15.1 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ವಿಶ್ವದ ನಂಬರ್‌ ೧ ಚೆಸ್‌ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಎದುರು ಚೆಸ್‌ ಆಡಿದ 25 ಯುವ ಪ್ರತಿಭೆ

ವಿಶ್ವದ ನಂಬರ್‌ ೧ ಚೆಸ್‌ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಎದುರು ಚೆಸ್‌ ಆಡಿದ 25 ಯುವ ಪ್ರತಿಭೆ

ಬೆಂಗಳೂರು: ಯುವ ಚೆಸ್ ಆಟಗಾರರ ಕನಸಿಗೆ ವೇದಿಕೆಯಾಗಿದ್ದ “ಚೆಕ್‌ಮೇಟ್ ಚಾಲೆಂಜ್‌”ನಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ 25 ಯುವ ಚೆಸ್ ಪ್ರತಿಭೆಗಳು ವಿಶ್ವದ ಪ್ರಮುಖ ಚೆಸ್ ಆಟಗಾರರೊಂದಿಗೆ ಚೆಸ್‌ ಆಡುವ ಸುವರ್ಣ ಅವಕಾಶ ದೊರೆಯಿತು.

ಬೆಂಗಳೂರಿನ ಐಟಿಸಿ ವಿಂಡ್ಸರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 13ರಿಂದ 19 ವರ್ಷದೊಳಗಿನ ಬೆಂಗಳೂರು ಮತ್ತು ಚೆನ್ನೈನ ಯುವ ಆಟಗಾರರು ವಿಶ್ವ ನಂ.1 ಹಾಗೂ ಐದು ಬಾರಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್, ಭಾರತದ ಚೆಸ್ ಐಕಾನ್ ಕೋನೇರು ಹಂಪಿ, ಗ್ರ್ಯಾಂಡ್‌ಮಾಸ್ಟರ್ ವಿದಿತ್ ಗುಜರಾತಿ ಮತ್ತು ಪ್ರವೀಣ್ ಮಹದೇವ್ ಥಿಪ್ಸೆ ಅವರ ಎದುರು ಆಡುವ ಅಪರೂಪದ ಅವಕಾಶ ಪಡೆದರು.
ಅಲ್ಪೈನ್ ಎಪಿಎಲ್ ಪೈಪರ್ಸ್ ತಂಡದ ಕೋಚ್ ಗ್ರ್ಯಾಂಡ್‌ಮಾಸ್ಟರ್ ಪ್ರವೀಣ್ ಥಿಪ್ಸೆ ಅವರು, ಮೂರು ಗ್ರ್ಯಾಂಡ್‌ಮಾಸ್ಟರ್‌ಗಳ ವಿರುದ್ಧ ಬಲವಾದ ಬೋರ್ಡ್ ಸ್ಥಿತಿಯನ್ನು ಕಾಯ್ದುಕೊಂಡ ವಿವಾನ್ ಸಚ್‌ದೇವ್ ಅವರನ್ನು ಯಿಪ್ಪೀ! ಚೆಕ್‌ಮೇಟ್ ಚಾಲೆಂಜ್‌ನ ಅತ್ಯುತ್ತಮ ಆಟಗಾರರಾಗಿ ಆಯ್ಕೆ ಮಾಡಿದರು.
ಈ ಕಾರ್ಯಕ್ರಮ ಯುವ ಆಟಗಾರರಿಗೆ ಕೇವಲ ಆಟವಲ್ಲ, ಒತ್ತಡದ ಸಂದರ್ಭದಲ್ಲೂ ಶಾಂತತೆಯಿಂದ ನಿರ್ಧಾರ ತೆಗೆದುಕೊಳ್ಳುವ, ತಮ್ಮ ಕೌಶಲ್ಯವನ್ನು ಪರೀಕ್ಷಿಸಿಕೊಳ್ಳುವ ಮತ್ತು ಜಾಗತಿಕ ಚೆಸ್ ತಾರೆಯರ ಎದುರು ಆತ್ಮವಿಶ್ವಾಸದಿಂದ ಆಡಿದ ವಿಶೇಷ ಅನುಭವವಾಯಿತು. ಮಕ್ಕಳ ಸಾಧನೆಯನ್ನು ನೋಡಿದ ಪೋಷಕರು ಮತ್ತು ತರಬೇತುದಾರರಿಗೂ ಇದು ಹೆಮ್ಮೆಯ ಕ್ಷಣವಾಗಿತ್ತು.
ಈ ಕುರಿತು ಮ್ಯಾಗ್ನಸ್ ಕಾರ್ಲ್ಸನ್ ಮಾತನಾಡಿ, ಯುವ ಆಟಗಾರರ ಉತ್ಸಾಹ, ಶಕ್ತಿ ಮತ್ತು ಪರಿಶ್ರಮ ಮೆಚ್ಚುವಂತಿತ್ತು ಎಂದು ಹೇಳಿದರು. ಐಟಿಸಿ ಲಿಮಿಟೆಡ್‌ನ ಫುಡ್ಸ್ ವಿಭಾಗದ ಸ್ನ್ಯಾಕ್ಸ್ ಮತ್ತು ನೂಡಲ್ಸ್ ಮಾರ್ಕೆಟಿಂಗ್ ಮುಖ್ಯಸ್ಥ ಅತುಲ್ ಪೂಜಾರ್, ಭಾರತದ ಯುವ ಮನಸ್ಸುಗಳನ್ನು ಪ್ರೇರೇಪಿಸುವುದು ಯಿಪ್ಪೀ!ಯ ನಿರಂತರ ಪ್ರಯತ್ನವಾಗಿದೆ ಎಂದರು.
ಯಿಪ್ಪೀ!ಯ Cook. Share. Checkmate! ಸ್ಪರ್ಧೆಯ ಮೂಲಕ ಈ ಅವಕಾಶ ನೀಡಲಾಗಿದ್ದು, ಆಗಸ್ಟ್ 26ರಿಂದ ಸೆಪ್ಟೆಂಬರ್ 2ರವರೆಗೆ ಬೆಂಗಳೂರು ಮತ್ತು ಚೆನ್ನೈನಲ್ಲಿ ನಡೆದ ಸ್ಪರ್ಧೆಯಿಂದ 25 ಅಂತಿಮ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ಉಪಕ್ರಮವು ಯಿಪ್ಪೀ!ಯ #BeyondTheMove ಅಭಿಯಾನದ ಭಾಗವಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles