ಹೋಮಿಯೋಪತಿ ಚಿಕಿತ್ಸಾ ಪದ್ಧತಿಯಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಪ್ರಯೋಗ ನಡೆಯಲಿ: ದಿನೇಶ್ ಗುಂಡೂರಾವ್
ಕರ್ನಾಟಕ ಹೋಮಿಯೋಪಥಿಕ್ ಅಸೋಸಿಯೇಷನ್ ವತಿಯಿಂದ ಐಐಎಸ್ಸಿಯ ಎ ವಿ ರವಣ ರಾವ್ ಸಭಾಂಗಣದಲ್ಲಿ ವಿಶ್ವ ಹೋಮಿಯೋಪತಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್
ಹೋಮಿಯೋಪತಿಗೆ 200 ವರ್ಷಗಳ ಇತಿಹಾಸವಿದೆ. ಇದು ಕೂಡ ಒಂದು ವೈಜ್ಞಾನಿಕ ವೈದ್ಯಕೀಯ ಪದ್ದತಿ. ಇದು ಸುಲಭವಾದ ಚಿಕಿತ್ಸಾ ಪದ್ಧತಿ ಮತ್ತು ದೇಹವನ್ನು ಬಲಿಷ್ಠಗೊಳಿಸುವ ಒಂದು ವಿಧಾನವಾಗಿದೆ. ಸರ್ಕಾರದ ವತಿಯಿಂದ ಸುಮಾರು 60-70 ಡಿಸ್ಪೆನ್ಸರಿ ಇದೆ. ಬೋರ್ಡ್ ಚುನಾವಣೆ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಮನವಿ ನೀಡಿದ್ದೀರಿ. ಸರ್ಕಾರ ಮುಕ್ತ ಮಾತುಕತೆಗೆ ಸಿದ್ದವಿದೆ. ಕೆಲವೇ ದಿನಗಳಲ್ಲಿ ಹೋಮಿಯೋಪತಿ ಮೆಡಿಕಲ್ ಕಾಲೇಜ್ ನಿರ್ಮಾಣವೂ ಸೇರಿದಂತೆ ನಿಮ್ಮ ಸಮಸ್ಯೆಗಳ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಿ,
ಎಲ್ಲವನ್ನು ಬಗೆಹರಿಸೋಣ. ಹೋಮಿಯೋಪತಿಯಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ, ಪ್ರಯೋಗ ನಡೆಯಬೇಕಿದೆ. ನೀವೆಲ್ಲ ಆ ಕುರಿತು ಸಹ ಯೋಚನೆ ಮತ್ತು ಯೋಜನೆ ಮಾಡಬೇಕಾದ ಅವಶ್ಯಕತೆ ಇದೆ. ಜನರಲ್ಲಿ ನಂಬುಗೆ ಮೂಡುವುದು ಬಹಳ ಮುಖ್ಯ. ಹಾಗಾದಾಗ ಮಾತ್ರ ಸರ್ಕಾರ ಇನ್ನೂ ಹೆಚ್ಚಿನ ಕಾರ್ಯಯೋಜನೆ ಮಾಡಲು ಸಾಧ್ಯ.
ಕಾರ್ಯಕ್ರಮದಲ್ಲಿ ಡಾ.ಲಕ್ಷ್ಮೀಕಾಂತ ನಂದಾ, ಆಯುಷ್ ಆಯುಕ್ತ ಡಾ. ಸುನಿಲ್ ಪನ್ವರ್, ಕರ್ನಾಟಕ ಹೋಮಿಯೋಪತಿ ಅಸೋಸಿಯೇಷನ್ ಪದಾದಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

