15.1 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಸಮೂಹ ಸಂಪನ್ಮೂಲ ಕೇಂದ್ರ ಕರಡಕಲ್ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ತಿಪನಟಗಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು

ಸಮೂಹ ಸಂಪನ್ಮೂಲ ಕೇಂದ್ರ ಕರಡಕಲ್ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತಿಪನಟಿಗಿಯಲ್ಲಿ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಕುರಿತು ಸಿ ಆರ್ ಪಿ ಸಿದ್ದರಾಮಯ್ಯ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಪ್ರತಿಯೊಂದು ಮಕ್ಕಳಲ್ಲಿ ಒಂದಿಲ್ಲ ಒಂದು ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಅಭಿವೃದ್ಧಿಪಡಿಸುವುದು ಎಲ್ಲಾ ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ ತಾಲೂಕು ಮಟ್ಟ ಜಿಲ್ಲಾಮಟ್ಟ ರಾಜ್ಯ ಹಾಗೂ ರಾಷ್ಟ್ರಮಟ್ಟದವರಿಗೆ ಕೊಂಡೊಯ್ಯುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಹಾಗಾಗಿ ಕ್ಲಸ್ಟರ್ ಇಂದ ಭಾಗವಹಿಸಿದಂತ ಎಲ್ಲಾ ಶಾಲೆಯ ಮಕ್ಕಳು ನಮ್ಮ ಮಕ್ಕಳೆಂದು ತಿಳಿದು ಒಳ್ಳೆಯ ನೈಜ ಪ್ರತಿಭೆ ಇರುವ ಮಕ್ಕಳನ್ನು ಗುರುತಿಸಿ ಆಯ್ಕೆ ಮಾಡಿ ಎಂದು ಹೇಳಿದರು ಪ್ರತಿಭಾ ಕಾರಂಜಿ ಅಂಗವಾಗಿ ತಮ್ಮ ಶಾಲಾ ಹಂತದಲ್ಲಿ ಅನೇಕ ಪಠ್ಯತರ ಚಟುವಟಿಕೆಗಳಾದ ಭಾವಗೀತೆ ಭಕ್ತಿಗೀತೆ ಅಭಿನಯ ಗೀತೆ ಕೋಲಾಟ ಜನಪದ ನೃತ್ಯ ದೇಶಭಕ್ತಿ ಗೀತೆ ಭರತನಾಟ್ಯ ಛದ್ಮ ವೇಷ ಮಿಮಿಕ್ರಿ ಹಾಸ್ಯ ಮುಂತಾದವು ಅಭ್ಯಾಸ ಮಾಡಿ ತುಂಬಾ ತಯಾರಿಯೊಂದಿಗೆ ಮಕ್ಕಳು ಬಂದಿದ್ದಾರೆ ಅವರ ಪ್ರತಿಭೆ ಕಾರಂಜಿಯಾಗಲಿ ಎಂದು ಸಿ ಆರ್ ಪಿ ಸಿದ್ದರಾಮಯ್ಯ ಅವರು ಹಾರೈಸಿದರು ಮತ್ತು ಈ ಕಾರ್ಯಕ್ರಮ ಇಷ್ಟು ಅದ್ದೂರಿಯಾಗಿ ನಡೆಯಲು ತಿಪನಟಗಿ ಗ್ರಾಮದ ಸರ್ವ ಸದಸ್ಯರು ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಕಾರಣ ಎಂದು ಹೇಳಿದರು ಅವರಿಗೆ ಧನ್ಯವಾದಗಳು ತಿಳಿಸಿದರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮುದಿನಂದಪ್ಪ ಪೂಜಾರಿ ಮುಖ್ಯ ಅತಿಥಿ ಸ್ಥಾನ ವಹಿಸಿದ ದೇವೇಂದ್ರಪ್ಪ ಹವಾಲ್ದಾರ್ ಭೀಮಣ್ಣ ರೈತ ಮುಖಂಡರು ಮಾನಪ್ಪ ಹವಾಲ್ದಾರ್ ಮಲ್ಲಪ್ಪ ದಳಪತಿ ಚೆನ್ನಪ್ಪ ಹೊಟ್ಟಿ ಚಂದ್ರಶೇಖರ್ ಮಡಗಾ ಹನುಮಂತರಾಯ ಚಿಡಬಿ ನಿಂಗಪ್ಪ ಪೂಜಾರಿ ಮುದಿನಂದಪ್ಪ ಮಾವಿನಮಟ್ಟಿ ಬಸವರಾಜ್ ಗ್ರಾಮ ಪಂಚಾಯತಿ ಸದಸ್ಯರು ಪರಮಣ್ಣ ಗ್ರಾಮ ಪಂಚಾಯತಿ ಸದಸ್ಯರು ಯಲ್ಲಪ್ಪ ಗ್ರಾಮ ಪಂಚಾಯತಿ ಸದಸ್ಯರು ರಾಮಕೃಷ್ಣ ನಾಯ್ಕೋಡಿ ಭೀಮಣ್ಣ ಚಿಡಬಿ ಎಸ್ ಡಿ ಎಮ್ ಸಿ ಅಧ್ಯಕ್ಷರು ಮಲ್ಲಪ್ಪ ಗೌಂಡಿ ವೆಂಕಪ್ಪ ಪೂಜಾರಿ ಭೀಮಣ್ಣ ಹವಾಲ್ದಾರ್ ಎಸ್ ಡಿ ಎಂ ಸಿ ಉಪಾಧ್ಯಕ್ಷರು ಭೀಮರೆಡ್ಡಿ . ನಂದಪ್ಪ ಸೂಗೂರು ರಾಯಪ್ಪ ಸೂಗೂರು ನಾಗರಾಜ್ ಕೂಡಲಗಿ ಮುಖ್ಯ ಗುರುಗಳು ಹೆಗ್ಗನದೊಡ್ಡಿ ಮಲ್ಲಣ್ಣ ಸರ್ ಪರಸನಹಳ್ಳಿ ಶಾಲೆ ಮುಖ್ಯ ಗುರುಗಳು ಮಾಣಿಕಪ್ಪ ಸರ್ ಮಾಲಗತ್ತಿ ಶಾಲೆಯ ಮುಖ್ಯ ಗುರುಗಳು ಅಬ್ದುಲ್ ಪಟೇಲ್ ಅಂಬೇಡ್ಕರ್ ಶಾಲೆಯ ಮುಖ್ಯ ಗುರುಗಳು ಹಾಗೂ ಇನ್ನಿತರರು ಭಾಗವಹಿಸಿದ್ದರು

ವರದಿಗಾರರು : ವಿಜಯಕುಮಾರ ದರ್ಶನಾಪೂರ ಮೇಲ್ವಿಚಾರಕರು ಅರಿವು ಕೇಂದ್ರ ಗ್ರಾಮ ಪಂಚಾಯತ್ ಗ್ರಂಥಾಲಯ ಮಾಲಗತ್ತಿ ತಾಲೂಕು ಸುರಪುರ ಜಿಲ್ಲಾ ಯಾದಗಿರಿ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles