ಕಲಬುರ್ಗಿ : ಫೆಬ್ರುವರಿ.1. ಕೇಂದ್ರ ಸರ್ಕಾರ 2019ರಲ್ಲಿ ಜಾರಿಗೊಳಿಸಿದ ಬರ್ಡ್ಸ್ ಕಾಯ್ದೆಯನ್ನು (ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ) ಕರ್ನಾಟಕ ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ವಿವಿಧ ಖಾಸಗಿ ಹಣಕಾಸು ಸಂಸ್ಥೆ, ಕಂಪನಿ ಗಳಿಂದ ವಂಚಿತರಾದ ಗ್ರಾಹಕರಿಗೆ ಹಣ ಮರುಪಾವತಿ ಮಾಡುವಂತೆ ತೂಗಿ ಪೀಡಿತ ಜಮಖರ್ತಾ ಪರಿವಾರ್ (ಡಿಪಿಜೆಪಿ) ವಂಚನೆ ವಂಚನೆಗೊಳಗಾದ ಠೇವಣಿ ದಾರರ ಕುಟುಂಬ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಕುರಿತು ಡಿಪಿಜೆಪಿ ಜಿಲ್ಲಾಧ್ಯಕ್ಷ. ವೈ. ಏಸ್. ತಳವಾರ್ ಅವರು ಕಲ್ಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ವರೆಗೆ ಈ ಪತ್ರ ಸಲ್ಲಿಸಿ, ಈ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಿಂದೂ ಮಹಾಸಭಾ ರಾಜ್ಯ ಉಪಾಧ್ಯಕ್ಷರು ಡಿಪಿಜೆಪಿ ಸದಸ್ಯರು ಹಾಗೂ ಪಾರಂಪರಿಕ ವೈದ್ಯರಾದ ದಿನಕರರಾವ್ ಕುಲಕರ್ಣಿ ಅಷ್ಟಗಿ ಮಾತನಾಡಿ, ಖಾಸಗಿ ಹಣಕಾಸು ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ವಂಚಿತರಾದವರು ಹಿತ ರಕ್ಷಣಾಗಾಗಿ ಕೇಂದ್ರ ಸರಕಾರ 2019ರಲ್ಲಿ ಬರ್ಡ್ಸ್ ಕಾಯ್ದೆ ಜಾರಿಗೊಳಿಸಿದ್ದು. ಈ ಕಾಯ್ದೆ ಯನ್ನು ಕರ್ನಾಟಕದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಭಾರತ ದೇಶಾದ್ಯಂತ ಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು, ಜನಸಾಮಾನ್ಯರು ಕಷ್ಟಪಟ್ಟು ದುಡಿದು ಕೂಡಿಟ್ಟ ಹಣವು ಖಾಸಗಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿರುವ ಪಿಎಸ್ಇಎಲ್, (P A C L) ಗರಿಮಾ , ಅಗ್ರಿಗೋಲ್ಡ್, ಇ ಸ್ಟೋರ್ ಇಂಡಿಯಾ, ಗುರುಟೀಕ್, ಸಮೃದ್ಧಿ ಜೀವನ, ಹೀಗೆ ಹಲವಾರು ಕಂಪನಿಗಳಲ್ಲಿ ಬಡವರು ಕೂಲಿ ಕಾರ್ಮಿಕರು ಮಧಮ ವರ್ಗದವರು ಎಲ್ಲಾ ಕಂಪನಿಗಳಲ್ಲಿ ಹಣವನ್ನು ಹೂಡಿಕೆ ಮಾಡಿದ್ದಾರೆ.
ಈ ಕಂಪನಿಗಳನ್ನು ಸೇರಿದಂತೆ ಹಲವಾರು ಕಂಪನಿಗಳನ್ನು 2014ರಲ್ಲಿ ಕೇಂದ್ರ ಸರ್ಕಾರ ಬಂದು ಮಾಡಿದೆ. ಹತ್ತು ವರ್ಷ ಗತಿಸಿದರು ಗ್ರಾಹಕರಿಗೆ ಹಣ ತಲುಪಿಸುವಲ್ಲಿ ವಿಫಲರಾಗಿದ್ದಾರೆ. ಎಂದು ಆರೋಪಿಸಿದರು.
ಅನೇಕ ಕಂಪನಿಗಳ ಮಾಲೀಕರು ಸಾಕಷ್ಟು ಆಸ್ತಿಗಳನ್ನು ಮಾಡಿಕೊಂಡಿದ್ದಾರೆ. ಅಂತಹ ಮಾಲೀಕರ ಆಸ್ತಿಗಳನ್ನು ಮುಟ್ಟು ಗೋಲು ಹಾಕಿಕೊಂಡು ಗ್ರಾಹಕರಿಗೆ ಹಣ ಮರಳಿಸಿ ನ್ಯಾಯ ಒದಗಿಸಬೇಕು. ಕೇಂದ್ರ ಸರ್ಕಾರದ ಬರ್ಡ್ಸ್ ಕಾಯ್ದೆ 2019ರ ಪ್ರಕಾರ ಗ್ರಾಹಕರಿಗೆ 180 ದಿನಗಳಲ್ಲಿ ಗ್ರಾಹಕರಿಗೆ ಹಣ ಪಾವತಿಸಬೇಕು, ಕಾಯ್ದೆ ನಿಯಮವಿದ್ದರೂ ನಿಯಮವನ್ನು ಗಾಳಿಗೆ ತೂರಿದ್ದಾರೆ. ಸರ್ಕಾರ ಕೂಡಲೇ ಬರ್ಡ್ಸ್ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಗ್ರಾಹಕರಿಗೆ ನ್ಯಾಯವಾದಿಸಬೇಕು ಎಂದು ಒತ್ತಾಯಿಸಿದರು.
ಸರಕಾರ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕು ಅಲ್ಲಿಯವರೆಗೆ ಅನಿರ್ದಿಷ್ಟ ಧರಣಿ ಮುಂದುವರೆಯಲಿದೆ ಇದಲ್ಲದೆ ಉಗ್ರ ಹೋರಾಟಕ್ಕೆ ಇಳಿಯಲು ಅನಿವಾರ್ಯ ವಾಗುತ್ತದೆ ಎಂದು ಎಚ್ಚರಿಸಿದರು.
ಡಿಪಿಜೆಪಿ ಜಿಲ್ಲಾಧ್ಯಕ್ಷ ವೈ. ಎಸ್. ತಳವಾರ್. ಉಪಾಧ್ಯಕ್ಷ ವಿಜಯಕುಮಾರ್ ಶೆಟ್ಟಿ. ಕಾರ್ಯದರ್ಶಿ ಸಿದ್ದರಾಮ್ ಕಟ್ಟಿ, ಸತೀಶ್ ನಲ್ಲಿ, ಮದನ್ ರಾವ್ ಕುಲಕರ್ಣಿ, ಶ್ರೀಶೈಲ ಪಾಟೀಲ್, ವೆಂಕಟರೆಡ್ಡಿ ಪಾಟೀಲ್, ಶಕುಂತಲಾ ಬಿಳವಾರ್, ಎಂ.ಜಿ . ಬಿರೆದಾರ್, ಯುವರಾಜ್ ಪಾಟೀಲ್, ಎ. ಎನ್ ಪರಿಟ್, ಸಿದ್ದಣ್ಣ ನೀರಲಕೊಡ ಮತ್ತು ಇತರರಿದ್ದರು.

