14.6 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಶಿಕ್ಷಕರ ದಿನಾಚರಣೆಯ ಶುಭಾಶಯಗಳು!

ಲೇಖಕರು:ಭಾಸ್ಕರ ಮುದೇನೂರು
ನ್ಯಾಯವಾದಿಗಳು
ರಾಜ್ಯಾಧ್ಯಕ್ಷರು
ಅನುಚ್ಛೇದ 171(3) ತಿದ್ದುಪಡಿ ಹೋರಾಟ ಸಮಿತಿ- ಕರ್ನಾಟಕ!

ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕರ ಸಮಸ್ಯೆಗಳು ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ಮತ್ತು ಪರಿಹಾರಗಳನ್ನು ಕುರಿತು ಚರ್ಚಿಸುವ ಅಗತ್ಯವಿದೆ!

ಶಿಕ್ಷಕರು ನಮ್ಮ ಸಾಮಾಜಿಕ ವ್ಯವಸ್ಥೆಯ ಆಧಾರಸ್ತಂಭಗಳು!
ಆದರೆ ಶಿಕ್ಷಕರ ಕ್ಷೇತ್ರದ ಸಮಸ್ಯೆಗಳು ಸಾಮಾಜಿಕ ವ್ಯವಸ್ಥೆಯ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುತ್ತಿವೆ!

ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ, ಶಿಕ್ಷಕರ ನೇಮಕಾತಿ ಪ್ರಕ್ರಿಯೆಗಳು, ನೇಮಕಾತಿಯಲ್ಲಿ ವಿಳಂಬ, ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳು, ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರ ಸಮಸ್ಯೆಗಳು ಹಾಗೂ ಅವುಗಳು ಪರಿಹಾರ ಕಾಣದೆಯೇ ಮತ್ತೆ ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳುವ ಮೂಲಕ ಸಮಸ್ಯೆಯನ್ನು ಕಗ್ಗಂಟಾಗಿಸಿದೆ!
ಸರ್ಕಾರದ ಅವೈಜ್ಞಾನಿಕ ಮತ್ತು ತಮ್ಮ ಪ್ರತಿಷ್ಠೆಯ ತೆವಲಿಗಾಗಿ ಜಾತಿ ಸಮೀಕ್ಷೆ, ಎಸ್.ಐ.ಆರ್, ಹೀಗೆ ನಾನಾ ಸಮೀಕ್ಷೆಗಳಿಗಾಗಿ ಶಿಕ್ಷಕ ಸಮೂಹವನ್ನು ಬಳಸಿಕೊಳ್ಳುವ ಮೂಲಕ ಸರಕಾರಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ಆಶಯವನ್ನೇ ಬುಡಮೇಲು ಮಾಡುತ್ತಿದೆ!

ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಹಿತ ಶಿಕ್ಷಕರ ಪರವಾಗಿ ಅದೆಷ್ಟು ಶಿಕ್ಷಕರ ಕ್ಷೇತ್ರದ ಪ್ರತಿನಿಧಿಗಳು ಈ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ? ಅಥವಾ ಧ್ವನಿ ಎತ್ತದಿರಲು ಕಾರಣವಾದರೂ ಏನು ಎಂದು ಶಿಕ್ಷಕರ ಕ್ಷೇತ್ರ ಗಂಭೀರವಾಗಿ ಯೋಚಿಸುತ್ತಿಲ್ಲ ಹಾಗೂ ಆಳುವ ಜನಪ್ರತಿನಿಧಿಗಳಿಗಾಗಲಿ ಸರಕಾರಕ್ಕಾಗಲಿ ಬೇಕಾಗಿಲ್ಲ!

ರಾಜ್ಯದಲ್ಲಿ ಏಳು ಶಿಕ್ಷಕರ ಕ್ಷೇತ್ರಗಳಿವೆ! ಏಳು ಜನ ಪ್ರತಿನಿಧಿಗಳು ಏಳು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಂದಾಜು ಒಂದು ಲಕ್ಷದಿಂದ ಒಂದು ಲಕ್ಷದ ಇಪ್ಪತ್ತು ಸಾವಿರ ಮತದಾರರಿರಬಹುದು !
ಸರಕಾರಿ ಶಿಕ್ಷಕರೆಷ್ಟು? ಖಾಸಗಿ ಶಿಕ್ಷಕರು, ಅನುದಾನಿತ ಶಿಕ್ಷಕರ ಸಂಖ್ಯೆ ಎಷ್ಟು?
ಆದರೆ ಇದರಲ್ಲಿ ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಎದುರಿಸುತ್ತಿರುವ ಶಿಕ್ಷಕರ ಸಂಖ್ಯೆ ಎಷ್ಟಿದೆ?
ಈ ಮೂಲ ಪ್ರಶ್ನೆಯೇ ಶಿಕ್ಷಣ ಕ್ಷೇತ್ರದ ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣ!

ಯಾರು ವಾಸ್ತವವಾಗಿ ವರ್ಗಾವಣೆ, ನೇಮಕಾತಿಯಲ್ಲಿ ವಿಳಂಬ, ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳು, ಅತಿಥಿ ಶಿಕ್ಷಕರು ಹಾಗೂ ಅತಿಥಿ ಉಪನ್ಯಾಸಕರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಹೊಂದಿರುವುದಿಲ್ಲ!
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಮತದಾನದ ಹಕ್ಕನ್ನು ಹೊಂದಿರುವುದಿಲ್ಲವೋ ಅವರಿಗೆ ಪ್ರಾಮುಖ್ಯತೆಯೇ ಇರುವುದಿಲ್ಲ, ಅವರು ಶಿಕ್ಷಕರಾದರೂ ಅಷ್ಟೇ, ವಕೀಲರಾದರೂ ಅಷ್ಟೇ, ಪದವೀಧರರಾದರೂ ಅಷ್ಟೇ!

ಕಳೆದ ಬಾರಿ ಟಿ.ಇ.ಟಿ ಪರೀಕ್ಷೆಗೆ ಹಾಜರಾದವರ ಸಂಖ್ಯೆಯೇ 3-4 ಲಕ್ಷ! ಆದರೆ ಶಿಕ್ಷಕರ ಕ್ಷೇತ್ರದ ಏಳು ಕ್ಷೇತ್ರಗಳಲ್ಲಿನ ಮತದಾನದ ಹಕ್ಕನ್ನು ಹೊಂದಿರುವ ಶಿಕ್ಷಕರ ಸಂಖ್ಯೆ ಸುಮಾರು ಒಂದು ಲಕ್ಷ ಅಷ್ಟೇ!
ಒಂದು ಕ್ಷೇತ್ರದಲ್ಲಿ ಗರಿಷ್ಠ ಇಪ್ಪತ್ತು ಸಾವಿರ ಮತದಾರರು!
ಏಳು ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ ಒಂದು ಲಕ್ಷ!
ಯಾರು ಯಾವುದೇ ಒಂದು ಕ್ಷೇತ್ರದಲ್ಲಿ ಹನ್ನೆರಡು ಸಾವಿರ ಮತಗಳನ್ನು ಪಡೆದವರು ಜಯಗಳಿಸುತ್ತಾರೆ!
ಹದಿನಾಲ್ಕರಿಂದ ಹದಿನೈದು ಸಾವಿರ ಮತಗಳನ್ನು ಪಡೆದವರು ವಿಶ್ವದಾಖಲೆ ನಿರ್ಮಿಸಿದ್ದಾರೆ!
ಇದು ಹಾಸ್ಯಾಸ್ಪದ ವಲ್ಲವೇ?

ಮತಗಳ ಸಂಖ್ಯೆ ಹೆಚ್ಚಾದಷ್ಟು ಅಭ್ಯರ್ಥಿಗಳು ಹರಸಾಹಸ ಪಡಬೇಕಾಗುತ್ತದೆ, ಇಲ್ಲದಿದ್ದರೆ ಷೇರುದಾರರ ಚುನಾವಣೆಯಂತೆ ನಿಗದಿತ ಮತ ಬ್ಯಾಂಕ್ ಮಾಡಿಕೊಂಡು ಚುನಾವಣೆ ಎದುರಿಸುತ್ತಾರೆ!
ಅದರಲ್ಲೂ ಆ ಮತ ಬ್ಯಾಂಕ್ ನಲ್ಲಿ ಸರಕಾರಿ ಶಾಲೆಯ ಶಿಕ್ಷಕರು ಒಳಗೊಳ್ಳುತ್ತಾರೆಯೇ??

ಇನ್ನೂ ವಯೋಮಿತಿ ಮೀರಿದ, ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳು ತಮ್ಮ ಮತದಾನದ ಹಕ್ಕಿನಿಂದಲೇ ವಂಚಿತರಾಗುತ್ತಿದ್ದಾರೆ!
ಪದವೀಧರ ಶಿಕ್ಷಕರು ಹೈಸ್ಕೂಲ್ ಶಿಕ್ಷಕರ ತರಬೇತಿ ಪಡೆದರು ಸಹಿತ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ನೇಮಕಾತಿಯಾದ ಕಾರಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ!

ಪ್ರಾಥಮಿಕ ಶಾಲೆ ಶಿಕ್ಷಕರ ಮತದಾನದ ಹಕ್ಕಿಗೆ ಸಂವಿಧಾನದ ಅನುಚ್ಛೇದ 171(3)(c) ನಿರ್ಬಂಧ ಹೇರಿದೆ!

ಮತದಾನದ ಹಕ್ಕನ್ನು ಹೊಂದದ ಸಮೂಹದ ಬಗ್ಗೆ ಯಾರು ತಾನೇ ಯೋಚಿಸುತ್ತಾರೆ?
ಶಿಕ್ಷಕರ ಕ್ಷೇತ್ರದ ಚುನಾವಣೆ ಅಂದರೆ ಷೇರುದಾರರ ಚುನಾವಣೆ ಅಲ್ಲ!

ಕನಿಷ್ಠ ವಿದ್ಯಾರ್ಹತೆ ಹೊಂದದವರು ಸಹ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತ್ತು ವಿದಾನ ಸಭಾ ಸದಸ್ಯರು ಒಟ್ಟು 50 ಜನ ವಿದಾನ ಪರಿಷತ್‌ ಸದಸ್ಯರನ್ನು ಆಯ್ಕೆ ಮಾಡುತ್ತಿದ್ದಾರೆ!
ಆದರೆ ಶಿಕ್ಷಕರು, ಪದವೀಧರರು, ರೈತರು, ನ್ಯಾಯವಾದಿಗಳು ತಮ್ಮ ಕ್ಷೇತ್ರದ ಪ್ರತಿನಿಧಿಗಳನ್ನು ಹೊಂದುವುದರಿಂದ ವಂಚಿಇತರಾಗಿದ್ದಾರೆ!

ಯೋಚಿಸಿ, ವಿದಾನ ಪರಿಷತ್‌ ರಾಜಕೀಯ ನಿರಾಶ್ರಿತರ ಶಿಬಿರವಲ್ಲ!
ಮತದಾನ ನಮ್ಮ ಹಕ್ಕು, ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ!
ಅವೈಜ್ಞಾನಿಕ ಅನುಚ್ಛೇದ 171(3) ಸಂಪೂರ್ಣವಾಗಿ ತಿದ್ದುಪಡಿಯಾಗಲೇಬೇಕು!

ಭಾಸ್ಕರ ಮುದೇನೂರು
ನ್ಯಾಯವಾದಿಗಳು
ರಾಜ್ಯಾಧ್ಯಕ್ಷರು
ಅನುಚ್ಛೇದ 171(3) ತಿದ್ದುಪಡಿ ಹೋರಾಟ ಸಮಿತಿ- ಕರ್ನಾಟಕ!

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles