15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಸರಕಾರ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ : ಶಿವು ರಾಠೋಡ

ಸರಕಾರ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ : ಶಿವು ರಾಠೋಡ

ಮಾನ್ವಿ : ಬಹುತೇಕ ಕಾರ್ಮಿಕರು ಸರಕಾರ ಸೌಲಭ್ಯದಿಂದ ವಂಚಿತರಾಗಿದ್ದು ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಕಾರ್ಮಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ನೆರವು ಕಟ್ಟಡ ಕಾರ್ಮಿಕ ಹಾಗೂ ಅಸಂಘಟಿತ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಅಶ್ವಥ.ಟಿ.ಮರಿಗೌಡ್ರುರವರ ಉದ್ದೇಶವಿರುವದರಿಂದ ಅವರ ಆದೇಶದ ಮೆರೆಗೆ ಇಂದು ಮಾನ್ವಿ ತಾಲ್ಲೂಕಿನ ಅಧ್ಯಕ್ಷರಾಗಿ ತಾಯಪ್ಪ ಆಯ್ಕೆ.

ಮಾನ್ವಿ ಪಟ್ಟಣದ ಗಾಂಧಿ ಸರ್ಕಲ್ ಹತ್ತಿರಾ ಸಂಗೀತಾ ಕಾಂಪ್ಲಕ್ಸ್ ಸಿಂಧನೂರ ರಸ್ತೆ ಮಾನ್ವಿ ಬಳಿ ಇಂದು ನೆರವು ಕಟ್ಟಡ ಕಾರ್ಮಿಕ, ಅಸಂಘಟಿತ ಸಂಘಟನೆ ನೂತನ ಕಚೇರಿ ಶಿವು ರಾಠೋಡ ಉದ್ಘಾಟಿಸಿದರು.

ಉದ್ಘಾಟಕರಾಗಿ ಮಾತನಾಡಿದರು ಅವರು ಸರಕಾರದಿಂದ ಸಿಗುವ ಸೌಲಭ್ಯದಿಂದ ವಂಚಿತ ಕಾರ್ಮಿಕರನ್ನು ಗುರುತಿಸುವ ಕೆಲಸ ಸಂಘಟನೆ ಮಾಡುತ್ತದೆ. ಕಾರ್ಮಿಕರು ಸಂಘಟನೆ ಜೊತೆಗೆ ಕೈ ಜೋಡಿಸುವ ಮೂಲಕ ಕಾರ್ಮಿಕ ಕಾರ್ಡನಿಂದ ದೊರೆಯುವ ಮದುವೆ ಸಹಾಯಧನ, ಹೆರಿಗೆ ಸಹಾಯಧನ, ಶಿಷ್ಯವೇತನ, ಅಪಘಾತ ಪರಿಹಾರ ಸಹಾಯಧನ, ಶಸ್ತ್ರ ಶಸ್ತ್ರ ಚಿಕಿತ್ಸೆ ವೈದ್ಯಕೀಯ ವೈದ್ಯಕೀಯ ಸಹಾಯ ಧನ, ಆರೋಗ್ಯ ಸೌಲಭ್ಯ, ಪಿಂಚಣಿ ಭಾಗ್ಯ ಇತ್ಯಾದಿ ಸೌಲಭ್ಯಗಳನ್ನು ಉಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಇದೆ ಸಂಧರ್ಭದಲ್ಲಿ ಮಾನ್ವಿ ತಾಲೂಕ ಅಧ್ಯಕ್ಷರನ್ನಾಗಿ ತಾಯಪ್ಪ ಈಟೇಕರ್, ಕಾರ್ಯದರ್ಶಿಯನ್ನಾಗಿ ನಾಗರಾಜ್ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘಟನೆ ರಾಯಚೂರ ಜಿಲ್ಲಾ ಅಧ್ಯಕ್ಷರು ವೆಂಕಟೇಶ ರಾಠೋಡ, ರಾಯಚೂರ ಜಿಲ್ಲಾ ಕಾರ್ಯದರ್ಶಿ ಈರಪ್ಪ ವಲ್ಕಂದಿನ್ನಿ, ತಿಮ್ಮಪ್ಪ ವಡವಾಟಿ ರಾಯಚೂರು ತಾಲೂಕು ಅಧ್ಯಕ್ಷರು, ರವಿರಾಜ್ ಸಿರವಾರ ತಾಲೂಕು ಅಧ್ಯಕ್ಷರು, ಅಶ್ವಿನ ಮಸ್ಕಿ ತಾಲೂಕು ಅಧ್ಯಕ್ಷರು, ಸುನಿಲ್ ಕುಮಾರ ಸಿಂಧನೂರು ತಾಲೂಕು ಕಾರ್ಯದರ್ಶಿ, ಮರೆಪ್ಪ ಗ್ರಾಮ ಘಟಕ ಅಧ್ಯಕ್ಷರು, ಆಂಜನೇಯ ಮಮದಾಪೂರ ಕಾರ್ಯದರ್ಶಿ, ಚಂದ್ರು ಖಜಾನ್ಸಿ ಮಮದಾಪೂರ, ನರೇಂದ್ರ ಕುಮಾರ್, ಲಕ್ಷಣ ರಾಯಚೂರು, ವೀರೇಶ್ ಜಿಲ್ಲಾ ಸಂಯೋಜಕ ರಾಯಚೂರು ಭಾವಸಾರ ಫೌಂಡೇಶನ್ ರವರು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles