡಗೋಡದಲ್ಲಿ ನಡೆದ ಶಾಲೆಯ ಬೀಸಿಯೂಟ ಸೇವನೆಯಿಂದಾಗಿ ಅಸ್ವಸ್ತಗೊಂಡು ಆಸ್ಪತ್ರೆಗೆ ದಾಖಲಾದ ಪ್ರಕರಣಕ್ಕೆ ಸಂಬಂದಿಸಿದಂತೆ ಮತ್ತೊಮ್ಮೆ ಇಂಥಹ ಪ್ರಕರಣಗಳು ನಡೆಯದಿರಲೆಂದು ಮತ್ತು ಆ ಕುರಿತು ನಡೆದ ತನಿಖೆ ವರದಿ ಭಹಿರಂಗ ಪಡಿಸುವಂತೆ ಒತ್ತಾಯಿಸಿ ಮನವಿ ನೀಡಿದರು..

ಪ್ರಕರಣ ಹಿನ್ನೆಲೆ:
ಮುಂಡಗೋಡನ ಶಾಸಕರ ಮಾದರಿ ಶಾಲೆಯಲ್ಲಿ ಲೊಯೋಲ ವಿಕಾಸ ಕೇಂದ್ರ ನಿರ್ವಹಿಸುತ್ತಿರುವ ನವಸ್ಫೂರ್ತಿ, ಏಲಿಜಬೆತ್ ಹಾಗೂ ಅಂಕುರ ವಸತಿ ನಿಲಯದಲ್ಲಿ 1 ರಿಂದ 8ನೇ ತರಗತಿಯ 43 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಇದರೊಂದಿಗೆ ತಾಲೂಕಿನ ಮತ್ತು ನಗರದ ವಿವಿಧ ಭಾಗದ ವಿದ್ಯಾರ್ಥಿಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯಸಿಸುತ್ತಿದ್ದು ವಿದ್ಯಾರ್ಥಿಗಳು ನೀಡಿದ ದೂರು ಹಾಗೂ ಪತ್ರಿಕಾ ವರದಿಯ ಅನ್ವಯ ಶಾಲೆಯಲ್ಲಿ ದಿನಾಂಕ 28.11.2025 ರಂದು ಮದ್ಯಾಹ್ನದ ಬಿಸಿಯೂಟ ಸೇವಿಸಿದ ಎಲ್ ವಿಕೆಯ ವಸತಿ ನಿಲಯದ 8 ಮಕ್ಕಳು ಹೊಟ್ಟೆ ನೋವು, ವಾಂತಿ, ತೀವ್ರ ಅಸ್ವಸ್ಥತೆಯಿಂದ ಸರಕಾರಿ ಆಸ್ಪತ್ರೆ ಮುಂಡಗೋಡದಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದರು. ಈ ಮೇಲಿನ ಘಟನೆ ಇದೆ ಶೈಕ್ಷಣಿಕ ವರ್ಷದಲ್ಲಿ ಎರಡನೇ ಸಲ ಸಂಭವಿಸಿದೆ. ಮೇಲಿನ ಬೆಳವಣಿಗೆಯಿಂದ ಮಕ್ಕಳ ಪಾಲಕ-ಪೋಷಕರು ಶಾಲೆಯಲ್ಲಿಯ ಅವ್ಯವಸ್ಥೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಶಾಲೆಯಲ್ಲಿ ಶುದ್ದ ಕುಡಿಯುವ ನೀರು, ಅಸಮರ್ಪಕ ಶೌಚಾಲಯ, ಶಿಕ್ಷಕರ ಕೊರತೆ, ಪೋಷಕ-ಶಿಕ್ಷಕ ಪರಿಷತ್ತು ನಿಷ್ಕಾಳಜಿ ಇತ್ಯಾದಿ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಕೋರಿರುತ್ತಾರೆ. ಮದ್ಯಾಹ್ನದ ಬಿಸಿಯೂಟದಿಂದ ಮಕ್ಕಳ ಆಸ್ವಸ್ತತೆ ಕುರಿತು ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆ ನಡೆಸುವುದರ ಜೊತೆಗೆ ಮಕ್ಕಳ ಅಸ್ತ್ರಸ್ತೆಗೆ ವೈದ್ಯಕೀಯ ವರದಿ ಪಡೆಯಲು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ತಮ್ಮ ಮನವಿ ಪತ್ರದ ಮೂಲಕ ತಿಳಿಸಿದ್ದಾರೆ..
ಜೊತೆಗೆ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ, ಅಸಮರ್ಪಕ ಶೌಚಾಲಯ, ಶಿಕ್ಷಕರ ಕೊರತೆ, ಕಳಪೆ ಬಿಸಿಯೂಟ ಇತ್ಯಾದಿ ತಡೆಗಟ್ಟುವಲ್ಲಿ ಸೂಕ್ತ ಕ್ರಮ ಜರುಗಿಸಿ, ಗುಣಮಟ್ಟದ ಶಿಕ್ಷಣಮತ್ತು ಉತ್ತಮ ಶಾಲಾ ಹಾಗೂ ಕಲಿಕಾ ಪರಿಸರ ನಿರ್ಮಿಸಲು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಾಗಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಿಸಿಎಫ್‌ ಲೊಯೋಲ ಜನಸ್ಫೂರ್ತೀ ಮಹಿಳಾ ಸ್ವಸಹಾಯ ಸಂಘಗಳ ಟ್ರಸ್ಟ್‌ ವತಿಯಿಂದ
ಮನವಿಯನ್ನು ಸಲ್ಲಿಸಿದರು…
ಈ ಸಂದೃಭದಲ್ಲಿ ಟ್ರಸ್ಟನ ಸರ್ವಸದಸ್ಯರು, ಮತ್ತು ಲೊಯೋಲ ವಿಕಾಸ ಕೇಂದ್ರದ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವರದಿಗಾರರು: ಲಕ್ಷ್ಮಣ ಮುಳೆ (ಉತ್ತರ ಕನ್ನಡ)

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles