15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಸಿದ್ದರಾಮಯ್ಯ ಗುರುವಾರ ರಾಜೀನಾಮೆ ಸಾಧ್ಯತೆ; ಕರ್ನಾಟಕಕ್ಕೆ ಹೊಸ CM, 4 DCM ಹುದ್ದೆಗಳು – ಯಾರಿಗೆಲ್ಲಾ ಅವಕಾಶ?


ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಪ್ರಕ್ರಿಯೆ ಚುರುಕುಗೊಂಡಿದ್ದು, ಸಿಎಂ ಸಿದ್ದರಾಮಯ್ಯ ಗುರುವಾರ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಹೊಸ ಮುಖ್ಯಮಂತ್ರಿ ಆಯ್ಕೆ ಹಾಗೂ ನಾಲ್ವರು ಉಪಮುಖ್ಯಮಂತ್ರಿಗಳ ನೇಮಕಕ್ಕೆ ಹೈಕಮಾಂಡ್ ಸಿದ್ಧತೆ ನಡೆಸಿದೆ. ಡಿ.ಕೆ. ಶಿವಕುಮಾರ್ ಅಥವಾ ಡಾ. ಜಿ. ಪರಮೇಶ್ವರ್ ಹೆಸರು ಸಿಎಂ ಸ್ಥಾನಕ್ಕೆ ಕೇಳಿಬರುತ್ತಿದ್ದು, ಸುರ್ಜೇವಾಲಾ ಬೆಂಗಳೂರಿಗೆ ಆಗಮಿಸಿದ ಬಳಿಕ ಅಂತಿಮ ನಿರ್ಧಾರ ಪ್ರಕಟವಾಗುವ ನಿರೀಕ್ಷೆಯಿದೆ.


ಬೆಂಗಳೂರು: ರಾಜ್ಯದ ನಾಯಕತ್ವದ ವಿಚಾರದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಮಹತ್ವದ ನಿರ್ಧಾರ ಕೈಗೊಂಡಿದೆ. ಗುರುವಾರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಿದೆ. ಶೀಘ್ರದಲ್ಲಿಯೇ ಕರ್ನಾಟಕಕ್ಕೆ ಹೊಸ ಸಿಎಂ ಆಯ್ಕೆಯಾಗಲಿದ್ದು, 4 ಮಂದಿ ಡಿಸಿಎಂ ಆಗಿ ಅಧಿಕಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ನೇತೃತ್ವದಲ್ಲಿ ದಿಲ್ಲಿಯಲ್ಲಿ ಮಂಗಳವಾರ ನಡೆಸಲಾದ ಸರಣಿ ಸಭೆಗಳಲ್ಲಿಕರ್ನಾಟಕದ ನಾಯಕತ್ವದ ಸಂಘರ್ಷಕ್ಕೆ ಪರಿಹಾರ ಸೂತ್ರವನ್ನು ಹೈಕಮಾಂಡ್‌ ರಚಿಸಿದೆ. ಈ ಕುರಿತು ಸಿಎಂ ಹಾಗೂ ಡಿಸಿಎಂಗೂ ಮಾಹಿತಿ ನೀಡಿದೆ.

ಸಿದ್ದರಾಮಯ್ಯ ಅವರನ್ನು ರಾಜ್ಯಸಭೆಗೆ ಕರೆಸಿಕೊಂಡು, ರಾಜ್ಯ ನಾಯಕತ್ವವನ್ನು ಬದಲಾಯಿಸುವ ರಾಹುಲ್ ಗಾಂಧಿ ಅವರ ಮಾತಿಗೆ ಸಿದ್ದರಾಮಯ್ಯ ಭಾಗಶಃ ಒಪ್ಪಿದ್ದು, ರಾಜ್ಯ ರಾಜಕಾರಣದಲ್ಲಿಯೇ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ ಹೈಕಮಾಂಡ್‌ ಕೂಡ ಸಿದ್ದರಾಮಯ್ಯ ನಾಯಕತ್ವವನ್ನು ಗೌರವಯುತವಾಗಿಯೇ ಬದಲಾಯಿಸಲು ಎಲ್ಲವ್ಯವಸ್ಥೆ ಮಾಡಿಕೊಂಡಿದೆ.

ಡಿಕೆ ಶಿವಕುಮಾರ್ ಬಿಟ್ಟರೆ ಸಿಎಂ ಸ್ಥಾನಕ್ಕೆ ಪ್ರಮುಖ ಹೆಸರು ಯಾರದ್ದು?
ಸಿಎಂ ಸ್ಥಾನಕ್ಕೆ ಕಳೆದ 3 ವರ್ಷದಿಂದ ಹೋರಾಟ ನಡೆಸುತ್ತಿರುವ ಡಿಕೆ ಶಿವಕುಮಾರ್ ಹೆಸರು ಮುಂಚೂಣಿಯಲ್ಲಿದೆ. ಅವರನ್ನು ಬಿಟ್ಟರೆ ಡಾ. ಜಿ ಪರಮೇಶ್ವರ್ ಅವರು ಹೆಸರು ಕೇಳಿ ಬರುತ್ತಿದೆ. ಇನ್ನೂ ಕಾಂಗ್ರೆಸ್‌ ಪಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ಕೊಟ್ಟು ಗೌರವ ಸಲ್ಲಿಸುವ ನಿಟ್ಟಿನಲ್ಲಿಯೂ ಚಿಂತನೆ ನಡೆಸುತ್ತಿದೆ.
ಡಿಕೆ ಶಿವಕುಮಾರ್
ಡಾ ಜಿ ಪರಮೇಶ್ವರ್
ಮಲ್ಲಿಕಾರ್ಜುನ ಖರ್ಗೆ

4 ಡಿಸಿಎಂ ಹುದ್ದೆ ರಚನೆಯಾದರೆ ಯಾರಿಗೆಲ್ಲಾ ಅವಕಾಶ ಸಾಧ್ಯತೆ?
ಕ್ರಮ ಸಂಖ್ಯೆ ಆಕಾಂಕ್ಷಿಯ ಹೆಸರು ಪ್ರಸ್ತುತ ಖಾತೆ (ಸಚಿವರು) ಸಮುದಾಯ / ವರ್ಗ ವಿಶೇಷತೆ / ಕಾರಣ
1 ಡಾ. ಜಿ. ಪರಮೇಶ್ವರ್ ಗೃಹ ಇಲಾಖೆ ದಲಿತ ಈ ಹಿಂದೆ ಡಿಸಿಎಂ ಆಗಿ ಕೆಲಸ ಮಾಡಿದ ಅನುಭವ ಹೊಂದಿರುವ ಹಿರಿಯ ನಾಯಕ.
2 ಎಂ.ಬಿ. ಪಾಟೀಲ್ ಬೃಹತ್ ಕೈಗಾರಿಕೆ ಲಿಂಗಾಯತ ಉತ್ತರ ಕರ್ನಾಟಕದ ಪ್ರಬಲ ಲಿಂಗಾಯತ ನಾಯಕ ಮತ್ತು ಸಿದ್ದರಾಮಯ್ಯ ಆಪ್ತರು.
3 ಸತೀಶ್ ಜಾರಕಿಹೊಳಿ ಲೋಕೋಪಯೋಗಿ (PWD) ಪರಿಶಿಷ್ಟ ಪಂಗಡ ಅಹಿಂದ ವರ್ಗದ ಪ್ರಭಾವಿ ನಾಯಕ, ಬೆಳಗಾವಿ ಭಾಗದಲ್ಲಿ ಹಿಡಿತ ಹೊಂದಿದ್ದಾರೆ.
4 ರಾಮಲಿಂಗಾರೆಡ್ಡಿ ಸಾರಿಗೆ ಮತ್ತು ಮುಜರಾಯಿ ರೆಡ್ಡಿ ಬೆಂಗಳೂರಿನ ಹಿರಿಯ ನಾಯಕ, ಪಕ್ಷ ಸಂಘಟನೆಯಲ್ಲಿ ದಶಕಗಳ ಅನುಭವ.
5 ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ವಸತಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.
6 ಕೆ.ಎಚ್. ಮುನಿಯಪ್ಪ ಆಹಾರ ಮತ್ತು ನಾಗರಿಕ ಸರಬರಾಜು ದಲಿತ ಹಿರಿಯ ನಾಯಕ, ದಲಿತ ಎಡಗೈ ಸಮುದಾಯದ ಪ್ರಾತಿನಿಧ್ಯಕ್ಕಾಗಿ ಪಟ್ಟು.
7 ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ದಲಿತ ಎಐಸಿಸಿ ಅಧ್ಯಕ್ಷರ ಪುತ್ರ ಹಾಗೂ ಹೈಕಮಾಂಡ್ ವಲಯದಲ್ಲಿ ಪ್ರಭಾವಿ.
8 ಈಶ್ವರ್ ಖಂಡ್ರೆ ಅರಣ್ಯ ಮತ್ತು ಪರಿಸರ ಲಿಂಗಾಯತ ಉತ್ತರ ಕರ್ನಾಟಕದ ಪ್ರಬಲ ನಾಯಕ ಹಾಗೂ ಲಿಂಗಾಯತ ಸಮುದಾಯದ ಪ್ರಾತಿನಿಧ್ಯ.
9 ಎಚ್.ಸಿ. ಮಹಾದೇವಪ್ಪ ಸಮಾಜ ಕಲ್ಯಾಣ ದಲಿತ ಹಳೆ ಮೈಸೂರು ಭಾಗದ ಹಿರಿಯ ನಾಯಕ ಹಾಗೂ ಸಿಎಂ ಆಪ್ತರು.


ಸುರ್ಜೇವಾಲಾ ಬೆಂಗಳೂರಿಗೆ
ಮುಂದಿನ ಪ್ರಕ್ರಿಯೆಗಳಿಗಾಗಿ ಸುರ್ಜೇವಾಲಾ ಬೆಂಗಳೂರಿಗೆ ಬುಧವಾರ ಆಗಮಿಸಲಿದ್ದಾರೆ. ನಾಯಕತ್ವದ ಕುರಿತ ಕುತೂಹಲಕ್ಕೆ ಬಹುತೇಕ ಗುರುವಾರವೇ ತೆರೆ ಬೀಳುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ಹೇಳುತ್ತವೆ.

ಕಳೆದ ಐದಾರು ತಿಂಗಳಿಂದಲೂ ರಾಜ್ಯದಲ್ಲಿ ಕುರ್ಚಿ ಕದನ ನಡೆಯುತ್ತಿದೆ. ಇದಕ್ಕೊಂದು ಪರಿಹಾರ ಸೂತ್ರ ಕಂಡು ಹಿಡಿಯಲು ಎಐಸಿಸಿ ಅಂಗಳದಲ್ಲಿಸಭೆ ನಡೆಸಲಾಗುತ್ತಿದೆ ಎಂಬ ಸುಳಿವಂತೂ ಇತ್ತು. ಆದರೆ, ರಾಜ್ಯಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಸಿಎಂ ಮತ್ತು ಡಿಸಿಎಂರನ್ನು ದಿಲ್ಲಿಗೆ ಕರೆಸಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸಿಗರೇ ಹೇಳಿಕೊಂಡಿದ್ದರು.


ದಿನವಿಡೀ ನಡೆದ ಸಭೆ ಸಂಘರ್ಷ ಇತ್ಯರ್ಥ
ದಿಲ್ಲಿಯ ಎಐಸಿಸಿ ಕಚೇರಿಯಲ್ಲಿ ಮಂಗಳವಾರ ದಿನವಿಡೀ ಸಭೆ ನಡೆಯಿತು. ನಾಯಕತ್ವದ ಸಂಘರ್ಷ ಇತ್ಯರ್ಥಕ್ಕೆ ಮಾತುಕತೆ ನಡೆಯಿತಾದರೂ ಈ ಸಂಗತಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಮರೆಮಾಚಿಸಿದರು. ಅಂತಹ ಚರ್ಚೆಯೇ ನಡೆದಿಲ್ಲ. ಅವೆಲ್ಲವೂ ಊಹಾಪೋಹ. ರಾಜ್ಯಸಭೆ, ಪರಿಷತ್‌ ಚುನಾವಣೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ಸಭೆ ನಡೆಸಲಾಯಿತು ಎಂದು ಮಾಧ್ಯಮಗಳ ಮುಂದೆ ವೇಣುಗೋಪಾಲ್‌ ಹೇಳಿ ಕೈತೊಳೆದುಕೊಂಡರು. ಯಾವುದೇ ಪ್ರಶ್ನೆಗೆ ಉತ್ತರಿಸುವುದಿಲ್ಲಎಂದೂ ಹೈಕಮಾಂಡ್‌ ನಾಯಕರು ಜಾರಿಕೊಂಡರು. (ರಾಹುಲ್‌ ಗಾಂಧಿಗೆ ಆಫರ್‌ ಕೊಟ್ಟ ಸಿದ್ದರಾಮಯ್ಯ)

ರಾಜ್ಯಸಭೆ ಚುನಾವಣೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವುದಿದ್ದರೆ ಅದಕ್ಕಾಗಿ ದಿನ ಪೂರ್ತಿ ಸಭೆ ನಡೆಸುವ ಅಗತ್ಯವಿರಲಿಲ್ಲ. ಅಷ್ಟಕ್ಕೂ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಅಕ್ಕಪಕ್ಕ ಕೂರಿಸಿಕೊಂಡು ಹೈಕಮಾಂಡ್‌ ಪ್ರತಿನಿಧಿಗಳು ಮಾತುಕತೆ ನಡೆಸಿಯೇ ಇಲ್ಲ. ಉಭಯರೊಂದಿಗೂ ಪ್ರತ್ಯೇಕವಾಗಿ ಸಮಲೋಚನೆ ನಡೆಸಿದ್ದಾರೆ. ಈ ಪ್ರಕ್ರಿಯೆಯಲ್ಲಿಸಿದ್ದರಾಮಯ್ಯ ಅವರೊಂದಿಗಿನ ಮಾತುಕತೆಗೆ ಹೆಚ್ಚು ಸಮಯ ಮೀಸಲಿಡಲಾಗಿತ್ತು. ಪಕ್ಷದ ವರಿಷ್ಠ ರಾಹುಲ್‌ ಗಾಂಧಿ ಒಂದು ತಾಸಿಗೂ ಹೆಚ್ಚು ಹೊತ್ತು ಸಿಎಂರೊಂದಿಗೆ ಚರ್ಚಿಸಿದ್ದಾರೆ ಎಂಬ ಮಾಹಿತಿಯಿದೆ. ಅಚ್ಚರಿಯೆಂದರೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ರಾಹುಲ್‌ ಪ್ರತ್ಯೇಕ ಭೇಟಿ ಮಾಡಿಯೇ ಇಲ್ಲ. ವೇಣುಗೋಪಾಲ್‌ ಸಹಿತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಡಿಸಿಎಂರೊಂದಿಗೆ ಸಭೆ ನಡೆಸಿದ್ದಾರೆ ಎನ್ನಲಾಗಿದೆ.
[5/27, 10:51 AM] ambiganews: ಸಿದ್ದರಾಮಯ್ಯನವರೇ 2028ರ ವರೆಗೆ ಸಿಎಂ ಆಗಿ ಮುಂದುವರಿಯಬೇಕು: ಅಹಿಂದ ಸಂಘಟನೆಯಿಂದ ಹೈಕಮಾಂಡ್‌ಗೆ ಅಂತಿಮ ಎಚ್ಚರಿಕೆ

ಬೆಂಗಳೂರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸುವ ಯಾವುದೇ ಪ್ರಯತ್ನಗಳು ನಡೆದರೆ, ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಅಹಿಂದ ಸಂಘಟನೆ ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದೆ. ಸಿದ್ದರಾಮಯ್ಯನವರು ತಮ್ಮ ಪೂರ್ಣಾವಧಿಯಾದ 2028ರ ವರೆಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲೇಬೇಕು ಎಂಬುದು ಅಹಿಂದ ಸಂಘಟನೆಯ ದೃಢ ನಿರ್ಧಾರವಾಗಿದೆ.

ಈ ಕುರಿತು ರಾಜ್ಯದ 31 ಜಿಲ್ಲೆಗಳ ಪದಾಧಿಕಾರಿಗಳು ಒಮ್ಮತದ ನಿರ್ಧಾರ ಕೈಗೊಂಡಿದ್ದು, ಸಿಎಂ ಬದಲಾವಣೆ ಚರ್ಚೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೈಕಮಾಂಡ್‌ಗೆ ಎಚ್ಚರಿಕೆ ಮತ್ತು ಬೇಡಿಕೆಗಳು:
ಸಂಘಟನೆಯ ಗೌರವ ಅಧ್ಯಕ್ಷ ಸಿದ್ದಣ್ಣ ತೇಜಿ ಹಾಗೂ ರಾಜ್ಯಾಧ್ಯಕ್ಷರು ಪ್ರಭುಲಿಂಗ ದೊಡ್ಡಿಣಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಪಕ್ಷದ ಹೈಕಮಾಂಡ್ ತಕ್ಷಣವೇ ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಲಾಗಿದೆ. “ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತವಾಗದಂತೆ ಮುಂದುವರಿಯುತ್ತಿದೆ. ಇಂತಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಎಂಬ ಮಾತುಗಳು ಬಂದರೆ, ಅಹಿಂದ ವರ್ಗದವರು ಸುಮ್ಮನಿರುವುದಿಲ್ಲ. ಇದು ಕೇವಲ ಒಂದು ಸಂಘಟನೆಯ ಮಾತಲ್ಲ, ಇದು ರಾಜ್ಯದ ಮೂಲೆ ಮೂಲೆಗಳಲ್ಲಿರುವ ಅಹಿಂದ ವರ್ಗದ ಧ್ವನಿ” ಎಂದು ಪ್ರಭುಲಿಂಗ ದೊಡ್ಡಿಣಿ ತಿಳಿಸಿದ್ದಾರೆ.

ಜಿಲ್ಲಾ ಮತ್ತು ತಾಲೂಕು ಮಟ್ಟದ ಆಕ್ರೋಶ:
ರಾಜ್ಯದ 31 ಅಹಿಂದ ಜಿಲ್ಲಾಧ್ಯಕ್ಷರು ಮತ್ತು 240 ತಾಲೂಕು ಅಧ್ಯಕ್ಷರು ಈ ಹೋರಾಟದ ನೇತೃತ್ವ ವಹಿಸಲಿದ್ದಾರೆ.

ಮುಂದಿನ ದಿನಗಳಲ್ಲಿ ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಪಕ್ಷದ ವರಿಷ್ಠರಿಗೆ ರಾಜ್ಯದ ಜನತೆಯ ನಾಡಿಮಿಡಿತವನ್ನು ತಿಳಿಸಲಾಗುವುದು.
ಉಗ್ರ ಹೋರಾಟ ಸಿಎಂ ಬದಲಾವಣೆ ಅನಿವಾರ್ಯವಾದರೆ ಅಥವಾ ಸಂಚು ನಡೆದರೆ, ರಸ್ತೆಗಿಳಿದು ಹೋರಾಟ ನಡೆಸಲು ಸಂಘಟನೆ ಸಜ್ಜಾಗಿದೆ.


ಈ ಹೋರಾಟಕ್ಕೆ ರಾಜ್ಯದಾದ್ಯಂತ ಪ್ರಮುಖ ಪದಾಧಿಕಾರಿಗಳು ಬೆಂಬಲ ಸೂಚಿಸಿದ್ದಾರೆ:

ಗೌರವಾಧ್ಯಕ್ಷರು:ಸಿದ್ದಣ್ಣ ತೇಜಿ
ರಾಜ್ಯ ಪ್ರಧಾನ ಕಾರ್ಯದರ್ಶಿ: ಬೀರಲಿಂಗ ಪೂಜಾರಿ
ರಾಜ್ಯ ಉಪಾಧ್ಯಕ್ಷರು: ಸದಾನಂದ ಹುಗ್ಗಿ, ಸಿ ಮಾಲೆಗೌಡರು, ರಾಜು ಕಂಬಾಗಿ
ರಾಜ್ಯ ಸಂಘಟನಾ ಕಾರ್ಯದರ್ಶಿಗಳು: ವಿಠಲ ಗೌಡ ಬಿರಾದಾರ್, ಕರಿಯಪ್ಪ ಕರಿಗಾರ, ಭಟ್ಟಿ ಎರಿಸ್ವಾಮಿ, ಮಾಲತೇಶ ಬಣಕಾರ್, ಪ್ರಕಾಶ್ ದೊಡ್ಡಮನಿ
ಸಾಮಾಜಿಕ ಜಾಲತಾಣ ರಾಜ್ಯಾಧ್ಯಕ್ಷರು: ಸಂಗಪ್ಪ ಗುಳ್ಳನವರು
ಯುವ ಘಟಕ ಅಧ್ಯಕ್ಷರು:ಶಂಕರ್ ಹೆಗಡೆ, ಎಂ ಮಹೇಶ್ (ಚಾಮರಾಜನಗರ), ಶಿವಣ್ಣ (SC ಘಟಕ)

ಎಂ ಕೃಷ್ಣಪ್ಪ, ವಿಠ್ಠಲ ಪೂಜಾರಿ, ಬಕ್ಸರಅಲಿ ಮುಲ್ಲಾ, ಶ್ರೀಶೈಲ ಕೌಲಗಿ, ಮೋಹನ್ ದಳವಾಯಿ.

ಜಿಲ್ಲಾ ಘಟಕಗಳ ಬಲ:
ಬೆಂಗಳೂರು, ಮೈಸೂರು, ಬೆಳಗಾವಿ, ವಿಜಯಪುರ, ಬಳ್ಳಾರಿ, ಕಲಬುರಗಿ ಸೇರಿದಂತೆ ರಾಜ್ಯದ ಎಲ್ಲಾ 31 ಜಿಲ್ಲೆಗಳ ಜಿಲ್ಲಾಧ್ಯಕ್ಷರು ಈ ಹೋರಾಟದ ಭಾಗವಾಗಿದ್ದಾರೆ. ಸಂಘಟನೆಯು ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಪದಾಧಿಕಾರಿಗಳ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು, ಸಂಘಟನಾತ್ಮಕವಾಗಿ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಹಿಂದ ನಾಯಕರು
ಸಂಪರ್ಕಿಸುವಂತೆ:
ಪ್ರಭುಲಿಂಗ ದೊಡ್ಡಿಣಿ, ಅಹಿಂದ ರಾಜ್ಯಾಧ್ಯಕ್ಷರು ತಮ್ಮ
ದೂರವಾಣಿ: 9665303720 ಸಂಖ್ಯೆ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles