ಯಾದಗಿರಿ : ಕಲ್ಬುರ್ಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಇದೇ ವರ್ಷ ಸ್ಥಾಪನೆಯಾಗಿ ಅನಾವರಣಗೊಂಡಿರುವ ಮೂರ್ತಿಗೆ ಅನ್ಯಕೋಮಿನ ಸಮಾಜಘಾತಕರು ಕೆಲ ದುಷ್ಕರಿಮಿಗಳು ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ನಿನ್ನೆ ರಾತ್ರಿ ಕೆಲ ಕಿಟಿಗೇಡಿಗಳು ಭಗ್ನ ಗೊಳಿಸಿರುವರು. 12ನೇ ಶತಮಾನದ ಬಸವಾದಿ ಶರಣರು ಯಾವುದೇ ಒಂದು ಸಮಾಜಕ್ಕೆ ಸೀಮಿತವಾಗದೆ ಎಲ್ಲಾ 63 ಶರಣರಲ್ಲಿ ನಿಜಶರಣ ನೆಂದು ಅನಿಸಿಕೊಂಡಿರುವ ನಿಜಶರಣ ಅಂಬಿಗರ ಚೌಡಯ್ಯನವರು ಎಲ್ಲಾ ಸಮುದಾಯದ ಎಲ್ಲಾ ಸಮಾಜದ ಎಲ್ಲಾ ಮಹಾಪುರುಷರನ್ನು ಗೌರವಿಸಿ , ಜೀವನ ನಡೆಸಿರುವಂತಹ ನೇರ ದಿಟ್ಟ ನಡೆಯುವೊಂದಿಗೆ ಸಮಾಜಕ್ಕೆ ಮಾದರಿಯಾಗಿರುವಂತ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ರುಗೊಳಿಸಿವಂತ ಕೆಲ ಕಿಡಿಗೇಡಿಗಳು ಸಮಾಜಕ್ಕೆ ಭಾವನಾತ್ಮಕವಾಗಿ ಕೋಲಿ ಕಬ್ಬಲಿಗ ಸಮಾಜಕ್ಕೆ ನೇರ ದಾಳಿ ಮಾಡಿದಂತಾಗಿದೆ ಆದರೆ ಇದನ್ನು ರಾಜ್ಯ ಬುಡಕಟ್ಟು ಸಂರಕ್ಷಣಾ ಸಮಿತಿ ಈ ಅನ್ಯಾಯವನ್ನು ಖಂಡಿಸುತ್ತದೆ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿದ ಘಾತುಕ ಕಿಡಿಗೇಡಿಗಳನ್ನು ಕೂಡಲೇ ಬಂದಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಆಡಳಿತಕ್ಕೆ ಹಾಗೂ ಸರ್ಕಾರಕ್ಕೆ ಎಚ್ಚರಿಕೆ ಯನ್ನು ನೀಡುತ್ತದೆ ಜಿಲ್ಲಾ ಆಡಳಿತದಿಂದ ಮುತ್ತುಗಾ ಗ್ರಾಮದಲ್ಲಿ ಮತ್ತೊಮ್ಮೆ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಅನಾವರಣಗೊಳಿಸಿ ಗೌರವವನ್ನು ಸೂಚಿಸುವಂತಹ ಕೆಲಸ ಆಗಬೇಕು ಎಂದು ರಾಜ್ಯ ಬುಡಕಟ್ಟು ಸಂರಕ್ಷಣಾ ಸಮಿತಿಯ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಧನರಾಜ್ ಗೌಡ ಎಸ್ ಪಾಟೀಲ್ ರವರ ವತಿಯಿಂದ ಜಿಲ್ಲಾಡಳಿತಕ್ಕೆ ಆಗ್ರವ್ಯಕ್ತಪಡಿಸಿದ್ದಾರೆ.

