15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ರೋಟರಿ ಪ್ರೌಢಶಾಲೆಯಲ್ಲಿ  ತಾಲೂಕ ಆಡಳಿತ.  ತಾಲೂಕು ಪಂಚಾಯಿತಿ ಪಟ್ಟಣ ಪಂಚಾಯಿತಿ. ರೋಟರಿ ಕ್ಲಬ್ ಹೇರಿ ಟೇಜ್ ಹಾಗೂ ತಾಲೂಕ್ ಆರೋಗ್ಯ ಇಲಾಖೆ ಇವುಗಳು ಸಂಯುಕ್ತ ಆಶಯದಲ್ಲಿ  ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ   ಅಂಗವಾಗಿ ಪೋಲಿಯೋ ಕುರಿತು ಜಾಗೃತಿ ಜಾತ ಏರ್ಪಡಿಸಲಾಗಿತ್ತು.

ಮುಂಡಗೋಡ : ಪಲ್ಸ್  ಪೋಲಿಯೋ ಜಾಗೃತಿ ಜಾಥಾ.              ಮುಂಡಗೋಡ ಪಟ್ಟಣದ ರೋಟರಿ ಪ್ರೌಢಶಾಲೆಯಲ್ಲಿ  ತಾಲೂಕ ಆಡಳಿತ.  ತಾಲೂಕು ಪಂಚಾಯಿತಿ ಪಟ್ಟಣ ಪಂಚಾಯಿತಿ. ರೋಟರಿ ಕ್ಲಬ್ ಹೇರಿ ಟೇಜ್ ಹಾಗೂ ತಾಲೂಕ್ ಆರೋಗ್ಯ ಇಲಾಖೆ ಇವುಗಳು ಸಂಯುಕ್ತ ಆಶಯದಲ್ಲಿ  ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ   ಅಂಗವಾಗಿ ಪೋಲಿಯೋ ಕುರಿತು ಜಾಗೃತಿ ಜಾತವನ್ನು  ಏರ್ಪಡಿಸಲಾಗಿತ್ತು..  

ಇಲ್ಲಿನ  ತಾಲೂಕ್ ಆಸ್ಪತ್ರೆ ಆಡಳಿತ ವೈದ್ಯಧಿಕಾರಿ  ಸ್ವರೂಪ ರಾಣಿ ಪಾಟೀಲ್ ಹಸಿರು ನಿಶಾನ್ಯ ತೋರಿಸುವ ಮೂಲಕ  ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಸಂಪೂರ್ಣ ಪೋಲಿಯೋ ಮುಕ್ತವಾಗಿರುವ  ನಿಟ್ಟಿನಲ್ಲಿ ಪಾಲಕರು ತಮ್ಮ 5 ವರ್ಷದೊಳಗಿನ  ಮಕ್ಕಳಿಗೆ ತಪ್ಪದೇ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಿ ಅಂಗವಿಕಲತೆಯನ್ನು ತಡೆಗಟ್ಟಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ಜಿ ಮಾತನಾಡಿ  ಈ ಹಿಂದೆ ಎಷ್ಟು ಬಾರಿ ಪೋಲಿಯೋ ಹಾಕಿಸಿದರು   ಸಹ ಜೂನ್ 28 ಭಾನುವಾರ ತಪ್ಪದೇ  ಪೋಲಿಯೋ ಲಸಿಕೆ ಹಾಕಿಸಿ ಎಂದರು.             ರೋಟರಿ ಕ್ಲಬ್ಬಿನ  ಡಾ. ಪಿ.ಪಿ. ಚಬ್ಬಿ  ಮಾತನಾಡಿ ಭಾರತವು ಪೋಲಿಯೋ ಮುಕ್ತವಾಗಿದೆ  ಆದರೆ ಕೆಲವು ದೇಶಗಳಲ್ಲಿ ಪೋಲಿಯೋ ಇನ್ನು ಇದೆ ಮತ್ತು ಅದು ಮತ್ತೆ ಕಾಣಿಸಿಕೊಳ್ಳಬಹುದು   ನಿಮ್ಮ ಮಗುವಿನ ರಕ್ಷಣೆಯ ವಿಷಯದಲ್ಲಿ ಯಾವುದೇ ತಪ್ಪುಗಳನ್ನು ಮಾಡಬೇಡಿ. ಪ್ರತಿ ಬಾರಿಯೂ ಪೋಲಿಯೋ ಲಸಿಕೆ ಹಾಕಿಸಿ  ಪೋಲಿಯೋ ಮುಕ್ತ ದೇಶ ವಿಜಯಕ್ಕೆ ನಿಮ್ಮ ಕೊಡುಗೆ ನೀಡಿ  ಅಂಗವಿಕಲತೆಯನ್ನು ತಡೆಗಟ್ಟಿ ಎಂದರು.           

ತಾಲೂಕು   ಆರೋಗ್ಯ ಶಿಕ್ಷಣಾಧಿಕಾರಿ ಎಸ್ಎಸ್ ಪಟ್ಟಣ ಶೆಟ್ಟಿ ರಾಷ್ಟ್ರೀಯ ಪಲ್ಸ್  ಪೋಲಿಯೋ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.         

ರೋಟರಿ ಕ್ಲಬ್ ಹೇರಿ ಟೇಜೆ ಅಧ್ಯಕ್ಷ ಕಲ್ಮೇಶ್ ತೆಂಕೋಜಿ. ಕಾರ್ಯದರ್ಶಿ ಜಾನಿ ಲೋಪಸ್ . ಖಜಾಂಚಿ ರಾಜ ಜೇಮ್ಸ್. ನಾರಾಯಣ ದೈವಜ್ಞ. ಮಹೇಶ್ ಹೆಗಡೆ ಜಗದೀಶ್  ಕಾ ನಾಡೆ  ಅನಿಲ್ ಬಾಂಬೆರ ಐ ಎಂ ಎ ಕಾರ್ಯದರ್ಶಿ ಡಾ. ಭರತ್ ತಂತ್ರಿ. ರೋಟರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಗಿರೀಶ್ ಕುಲಕರಣಿ . ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲಾಚಾರಕಿ. ಗೀತಾ ಮಠಪತಿ. ಚೇತನ್ ಕಲಾಲ್. ಪೊಲೀಸ್ ಇಲಾಖೆಯ ಎ ಎಸ್ ಐ ದಯಾನಂದ  ಮಡ್ಲಿ ರೋಟರಿ ಕ್ಲಬ್ ನ ಪದಾಧಿಕಾರಿಗಳು . ಶಿಕ್ಷಕರು ಸಿಬ್ಬಂದಿ ಆಶಾ ಕಾರ್ಯಕರ್ತರು . ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ವರದಿಗಾರರು ಬಸಯ್ಯ ತೋಟಯ್ಯನವರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles