15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಹೃದಯ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ: ಭಾರತಕ್ಕೆ ಬಂತು 3D ಮ್ಯಾಪಿಂಗ್ ಆಧಾರಿತ ‘ವೇರಿಪಲ್ಸ್ ಪ್ಲಾಟ್‌ಫಾರ್ಮ್’; ಏನಿದು ತಂತ್ರಜ್ಞಾನ?

ಹೃದಯ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ: ಭಾರತಕ್ಕೆ ಬಂತು 3D ಮ್ಯಾಪಿಂಗ್ ಆಧಾರಿತ ‘ವೇರಿಪಲ್ಸ್ ಪ್ಲಾಟ್‌ಫಾರ್ಮ್’; ಏನಿದು ತಂತ್ರಜ್ಞಾನ?

ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ, ಅದರಲ್ಲೂ ವಿಶೇಷವಾಗಿ ‘ಏಟ್ರಿಯಲ್ ಫಿಬ್ರಿಲೇಷನ್’ ಸಮಸ್ಯೆಯಿರುವ ರೋಗಿಗಳಿಗೆ ಚಿಕಿತ್ಸೆ ನೀಡಲೆಂದೇ ‘ಜಾನ್ಸನ್ & ಜಾನ್ಸನ್’ ಸಂಸ್ಥೆಯು ಹೊಸ ತಂತ್ರಜ್ಞಾನವೊಂದನ್ನು ಪರಿಚಯಿಸಿದೆ. ‘ವೇರಿಪಲ್ಸ್ ಪ್ಲಾಟ್‌ಫಾರ್ಮ್’ ಎಂದು ಇದಕ್ಕೆ ಹೆಸರಿಡಲಾಗಿದ್ದು, ಭಾರತದಲ್ಲಿ ಮೊದಲ ಬಾರಿಗೆ ಈ ತಂತ್ರಜ್ಞಾನದ ಬಳಕೆಗೆ ಅಧಿಕೃತ ಅನುಮೋದನೆ ದೊರೆತಿದೆ. ಇದು ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಏನಿದು ಏಟ್ರಿಯಲ್ ಫಿಬ್ರಿಲೇಷನ್?

ಏಟ್ರಿಯಲ್ ಫಿಬ್ರಿಲೇಷನ್ ಹೃದಯದ ಮೇಲ್ಭಾಗದಲ್ಲಿ (ಏಟ್ರಿಯಾ) ವಿದ್ಯುತ್ ಸಂಕೇತಗಳ ಏರುಪೇರಿನಿಂದ ಬರುವ ಸಮಸ್ಯೆಯಾಗಿದೆ. ಇದರಿಂದ ಹೃದಯಬಡಿತ ಅನಿಯಮಿತವಾಗಿ ಮತ್ತು ಅತಿ ವೇಗವಾಗಿ ಹೊಡೆದುಕೊಳ್ಳುತ್ತದೆ. ವಯಸ್ಸು, ಜೀವನಶೈಲಿ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದಾಗಿ ಇದು ಕಾಣಿಸಿಕೊಳ್ಳಬಹುದು. ಒಂದೊಮ್ಮೆ ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಇದು ಪಾರ್ಶ್ವವಾಯು, ಹೃದಯ ವೈಫಲ್ಯ ಮತ್ತು ಅಕಾಲಿಕ ಮರಣಕ್ಕೂ ಕಾರಣವಾಗಬಹುದು.

ಹೇಗೆ ಕೆಲಸ ಮಾಡುತ್ತದೆ ಈ ವೇರಿಪಲ್ಸ್ ತಂತ್ರಜ್ಞಾನ?

ಈ ಹೊಸ ವೇರಿಪಲ್ಸ್ ಪ್ಲಾಟ್‌ಫಾರ್ಮ್ ‘ಪಲ್ಸ್ಡ್ ಫೀಲ್ಡ್ ಅಬ್ಲೇಶನ್’ (ಪಿಎಫ್‌ಎ) ಎಂಬ ತಂತ್ರಜ್ಞಾನದ ಆಧಾರದ ಮೇಲೆ ಕೆಲಸ ಮಾಡುತ್ತದೆ. ಇದರ ವಿಶೇಷತೆ ಎಂದರೆ, ಇದನ್ನು ‘ಕಾರ್ಟೊ 3’ ಎಂಬ 3ಡಿ ಮ್ಯಾಪಿಂಗ್ ಸಿಸ್ಟಮ್‌ಗೆ ಜೋಡಿಸಲಾಗಿದೆ.

ಇದರಿಂದ ವೈದ್ಯರಿಗೆ ಹೃದಯದ ಒಳಭಾಗದ ನೈಜ ಚಿತ್ರಣ ಕಂಪ್ಯೂಟರ್ ಪರದೆಯ ಮೇಲೆ ಸ್ಪಷ್ಟವಾಗಿ ಕಾಣುತ್ತದೆ. ಇದರಿಂದ ಸಮಸ್ಯೆಯಿರುವ ನಿರ್ದಿಷ್ಟ ಜಾಗವನ್ನು ನಿಖರವಾಗಿ ಗುರುತಿಸಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಪ್ರಪಂಚದಾದ್ಯಂತ ಈಗಾಗಲೇ 80 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಈ ತಂತ್ರಜ್ಞಾನದ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಕಂಪನಿ ತಿಳಿಸಿದೆ.

ರೋಗಿಗಳಿಗೆ ಇದರಿಂದ ಏನೆಲ್ಲಾ ಲಾಭ?

  • ಇದು ಚಿಕಿತ್ಸೆಯ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ವೈದ್ಯರಿಗೆ ಹೆಚ್ಚು ನಿಖರತೆ ಒದಗಿಸುತ್ತದೆ.
  • ಸಾಂಪ್ರದಾಯಿಕ ಚಿಕಿತ್ಸೆಗಳಲ್ಲಿ ಬಳಸಲಾಗುವ ಎಕ್ಸ್-ರೇ ವಿಕಿರಣಗಳ ಬಳಕೆಯನ್ನು ಇದು ಗಣನೀಯವಾಗಿ ಕಡಿಮೆ ಮಾಡುತ್ತದೆ ಅಥವಾ ಸಂಪೂರ್ಣವಾಗಿ ತಡೆಯುತ್ತದೆ. ಇದರಿಂದ ರೋಗಿಗಳಿಗೆ ವಿಕಿರಣದ ಅಪಾಯವಿರುವುದಿಲ್ಲ.
  • ರೋಗಿಗೆ ಅರಿವಳಿಕೆ ನೀಡಿಯೂ ಈ ಚಿಕಿತ್ಸೆಯನ್ನು ಅತ್ಯಂತ ಸುರಕ್ಷಿತವಾಗಿ ಮಾಡಬಹುದು.

ಈ ಬಗ್ಗೆ ವಿವರ ನೀಡಿರುವ ಜಾನ್ಸನ್ & ಜಾನ್ಸನ್ ಮೆಡ್‌ಟೆಕ್ ಇಂಡಿಯಾದ ಜನರಲ್ ಮ್ಯಾನೇಜರ್ ರಣದೀಪ್ ಶರ್ಮಾ, “ಭಾರತದಲ್ಲಿ ವೇರಿಪಲ್ಸ್ ಪ್ಲಾಟ್‌ಫಾರ್ಮ್‌ಗೆ ಅನುಮೋದನೆ ಸಿಕ್ಕಿರುವುದು ಹೃದಯದ ಚಿಕಿತ್ಸೆಯಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ಜಾಗತಿಕವಾಗಿ ಪಿಎಫ್‌ಎ ತಂತ್ರಜ್ಞಾನ ಜನಪ್ರಿಯವಾಗುತ್ತಿದ್ದು, ಏಟ್ರಿಯಲ್ ಫಿಬ್ರಿಲೇಷನ್ ರೋಗಿಗಳಿಗೆ ಹೆಚ್ಚು ನಿಖರ ಹಾಗೂ ತ್ವರಿತ ಚಿಕಿತ್ಸೆ ನೀಡಲು ಇದು ಭಾರತೀಯ ವೈದ್ಯರಿಗೆ ಅನುಕೂಲ ಮಾಡಿಕೊಡಲಿದೆ,” ಎಂದರು.

ಕ್ಯಾನ್ಸಾಸ್ ಸಿಟಿ ಹಾರ್ಟ್ ರಿದಮ್ ಇನ್‌ಸ್ಟಿಟ್ಯೂಟ್‌ನ ಎಕ್ಸಿಕ್ಯೂಟಿವ್ ಮೆಡಿಕಲ್ ಡೈರೆಕ್ಟರ್ ಡಾ. ಧನುಂಜಯ ಲಕ್ಕಿರೆಡ್ಡಿ ಪ್ರತಿಕ್ರಿಯಿಸಿ, “ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಹೊರೆ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ನವೀನ ಚಿಕಿತ್ಸಾ ವಿಧಾನಗಳ ಅಗತ್ಯವಿದೆ. ‘ಪಲ್ಸ್ಡ್ ಫೀಲ್ಡ್ ಅಬ್ಲೇಶನ್’ ಜಗತ್ತಿನಾದ್ಯಂತ ಮಾಡಿರುವ ಕ್ರಾಂತಿಯನ್ನು ಭಾರತದಲ್ಲೂ ಮಾಡಬಲ್ಲದು. 3ಡಿ ಮ್ಯಾಪಿಂಗ್‌ನೊಂದಿಗಿನ ಇದನ್ನು ಜೋಡಿಸಲಾಗಿದ್ದು, ಇದು ವೈದ್ಯರಿಗೆ ಅತ್ಯುತ್ತಮ ಸಾಧನವಾಗಿದೆ. ಆದರೆ, ಇದರ ಸುರಕ್ಷಿತ ಬಳಕೆಗಾಗಿ ವೈದ್ಯರಿಗೆ ಸೂಕ್ತ ತರಬೇತಿಯ ಅವಶ್ಯಕತೆಯಿದೆ,” ಎಂದು ವಿವರಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles