15.4 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಶರಣಪ್ಪ ಸುಣಗಾರ್‌ಗೆ ಎಂಎಲ್‌ಸಿ ಸ್ಥಾನ ನೀಡಿ: ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ ನೌಕರರ ವಿಭಾಗದ ರಾಜ್ಯಾಧ್ಯಕ್ಷ ಅಶೋಕ್ ಖಾನಾಪುರ ಒತ್ತಾಯ

ಶರಣಪ್ಪ ಸುಣಗಾರ್‌ಗೆ ಎಂಎಲ್‌ಸಿ ಸ್ಥಾನ ನೀಡಿ: ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ ನೌಕರರ ವಿಭಾಗದ ರಾಜ್ಯಾಧ್ಯಕ್ಷ ಅಶೋಕ್ ಖಾನಾಪುರ ಒತ್ತಾಯ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಸ್ತಿತ್ವವನ್ನು ಗಟ್ಟಿಗೊಳಿಸಿ, ಪಕ್ಷವನ್ನು ಸಂಘಟನಾತ್ಮಕವಾಗಿ ಉನ್ನತ ಮಟ್ಟಕ್ಕೆ ಕೊಂಡೊಯ್ದಿರುವ ಹಿರಿಯ ಅಹಿಂದ ನಾಯಕ ಶರಣಪ್ಪ ಸುಣಗಾರ್ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕು ಎಂದು ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ (ನೌಕರರ ವಿಭಾಗ) ರಾಜ್ಯಾಧ್ಯಕ್ಷರಾದ ಅಶೋಕ್ ಖಾನಾಪುರ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶರಣಪ್ಪ ಸುಣಗಾರ್ ಅವರ ಸುದೀರ್ಘ ರಾಜಕೀಯ ಹೋರಾಟ ಮತ್ತು ಸಮುದಾಯದ ಸೇವೆಯನ್ನು ಶ್ಲಾಘಿಸಿದರು.
ಸಂಘಟನಾ ಚತುರನಿಗೆ ಗೌರವ ಸಿಗಲಿ:
“ಶರಣಪ್ಪ ಸುಣಗಾರ್ ಅವರು 10 ವರ್ಷಗಳ ಕಾಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. 2014ರಲ್ಲಿ ಬಿಜೆಪಿ ಅಲೆ ಎಷ್ಟೇ ಜೋರಾಗಿದ್ದರೂ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯನ್ನು ಸಡಿಲವಾಗದಂತೆ ಕಾಪಾಡಿದ ನಾಯಕ ಇವರು. ಜಿಲ್ಲೆಯ ಎಲ್ಲ ಶಾಸಕರ ಗೆಲುವಿನ ಹಿಂದೆ ಇವರ ಪರಿಶ್ರಮ ಅಡಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಿಗೆ ಸೂಕ್ತ ಸ್ಥಾನಮಾನ ನೀಡುವುದು ಹೈಕಮಾಂಡ್‌ನ ಕರ್ತವ್ಯವಾಗಿದೆ” ಎಂದು ಅವರು ತಿಳಿಸಿದ್ದಾರೆ.

ತಳವಾರ ಮತ್ತು ಬುಡಕಟ್ಟು ಸಮುದಾಯಗಳ ಆಶಾಕಿರಣ:
“ಜಿಲ್ಲೆಯಲ್ಲಿ ಪ್ರಬಲವಾಗಿರುವ ತಳವಾರ ಸಮಾಜದ ಪ್ರಶ್ನಾತೀತ ನಾಯಕರಾಗಿರುವ ಸುಣಗಾರ್ ಅವರು ರಾಜ್ಯಾದ್ಯಂತ ಇರುವ ಬುಡಕಟ್ಟು ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಹಿಂದುಳಿದ ವರ್ಗಗಳ ಈ ಸಮರ್ಥ ನಾಯಕನಿಗೆ ಶಾಸನ ಸಭೆಯಲ್ಲಿ ಪ್ರಾತಿನಿಧ್ಯ ನೀಡುವುದು ಅಗತ್ಯವಾಗಿದೆ” ಎಂದು ಅಶೋಕ್ ಖಾನಾಪುರ ಪ್ರತಿಪಾದಿಸಿದರು.

ಹೈಕಮಾಂಡ್ ಮೇಲೆ ಒತ್ತಡಕ್ಕೆ ಮನವಿ:
“ಜಿಲ್ಲೆಯ ಪ್ರಭಾವಿ ಸಚಿವರಾದ ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್ ಹಾಗೂ ಶಾಸಕರುಗಳಾದ ಸಿ.ಎಸ್. ನಾಡಗೌಡ, ಯಶವಂತರಾಯಗೌಡ ಪಾಟೀಲ್ ಮತ್ತು ಅಶೋಕ ಮನಗೂಳಿ ಅವರು ಶರಣಪ್ಪ ಸುಣಗಾರ್ ಅವರ ನಾಯಕತ್ವದ ಅಗತ್ಯತೆಯನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಬೇಕು. ಅವರಿಗೆ ಈ ಬಾರಿ ವಿಧಾನ ಪರಿಷತ್ ಸ್ಥಾನ ಸಿಗುವಂತೆ ಪಟ್ಟು ಹಿಡಿಯಬೇಕು” ಎಂದು ಅವರು ವಿನಂತಿಸಿದ್ದಾರೆ.

ಪಕ್ಷದ ನಿಷ್ಠೆ, ಸಂಘಟನಾ ಶಕ್ತಿ ಮತ್ತು ದೊಡ್ಡ ಸಮುದಾಯದ ಬೆಂಬಲ ಹೊಂದಿರುವ ಶರಣಪ್ಪ ಸುಣಗಾರ್ ಅವರಿಗೆ ಎಂಎಲ್‌ಸಿ ಸ್ಥಾನ ನೀಡುವುದು ಪಕ್ಷದ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಅಶೋಕ್ ಖಾನಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles