15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಸಾಹಿತ್ಯ ಲೋಕದ ಅಸ್ಥಮಿತ ನಕ್ಷತ್ರ: ಡಾ. ಮೊಗಳ್ಳಿ ಗಣೇಶ್ ಅವರಿಗೆ ಶ್ರದ್ಧಾಂಜಲಿ

ಸಾಹಿತ್ಯ ಲೋಕದ ಅಸ್ಥಮಿತ ನಕ್ಷತ್ರ: ಡಾ. ಮೊಗಳ್ಳಿ ಗಣೇಶ್ ಅವರಿಗೆ ಶ್ರದ್ಧಾಂಜಲಿ

ನಾಡಿನ ಹೆಮ್ಮೆಗೇನಾದ ಸಾಹಿತಿ, ವಿಮರ್ಶಕ ಹಾಗೂ ಸಂಶೋಧಕ ಡಾ. ಮೊಗಳ್ಳಿ ಗಣೇಶ್ ಅವರ ಹಠಾತ್ ನಿಧನವು ಕನ್ನಡ ಸಾಹಿತ್ಯ ಲೋಕಕ್ಕೆ ಅಪ್ರತಿಮ ನಷ್ಟವಾಗಿದೆ. ಅವರ ಅಗಲಿಕೆಯ ಸುದ್ದಿ ಕೇವಲ ಸಾಹಿತ್ಯ ವಲಯವನ್ನಷ್ಟೇ ಅಲ್ಲ, ಸಂಪೂರ್ಣ ಸಂಸ್ಕೃತಿಜಗತ್ತನ್ನೇ ದುಃಖದ ಮೌನಕ್ಕೆ ದೂಡಿದೆ.

ಕತೆ, ಕಾವ್ಯ, ಕಾದಂಬರಿ, ವಿಮರ್ಶೆ, ಸಂಶೋಧನೆ — ಯಾವ ಸಾಹಿತ್ಯ ಪ್ರಕಾರದಲ್ಲಾದರೂ ಅವರಿಗಿತ್ತು ವಿಶಿಷ್ಟ ಗುರುತು. ಕನ್ನಡದ ಮಣ್ಣಿನಲ್ಲಿ ಬೇರು ಬಿಟ್ಟ ಅವರ ಸಾಹಿತ್ಯದ ನೋಟ ಜಾನಪದ ಸುವಾಸನೆ, ಗ್ರಾಮ್ಯಜೀವನದ ನಿಜಸ್ವರೂಪ ಮತ್ತು ಸಾಮಾಜಿಕ ವಿಚಾರಧಾರೆಗಳನ್ನು ಒಳಗೊಂಡಿತ್ತು. ಅವರ ಬರವಣಿಗೆಗೆ ಪ್ರಾಮಾಣಿಕತೆಯ ನಂಟು, ನಿಷ್ಠೆಯ ನೇರತೆ ಮತ್ತು ಜನಪರ ನಿಲುವು ಎನ್ನುವುದು ಹಳೇ ಶೈಲಿಯಲ್ಲದ ಹೊಸ ಧ್ವನಿಯಾಗಿತ್ತು.

ಡಾ. ಮೊಗಳ್ಳಿ ಗಣೇಶ್ ಅವರು ಕೇವಲ ಬರಹಗಾರರಲ್ಲ; ಅವರು ಚಿಂತಕರೂ, ಸಂಶೋಧಕರೂ, ಅಧ್ಯಯನಶೀಲರೂ ಆಗಿದ್ದರು. ಅವರು ಸತ್ಯದ ಮಾರ್ಗದಲ್ಲಿ ನಿಲ್ಲುವುದಕ್ಕೆ ಹಿಂಜರಿಯಲಿಲ್ಲ. ತಮ್ಮ ದೃಢ ನಿಲುವು ಮತ್ತು ನಿಖರವಾದ ವಿಚಾರಧಾರೆಗಳಿಂದ ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕು ನೀಡಿದರು.

ಅವರ ಹಠಾತ್ ನಿರ್ಗಮನದಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ, ಖಾಲಿಯಾಗಿದೆ. ಅವರ ಕಲ್ಪನೆಗಳು, ಬರಹಗಳು, ಮತ್ತು ಜೀವನದ ಸತ್ಯನಿಷ್ಠ ಹಾದಿ ಮುಂದಿನ ಪೀಳಿಗೆಗೆ ಶಾಶ್ವತ ಪ್ರೇರಣೆಯಾಗಿ ಉಳಿಯಲಿವೆ.

ಡಾ. ಮೊಗಳ್ಳಿ ಗಣೇಶ್ ಅವರಿಗೆ ಹೃತ್ಪೂರ್ವಕ ಶ್ರದ್ಧಾಂಜಲಿ.
ಅವರ ಕುಟುಂಬ, ಬಂಧುಗಳು ಮತ್ತು ಸ್ನೇಹಿತರ ದುಃಖದಲ್ಲಿ ಇಡಿ ಸಮಾಜ ಹೃದಯಪೂರ್ವಕವಾಗಿ ಭಾಗಿಯಾಗಿತ್ತದೆ
ಕನ್ನಡ ಸಾಹಿತ್ಯ ಲೋಕವು ಸದಾ ಅವರನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತದೆ.

ವರದಿ-ಆಂಜನಯ.ಮಟ್ಟೂರ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles