14.5 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ವಿದೇಶಿ ಸ್ಟೀಲ್‌ಗೆ ಗುಡ್‌ಬೈ: ಭಾರತದ ಆಟೋಮೊಬೈಲ್ ವಲಯಕ್ಕೆ ‘ಝಾಗ್ನೆಲಿಸ್ ಪ್ರೊಟೆಕ್ಟ್’ ಪರಿಚಯಿಸಿದ AM/NS ಇಂಡಿಯಾ

ವಿದೇಶಿ ಸ್ಟೀಲ್‌ಗೆ ಗುಡ್‌ಬೈ: ಭಾರತದ ಆಟೋಮೊಬೈಲ್ ವಲಯಕ್ಕೆ ‘ಝಾಗ್ನೆಲಿಸ್ ಪ್ರೊಟೆಕ್ಟ್’ ಪರಿಚಯಿಸಿದ AM/NS ಇಂಡಿಯಾ

ಬೆಂಗಳೂರು: ವಿಶ್ವದ ಮೂರನೇ ಅತಿದೊಡ್ಡ ವಾಹನ ಉತ್ಪಾದಕ ರಾಷ್ಟ್ರವಾಗಿರುವ ಭಾರತದ ಆಟೋಮೊಬೈಲ್ ವಲಯದಲ್ಲಿ ಮಹತ್ವದ ಮೈಲುಗಲ್ಲೊಂದು ಸೃಷ್ಟಿಯಾಗಿದೆ. ದೇಶದ ಪ್ರಮುಖ ಉಕ್ಕು ಉತ್ಪಾದನಾ ಸಂಸ್ಥೆಯಾದ ‘ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ’ ವಾಹನಗಳ ತಯಾರಿಕೆಯಲ್ಲಿ ಬಳಸುವ ಉನ್ನತ ಗುಣಮಟ್ಟದ ‘ಝಾಗ್ನೆಲಿಸ್ ಪ್ರೊಟೆಕ್ಟ್’ ಎಂಬ ಪೇಟೆಂಟ್ ಪಡೆದ ಸ್ಟೀಲ್ ಬ್ರ್ಯಾಂಡ್ ಅನ್ನು ಬುಧವಾರ ಬಿಡುಗಡೆ ಮಾಡಿದೆ.

ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖ ಗ್ರಾಹಕರ ಸಮ್ಮುಖದಲ್ಲಿ ಈ ಪ್ರೀಮಿಯಂ ಸ್ಟೀಲ್ ಅನ್ನು ಅನಾವರಣಗೊಳಿಸಲಾಯಿತು. ಇದು ಜಿಂಕ್, ಅಲ್ಯೂಮಿನಿಯಂ ಮತ್ತು ಮೆಗ್ನೀಸಿಯಮ್ ಲೇಪನವನ್ನು ಹೊಂದಿದ್ದು, ವಾಹನಗಳು ಬೇಗನೆ ತುಕ್ಕು ಹಿಡಿಯದಂತೆ ರಕ್ಷಣೆ ನೀಡುವಲ್ಲಿ ಇದು ಸಾಂಪ್ರದಾಯಿಕ ಸ್ಟೀಲ್‌ಗಿಂತ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿದೆ.

ಆಮದಿಗೆ ಬ್ರೇಕ್, ಆತ್ಮನಿರ್ಭರ್ ಭಾರತಕ್ಕೆ ಬೆಂಬಲ!

ಇದುವರೆಗೆ ಭಾರತದಲ್ಲಿ ಇಂತಹ ಉನ್ನತ ತಂತ್ರಜ್ಞಾನದ, ತುಕ್ಕು ನಿರೋಧಕ ಸ್ಟೀಲ್‌ಗಳನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳಲಾಗುತ್ತಿತ್ತು. ಪ್ರಸ್ತುತ ಭಾರತದ ಆಟೋಮೊಬೈಲ್ ವಲಯಕ್ಕೆ ಬೇಕಾದ ಶೇ. 8-10 ರಷ್ಟು ಪ್ರೀಮಿಯಂ ಸ್ಟೀಲ್ ವಿದೇಶದಿಂದಲೇ ಬರುತ್ತಿದೆ.

ಆದರೆ, ಇದೇ ಮೊದಲ ಬಾರಿಗೆ ‘ಆರ್ಸೆಲರ್ ಮಿತ್ತಲ್’ ಸಂಸ್ಥೆಯು ಯುರೋಪ್ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿರುವ ಈ ಉತ್ಪನ್ನವನ್ನು ಭಾರತದಲ್ಲೇ ಸ್ಥಳೀಯವಾಗಿ ಉತ್ಪಾದಿಸುತ್ತಿದೆ. ಇದರಿಂದ ವಾಹನ ತಯಾರಿಕಾ ಕಂಪನಿಗಳಿಗೆ ಗುಣಮಟ್ಟದ ಸ್ಟೀಲ್ ತ್ವರಿತವಾಗಿ ಲಭ್ಯವಾಗಲಿದ್ದು, ‘ಆತ್ಮನಿರ್ಭರ್ ಭಾರತ್’ (ಸ್ವಾವಲಂಬಿ ಭಾರತ) ಕನಸಿಗೂ ಇದು ದೊಡ್ಡ ಆಸರೆಯಾಗಲಿದೆ.

ಈ ಸ್ಟೀಲ್‌ನ ವಿಶೇಷತೆ ಏನು? ಎಲ್ಲಿ ಬಳಸಲಾಗುತ್ತದೆ?

ಸಾಮಾನ್ಯವಾಗಿ ವಾಹನಗಳ ಅಂಚುಗಳಲ್ಲಿ, ಮಡಿಕೆಗಳಲ್ಲಿ ಬೇಗನೆ ತುಕ್ಕು ಹಿಡಿಯುತ್ತದೆ. ಆದರೆ, ಈ ‘ಝಾಗ್ನೆಲಿಸ್ ಪ್ರೊಟೆಕ್ಟ್’ ಸ್ಟೀಲ್, ಕತ್ತರಿಸಿದ ಅಂಚುಗಳಲ್ಲೂ ತುಕ್ಕು ಹಿಡಿಯದಂತೆ ತಡೆಯುವ ಸೆಲ್ಫ್‌ ಹೀಲಿಂಗ್‌ ಸಾಮರ್ಥ್ಯ ಹೊಂದಿದೆ.

ಆರಂಭಿಕ ಹಂತದಲ್ಲಿ ಈ ಸ್ಟೀಲ್ ಅನ್ನು ಕಾರುಗಳ ವಿಂಡೋ, ಮಿರರ್, ವೈಪರ್ ಮತ್ತು ಸೀಟ್‌ಗಳಲ್ಲಿ ಬಳಸುವ ‘ಮೋಟರ್ ಕಪ್‌’ಗಳ ತಯಾರಿಕೆಗೆ ಬಳಸಲಾಗುತ್ತದೆ. ಒಂದು ಕಾರಿನಲ್ಲಿ ಸರಾಸರಿ 20 ರಿಂದ 30 ಇಂತಹ ಮೋಟರ್‌ಗಳಿರುತ್ತವೆ.

ಮುಂದಿನ ದಿನಗಳಲ್ಲಿ ಕಾರಿನ ಚಾಸಿಸ್, ಡೋರ್‌ಗಳ ಒಳಭಾಗ ಮತ್ತು ಬಾನೆಟ್ ತಯಾರಿಕೆಗೂ ಇದನ್ನು ವಿಸ್ತರಿಸಲು ಸಂಸ್ಥೆ ನಿರ್ಧರಿಸಿದೆ.

ಈ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಎಂ/ಎನ್‌ಎಸ್ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ರಂಜನ್ ಧರ್, “ಉನ್ನತ ಗುಣಮಟ್ಟದ ಸ್ಟೀಲ್ ಪರಿಹಾರಗಳ ಮೂಲಕ ಭಾರತದ ವಾಹನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ಮಾತೃ ಸಂಸ್ಥೆಗಳಾದ ‘ಆರ್ಸೆಲರ್ ಮಿತ್ತಲ್’ ಮತ್ತು ‘ನಿಪ್ಪಾನ್ ಸ್ಟೀಲ್’ನ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ, ಈ ವಿಶ್ವದರ್ಜೆಯ ಸ್ಟೀಲ್ ಅನ್ನು ಭಾರತದಲ್ಲೇ ಉತ್ಪಾದಿಸುತ್ತಿದ್ದೇವೆ. ಇದು ವಾಹನ ತಯಾರಿಕಾ ಕಂಪನಿಗಳಿಗೆ ಜಾಗತಿಕ ಗುಣಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗಲಿದೆ,” ಎಂದು ಭರವಸೆ ವ್ಯಕ್ತಪಡಿಸಿದರು.

ಭಾರತದ ಆಟೋಮೊಬೈಲ್ ಉದ್ಯಮವು ಐತಿಹಾಸಿಕ ಹಂತವನ್ನು ತಲುಪಿದ್ದು, 2025-26ನೇ ಆರ್ಥಿಕ ವರ್ಷದಲ್ಲಿ 47 ಲಕ್ಷಕ್ಕೂ ಹೆಚ್ಚು ಪ್ರಯಾಣಿಕ ವಾಹನಗಳು ಮಾರಾಟವಾಗಿವೆ. ಈ ಹಿನ್ನೆಲೆಯಲ್ಲಿ, ನವೀಕರಿಸಬಹುದಾದ ಇಂಧನ ವಲಯಕ್ಕಾಗಿ ‘ಮ್ಯಾಗ್ನೆಲಿಸ್’ ಮತ್ತು ಕಟ್ಟಡ ನಿರ್ಮಾಣಕ್ಕಾಗಿ ಬಣ್ಣದ ಲೇಪನವಿರುವ ‘ಆಪ್ಟಿಗಲ್’ ಎಂಬ ಉತ್ಪನ್ನಗಳ ಯಶಸ್ಸಿನ ಬೆನ್ನಲ್ಲೇ ಈಗ ‘ಝಾಗ್ನೆಲಿಸ್ ಪ್ರೊಟೆಕ್ಟ್’ ಅನ್ನು ಸಂಸ್ಥೆ ಪರಿಚಯಿಸಿದೆ. ಗುಜರಾತ್‌ನ ಹಜೀರಾದಲ್ಲಿ 60,000 ಕೋಟಿ ರೂ. ವೆಚ್ಚದಲ್ಲಿ ಕಂಪನಿಯು ತನ್ನ ಘಟಕವನ್ನು ವಿಸ್ತರಿಸುತ್ತಿದ್ದು, ಇದರ ಭಾಗವಾಗಿ ಈ ಸ್ಥಳೀಯ ಉತ್ಪಾದನಾ ಪ್ರಯತ್ನಗಳು ನಡೆಯುತ್ತಿವೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles