ಬಡ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಐಎಎಸ್ ,ಐಪಿಎಸ್,ನೀಟ್,ಹಾಗೂ ಸಿಇಟಿ ಮಾದರಿಯ ಪರೀಕ್ಷೆಗಳಿಗೆ ತರಬೇತಿ ನೀಡುವುದು ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸುವುದು ನಮ್ಮ ಮೊದಲ ಆದ್ಯತೆ
ಚಿಂತಾಮಣಿ.
ತಾಲ್ಲೂಕು ಆಡಳಿತ ತಾಲ್ಲೂಕು ಪಂಚಾಯತಿ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಿದ್ದು ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಉದ್ಘಾಟಿಸಿದರು.
ನಂತರ ಮಾತನಾಡಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸುಮಾರು 21ಕೋಟಿರೂಗಳ ವೆಚ್ಚದಲ್ಲಿ ನಿರ್ಮಾಣ ವಾಗಿರುವ ಈ ಭವನ ಸದ್ಭಲಕೆ ಆಗಬೇಕು ಬಹಳ ಉತ್ತಮ ಸುಸಜ್ಜಿತ ಈ ಭವನ ರಾಜ್ಯದಲ್ಲಿಯೇ ಮೊದಲನೆಯಾದಾಗಿದ್ದು ಮಾನ್ಯ ಶಾಸಕ ಸುಧಾಕರ್ ರವರಿಗೆ ವಿಶೇಷವಾದ ಧನ್ಯವಾದಗಳನ್ನು ತಿಳಿಸುತ್ತೇನೆ
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಹೋಬಳಿಗೊಂದು ವಸತಿ ಶಾಲೆ ನಿರ್ಮಾಣ ಮಾಡುವುದರೊಂದಿಗೆ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಒದಗಿಸಲು ಸಹಾರಿಯಾಗುತ್ತದೆ ಎಂದರು.
ಅಂದಿನ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಹೆಚ್.ಆಂಜನೇಯ ಮಹದೇವಪ್ಪ ರವರ ನೀಡಿರುವ ಅನುದಾನ ಮೂಲಕ ಇಂದು ಭವನವು ಲೋಕಾರ್ಪಣೆ ಯಾಗಿದೆ ಒಳಮೀಸಲಾತಿ ಅನುಷ್ಠಾನದಲ್ಲಿ ಮಹದೇವಪ್ಪ ರವರ ಪಾತ್ರ ಬಹಳ ಉತ್ತಮವಾಗಿದ್ದು
ಅವರು ಅಂದು ವರ್ಗೀಕರಣ ಮಾಡಲು ಸಹಕಾರಿಯಾಗಿದ್ದಾರೆ ನಾವೆಲ್ಲಾರು ಅಣ್ಣ ತಮ್ಮಂದಿರಂತೆ ಒಟ್ಟಾಗಿ ಹೋಗಬೇಕು ನಾವೆಲ್ಲಾ ಒಂದು ಯಾವುದೇ ಸಮಸ್ಯೆ ಉಂಟಾದಾಗ ನಾವು ಒಂದಾಗಿ ಹೊರಾಡಬೇಕು ಹೋರಾಟಗಾರರ ಪಾತ್ರವು ಬಹಳ ಪ್ರಮುಖಪಾತ್ರವಹಿಸುತ್ತದೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಹೊಬಳಿಗೊಂದು ವಸತಿ ಶಾಲೆಗಳನ್ನು ತೆರೆಯುವವುದರೊಂದಿಗೆ ಬಡಮಕ್ಕಳಿಗೆ ಉನ್ನತ ವ್ಯಾಸಾಂಗ ಮಾಡಲು ಹಾಗೂ ಐಏಎಸ್ ಕೆಎಎಸ್ ನೀಟ್ ಹಾಗೂ ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಭಾಗವಹಿಸಲು ಅವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಕಾರ್ಯಯೋಜನೆ ಸಿದ್ದತೆ ಆಗಿದ್ದು ಇದು ಇದರಿಂದ ಯಾವುದಾದರು ಒಂದು ಪರೀಕ್ಷೆಯನ್ನು ಎದುರಿಸಿ ಅವರು ತಮ್ಮಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದರು
ವಸತಿ ಶಾಲೆಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗಿಂದಲೂ ಹೆಚ್ಚಿನ ಪಲಿತಾಂಶ ಶೇ99ರವರೆಗೂ ಬರುತ್ತಿರುವುದು ದಾಖಲೆಯಾಗಿದೆ .
ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಗಳು ಸಾಮನ್ಯ ಆದರೆ ಸುಧಾಕರ್ ರವರು ಉತ್ತಮವಾದ ಕೆಲಸ ಮಾಡಿರುವುದರಿಂದ ಅವರನ್ನು ನಾವು ಅಭಿನಂದಿಸಲೆ ಬೇಕು ಎಂದರು.
ಈ ಸಂಧರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಈಶ್ವರ ಖಂಡ್ರೆ, ಮಾಜಿ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ, ಡಾ. ಎಂ ಸಿ.ಸುಧಾಕರ್, ಸಂಸದರಾದ ಎಂ. ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನೀಲ್ ಕುಮಾರ್, ಡಿ.ಟಿ.ಶ್ರೀನಿವಾಸ್, ಜಿಲ್ಲಾಧಿಕಾರಿಗಳಾದ ಪ್ರಭು ಜಿ, ಜಿಲ್ಲಾ ಪಂಚಾಯತ್ ಸಿಇಒ ಡಾ. ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಶಲ್ ಚೌಕ್ಸೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

