ಸುರಪುರ : ನಗನೂರು ಗ್ರಾಮದ ಆರಾಧ್ಯ ದೈವ ಶ್ರೀ ಶ್ರೀ ಸೂಗುರೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಮಂಗಳವಾರ ಮಹಾ ರಥೋತ್ಸವ ಭಕ್ತರ ಜಯ ಘೋಷಗಳ ಮಧ್ಯೆ ಸಂಜೆ ಭಕ್ತರ ಉತ್ಸಾಹದೊಂದಿಗೆ ಮಹಾ ರಥೋತ್ಸವ ನೆರವೇರಿತು.
ಸಂಪ್ರದಾಯದಂತೆ ಮುಂಜಾನೆ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಪ್ರಾರಂಭವಾಗಿ ಸಾಯಂಕಾಲದವರೆಗೆ ಅನೇಕ ಚಟುವಟಿಕೆಗಳು ಕಾರ್ಯಕ್ರಮಗಳು ನೆರವೇರಿದವು.
ಷ. ಬ್ರ. ಶ್ರೀ ಸೂಗುರೇಶ್ವರ ಶಿವಾಚಾರ್ಯರ ಸಾನಿಧ್ಯದಲ್ಲಿ ಸಾಯಂಕಾಲ 6 ಗಂಟೆಗೆ ಶೃಂಗಾರಗೊಂಡಿದ್ದ ರಥದಲ್ಲಿ ಶ್ರೀ ಸುಗುರೇಶ್ವರ ರ ದಿವ್ಯ ಮೂರ್ತಿಯನಿಟ್ಟು ಶಿಖರದ ಮೇಲೆ ಏರುತ್ತಿದ್ದಂತೆ ಭಕ್ತರ ಜೈ ಘೋಷ ಮುಗಿಲು ಮುಟ್ಟಿತ್ತು.
ಮಕ್ಕಳು ಮಹಿಳೆಯರು ಹಿರಿಯರು ಯುವಕರು ಊರಿನ ಗಣ್ಯಾತಿ ಗಣ್ಯರು ಹೊಸ ಬಟ್ಟೆಯನ್ನು ಇಟ್ಟುಕೊಂಡು ಮಹಿಳೆಯರು ಶೃಂಗಾರ ಮಾಡಿಕೊಂಡು ಶ್ರೀ ಸೂರೇಶ್ವರ ದೇವಸ್ಥಾನದ ಆವರಣದಲ್ಲಿ ಮಧ್ಯಾಹ್ನ ಮೂರು ಗಂಟೆಯಿಂದಲೇ ಜಮಾವಣೆಗೊಂಡು ನಂತರ ನಡೆದ ರಥೋತ್ಸವವನ್ನು ನೋಡಿ ಕಣ್ತುಂಬಿ ಕೊಂಡರು.
ರಥೋತ್ಸವದ ನಂತರ ಭಕ್ತರು ಸರದಿಯಲ್ಲಿ ನಿಂತು ಶ್ರೀ ಸೂಗುರೇಶ್ವರರ ದೇವರ ದಿವ್ಯ ಮೂರ್ತಿಯ ದರ್ಶನವನ್ನು ಪಡೆದು ಹಿಡುಗಾಯಿಯನ್ನು ಒಡೆದು ಭಕ್ತರು ಹರಕೆಯನ್ನು ತೀರಿಸಿದರು.
ನಗನೂರ್ ಖಾನಾಪುರ್ ಎಸ್ ಕೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಜೈನಾಪುರ್ ಕಿರದಳ್ಳಿ ಗೌಡಿಗೇರಾ ಹಾಗೂ ಅನೇಕ ಗ್ರಾಮಗಳ ಸದ್ಭಕ್ತರು ತಂಡೋಪ ತಂಡವಾಗಿ ಆಗಮಿಸುತ್ತಿರುವ ದೃಶ್ಯ ಸರ್ವೇಸಾಮಾನ್ಯವಾಗಿತ್ತು.
ಇದೇ ಸಂದರ್ಭದಲ್ಲಿ ಕಳೆದ 15 ದಿನಗಳಿಂದ ಶ್ರೀ ವೇದ ಮೂರ್ತಿ ಶ್ರೀ ಅಮರೇಶ್ವರ ಶಾಸ್ತ್ರಿಗಳು ಹೇಳಿದ ಶ್ರೀ ಮಾತೆ ಗುಡ್ಡಾಪುರದ ದಾನಮ್ಮ ದೇವಿಯ ಮಹಾಪುರಾಣವು ಸಂಪನ್ನಗೊಂಡಿತ್ತು.

