15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಲಂಬಾಣಿ ಸಮುದಾಯದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಸಮಾಜ ಕಲ್ಯಾಣ ಸಚಿವ ಕೆಹೆಚ್. ಮುನಿಯಪ್ಪ

ಒಳಮೀಸಲಾತಿಯಲ್ಲಿ ಯಾರಿಗೂ ಅನ್ಯಾಯವಾಗದೆ 101 ಸಮುದಾಯಕ್ಕೂ ಪರಿಹಾರ, ಒಳಮೀಸಲಾತಿ ಗೊಂದಲಗಳ ನಿವಾರಣೆ

ಅಂಬೇಡ್ಕರ್ ಭವನ 25
👇
ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಕೆಹೆಚ್. ಮುನಿಯಪ್ಪ ರವರ ನೇತೃತ್ವದಲ್ಲಿ ಇಂದು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಸಭೆಯನ್ನು ನಡೆಸಿದರು.

ಈ ವೇಳೆ ಜವಳಿ ಹಾಗೂ ಸಕ್ಕರೆ ಇಲಾಖೆ ಸಚಿವರಾದ ರುದ್ರಪ್ಪ ಲಮಾಣಿ ರವರು ಸಮುದಾಯದ ಸಮಸ್ಯಗಳು ಹಾಗೂ ಒಳಮೀಸಲಾತಿಯಡಿ ಸಮುದಾಯಕ್ಕೆ ಆಗಿರುವ ಅನ್ಯಾಯದ ಕುರಿತು ಸಚಿವರೊಂದಿಗೆ ಚರ್ಚಿಸಿ
ಲಂಬಾಣಿ ಸಮುದಾಯವನ್ನು ಒಳಮೀಸಲಾತಿಯಲ್ಲಿ ಕಡೆಗಣಿಸಿದ್ದು ನಮಗೆ ಸೂಕ್ತ ಸಮಾನವಕಾಶಗಳನ್ನು ಕಲ್ಪಿಸಿಬೇಕು ಎಂದು ಸಭೆಯಲ್ಲಿ ಪ್ರಸ್ಥಾಪಸಿದರು.

ನಂತರ ಮಾತನಾಡಿದ ಸಚಿವರು ರುದ್ರಪ್ಪ ಲಮಾಣಿ ಹಾಗೂ ನನ್ನ ನಡುವೆ 30ವರ್ಷಗಳ ಅವಿನಾಭವ ಸಂಭಂದ ಇದೆ ಈ ಸಮುದಾಯದವರು ನಮ್ಮ ಅಣ್ಣತಮ್ಮಂದಿರಿದ್ದಂತೆ ಒಳಮೀಸಲಾತಿ ಪರಿಷ್ಕರಣೆ ಮಾಡುವಾಗ ನಾವು ಪರಮೇಶ್ವರ್ ನಾಯಕ್ ರವರನ್ನು ಸಭೆಗೆ ಆಹ್ವಾನಿಸಿದ್ದಿವಿ ಆಗ ನಾನು ಮೊದಲು ಈ ಸಮುದಾಯಕ್ಕೆ ಹಂಚಿಕೆ ಮಾಡಿ ನಂತರ ನಮಗೆ ಕೊಡಿ ಎಂದಿದ್ದೆ ನೂರೊಂದು ಸಮುದಾಯಗಳ ಸಹಕಾರದಿಂದ ನಾವು ಈ ಸರ್ಕಾರ ತರುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದೆ ಗಾಂದೀಜಿಯವರ ನುಡಿಯಂತೆ ಈ ದೇಶದ ಕಟ್ಟಕಡೆಯ ಪ್ರಜೆಗೆ ಸಮಾನವಾದ ಅವಕಾಶಗಳು ಸೇರಬೇಕು ಎಂದಿದ್ದರು

ಹಾಗೆಯೇ ಒಳಮೀಸಲಾತಿ ಅನುಸಾರವಾಗಿ ಈ ಸಮುದಾಯದಕ್ಕೆ ನಾಗಮೋಹನ್ ದಾಸ್ ರವರ ವರದಿಯಂತೆ ಹಂಚಿಕೆ ಮಾಡಬೇಕು ಎಂದಿದ್ದೆ ಆದರೆ ಅದು ಸದ್ಯವಾಗಲಿಲ್ಲಾ ಆದರೂ ಈ ಸಮುದಾಯಕ್ಕೆ ಸೇರಬೇಕಾದ ನ್ಯಾಯವನ್ನು ನಾನು ಕೊಡಿಸುತ್ತೇನೆ ನಾನು ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ರವರೊಂದಿಗೆ ಸಭೆಯನ್ನು ನಡೆಸಿದ್ದು ಮುಂದಿನಿ ದಿನಗಳಲ್ಲಿ ರುದ್ರಪ್ಪ ಲಮಾಣಿ ಶಿವಾರಜ್ ತಂಗಡಿಗಿ ರವರ ನೇತೃತ್ವದಲ್ಲಿ ಒಂದು ನಿಯೋಗ ಮುಖ್ಯಮಂತ್ರಿ ಗಳೊಂದಿಗೆ ಸಭೆಯನ್ನು ನಡೆಸಿ ಇದಕ್ಕೆ ನ್ಯಾಯಕೊಡಿಸಲು ಬದ್ದನಾಗಿದ್ದೇನೆ
ಪರಿಶಿಷ್ಟ ಜಾತಿಯ
ಪ್ರವರ್ಗ 1 ಪ್ರವರ್ಗ 2 ಪ್ರವರ್ಗ 3 ಈ ಸಮುದಾಯಗಳಿಗೆ ಸೇರಬೇಕಾದ ಎಲ್ಲಾ ಅವಕಾಶಗಳನ್ನು ಕಲ್ಪಿಸಿ ಅಭಿವೃದ್ಧಿಯಲ್ಲಿ ಮುಂದಾಗೊಣ ಎಲ್ಲಾ ಪರಿಶಿಷ್ಠ ಜಾತಿಯ ಮಂತ್ರಿಗಳ ನೇತೃತ್ವದಲ್ಲಿ ಈ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಚರ್ಚಿಸಲಾಗುವುದು ಎಂದರು

ಯಾರು ಗೊಂದಲಕ್ಕೆ ಒಳಗಾಗಬೇಡಿ ನಾವು ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಕೂಡಿಸಿಕೊಂಡು ಹೊಗಬೇಕಾಗುತ್ತೆ ಅತಿ ಹಿಂದುಳಿದ ಸಮುದಾಯಗಳಿಗೆ ನ್ಯಾಯಯುತವಾಗಿ ಅವರಿಗೆ ಅವಕಾಶವನ್ನು ಕಲ್ಪಿಸಲಾಗುವುದು ಎಂದರು

ಈ ಸಂದರ್ಭದಲ್ಲಿ ಜವಳಿ ಸಚಿವರಾದ ರುದ್ರಪ್ಪ ಲಮಾಣಿ, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಯದೇವ್ ನಾಯಕ್,ಬಿ.ಟಿ ಲಲಿತಾ ನಾಯಕ್,ಜಲಜಾನಾಯಕ್ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles