ಡಬಲ್ಸ್: ಯುಕಿ ಭಾಂಬ್ರಿ- ಗ್ಯಾಲೊವೆ ಮುನ್ನಡೆ
ಭಾರತದ ಯುಕಿ ಭಾಂಬ್ರಿ ಮತ್ತು ಅಮೆರಿಕದ ರಾಬರ್ಟ್ ಗ್ಯಾಲೊವೆ ಜೋಡಿ ನೇರ ಸೆಟ್‌ಗಳ ಗೆಲುವಿನೊಡನೆ ವಿಂಬಲ್ಡನ್ ಚಾಂಪಿಯನ್‌ಷಿಪ್ ಪುರುಷರ ಡಬಲ್ಸ್ ಎರಡನೇ ಸುತ್ತನ್ನು ತಲುಪಿತು.
16ನೇ ಶ್ರೇಯಾಂಕ ಪಡೆದಿರುವ ಭಾಂಬ್ರಿ- ಗ್ಯಾಲೊವೆ ಜೋಡಿ ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 7-6 (10-8), 6-4 ರಿಂದ ಫ್ರಾನ್ಸ್‌ನ ಮಾನ್ಯುಯೆಲ್ ಗಿನಾರ್ಡ್- ಮೊನಾಕೊದ ರೊಮೇನ್ ಅರ್ನೇಡೊ ಜೋಡಿಯನ್ನು 1 ಗಂಟೆ 49 ನಿಮಿಷಗಳ ಪಂದ್ಯದಲ್ಲಿ ಸೋಲಿಸಿತು.
ಆದರೆ ಭಾರತದ ರೋಹನ್ ಬೋಪಣ್ಣ ಮತ್ತು ಬೆಲ್ಜಿಯಂನ ಸ್ಯಾಂಡರ್ ಗಿಲ್ ಜೋಡಿ ಹೊರಬಿತ್ತು. ಈ ಜೋಡಿಯನ್ನು 6-3, 6-4ರಿಂದ ಸೋಲಿಸಿದ ಮೂರನೇ ಶ್ರೇಯಾಂಕದ ಕೆವಿನ್ ಕ್ರಾವೀಟ್ಜ್- ಟಿಮ್ ಪುಯೆಟ್ಜ್ (ಜರ್ಮನಿ) ಜೋಡಿ ಎರಡನೇ ಸುತ್ತು ತಲುಪಿತು.

