14.5 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

7,506 ಕೋಟಿ ರೂ. ಹೂಡಿಕೆಯ 55 ಯೋಜನೆಗಳಿಗೆ ಅಸ್ತು: ಎಂ ಬಿ ಪಾಟೀಲ

7,506 ಕೋಟಿ ರೂ. ಹೂಡಿಕೆಯ 55 ಯೋಜನೆಗಳಿಗೆ ಅಸ್ತು: ಎಂ ಬಿ ಪಾಟೀಲ

28 ಸಾವಿರಕ್ಕೂ ಹೆಚ್ಚು ಉದ್ಯೋಗಸೃಷ್ಟಿ

4 ಎಫ್.ಡಿ.ಐ. ಯೋಜನೆಗಳಿಂದ 314 ಕೋಟಿ ರೂ. ಹೂಡಿಕೆ

ಕೊಡಗು, ಗದಗ, ಕಲಬುರಗಿ, ವಿಜಯಪುರ, ಕೋಲಾರ ಸಹಿತ ಹಲವೆಡೆ ಹೂಡಿಕೆ

ಏರೋಸ್ಪೇಸ್, ಇ.ಎಸ್.ಡಿ.ಎಂ., ಜನರಲ್ ಎಂಜಿನಿಯರಿಂಗ್ ವಲಯಗಳತ್ತ ಒಲವು

ಬೆಂಗಳೂರು: ಒಟ್ಟು 7,506 ಕೋಟಿ ರೂ. ಬಂಡವಾಳ ಹೂಡಿಕೆ ಮತ್ತು 28 ಸಾವಿರಕ್ಕೂ ಹೆಚ್ಚು ಉದ್ಯೋಗಸೃಷ್ಟಿ ಮಾಡಲಿರುವ 55 ಕೈಗಾರಿಕಾ ಯೋಜನೆಗಳಿಗೆ ಶುಕ್ರವಾರ ಇಲ್ಲಿ ನಡೆದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಇವುಗಳಲ್ಲಿ 41 ಹೂಡಿಕೆಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ (ಬಿಯಾಂಡ್ ಬೆಂಗಳೂರು) ಉಳಿದ ಕಡೆಗಳಲ್ಲಿ ಆಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಸಭೆಯ ಮಾಹಿತಿ ನೀಡಿರುವ ಅವರು, ಇವುಗಳ ಪೈಕಿ 4 ಯೋಜನೆಗಳು ವಿದೇಶಿ ನೇರ ಹೂಡಿಕೆಯ (ಎಫ್.ಡಿ.ಐ.) ಯೋಜನೆಗಳಾಗಿವೆ. ತೈವಾನಿನ ಟೀಮಿಂಗ್ ಆಟೋಮೇಷನ್, ದಕ್ಷಿಣ ಕೊರಿಯಾದ ವೈ.ಜೆ.ಲಿಂಕ್, ಜರ್ಮನಿಯ ರೇವುಂ ಮತ್ತು ಜಪಾನ್ ಮೂಲದ ಶಿಂಕೋ ಕಂಪನಿಗಳು ಕ್ರಮವಾಗಿ 20 ಕೋಟಿ ರೂ, 177.96 ಕೋಟಿ ರೂ, 16.50 ಕೋಟಿ ರೂ ಮತ್ತು 100 ಕೋಟಿ ರೂ. (ಒಟ್ಟು 314.46 ಕೋಟಿ ರೂಪಾಯಿ) ಹೂಡಿಕೆ ಮಾಡುತ್ತಿವೆ. ಇವುಗಳಿಂದ ಒಟ್ಟು 503 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದಿದ್ದಾರೆ.

ಒಪ್ಪಿಗೆ ನೀಡಲಾಗಿರುವ ಹೂಡಿಕೆ ಪ್ರಸ್ತಾವನೆಗಳಲ್ಲಿ 50 ಕೋಟಿ ರೂ.ಗಳಿಗೂ ಹೆಚ್ಚು ಬಂಡವಾಳ ತೊಡಗಿಸಲಿರುವ ಯೋಜನೆಗಳ ಸಂಖ್ಯೆ 35ರಷ್ಟಿದೆ. ಹಾಗೆಯೇ 15 ಯೋಜನೆಗಳಿಂದ ತಲಾ 15ರಿಂದ 50 ಕೋಟಿ ರೂ. ಹೂಡಿಕೆ ಆಗಲಿದೆ. 5 ಕಂಪನಿಗಳು ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡಲಿದ್ದು, ಇವುಗಳಿಂದ 223.61 ಕೋಟಿ ರೂ. ಹರಿದು ಬರಲಿದೆ. ಒಟ್ಟು 55 ಯೋಜನೆಗಳಲ್ಲಿ ಹೆಚ್ಚಿನವು ಏರೋಸ್ಪೇಸ್, ಇ.ಎಸ್.ಡಿ.ಎಂ, ಜನರಲ್ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟಿವೆ ಎಂದು ಅವರು ವಿವರಿಸಿದ್ದಾರೆ.

ಅನುಮೋದನೆ ನೀಡಲಾಗಿರುವ ಯೋಜನೆಗಳ ಮೂಲಕ ಕೇನ್ಸ್ ಎಲೆಕ್ಟ್ರಾನಿಕ್ಸ್ ಚಾಮರಾಜನಗರ ಜಿಲ್ಲೆಯಲ್ಲಿ 495 ಕೋಟಿ, ಎಸ್ಎಫ್ಒ ಟೆಕ್ನಾಲಜೀಸ್ ದೊಡ್ಡಬಳ್ಳಾಪುರದಲ್ಲಿ 490 ಕೋಟಿ, ಆರ್ಬಿಟ್ ಇಂಡಸ್ಟ್ರಿಯಲ್ ಪಾರ್ಕ್ ಕೋಲಾರದಲ್ಲಿ 454 ಕೋಟಿ, ಟೆರ್ರಾ ಸರ್ಕ್ಯೂಟ್ಸ್ ವಿಜಯಪುರದಲ್ಲಿ 441 ಕೋಟಿ, ಬೆಲಾಟ್ರಿಕ್ಸ್ ಏರೋಸ್ಪೇಸ್ ಬೆಂ.ಗ್ರಾಮಾಂತರದಲ್ಲಿ 404 ಕೋಟಿ, ಜಿಂದಾಲ್ ಪೋರ್ಟ್ ಬಳ್ಳಾರಿಯಲ್ಲಿ 380 ಕೋಟಿ, ಶಾಹಿ ಎಕ್ಸ್ ಪೋರ್ಟ್ಸ್ ಕಲಬುರಗಿಯಲ್ಲಿ 337 ಕೋಟಿ, ಇನ್ಫ್ರಾಗೆಲಾಕ್ಸಿ ದಕ್ಷಿಣ ಕನ್ನಡದಲ್ಲಿ 300 ಕೋಟಿ, ಹೈಟೆಕ್ ಮೆಟಾಲಿಕ್ಸ್ ವಿಜಯಪುರದಲ್ಲಿ 250 ಕೋಟಿ, ಪ್ರಾಕ್ಸೈರ್ ಇಂಡಿಯಾ ಬೆಂ. ಗ್ರಾಮಾಂತರದ ಹೊಸಕೋಟೆಯಲ್ಲಿ 210 ಕೋಟಿ, ಶೊಭಾ ರಿಯಾಲ್ಟಿ ಬೆಂಗಳೂರು ನಗರ ಜಿಲ್ಲೆಯಲ್ಲಿ 201.15 ಕೋಟಿ, ಆರ್.ಎಂ.ಝೆಡ್ ಹೊಸಕೋಟೆಯ ಎಂ.ಹೊಸಹಳ್ಳಿಯಲ್ಲಿ 198.62 ಕೋಟಿ ರೂ. ಹೂಡಿಕೆ ಮಾಡಲಿವೆ ಎಂದು ಪಾಟೀಲ ವಿವರಿಸಿದ್ದಾರೆ.

ಇದಲ್ಲದೆ ಗದಗಿನಲ್ಲಿ ರೋನ್ ಪವರ್ 177.20 ಕೋಟಿ ರೂ, ವಾಹಿನಿ ಪಾಲಿಟೆಕ್ ತುಮಕೂರಿನಲ್ಲಿ 170 ಕೋಟಿ, ಕೋಲಾರದಲ್ಲಿ ಏರಿಸ್ ರಿಫೈನರಿ 157.45 ಕೋಟಿ, ಜುರೋಜಿನ್ ಡೆವಲಪರ್ಸ್ 137 ಕೋಟಿ ಮತ್ತು ಅರ್ಬೆನೋ ರಿಯಾಲ್ಟಿ 125 ಕೋಟಿ, ಕೊಡಗಿನಲ್ಲಿ ಆಯತನ ಹಾಸ್ಪಿಟಾಲಿಟೀಸ್ 110.27 ಕೋಟಿ ಮತ್ತು ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಬಲ್ಕ್ ಲಿಕ್ವಿಡ್ ಸೊಲ್ಯೂಷನ್ಸ್ 110 ಕೋಟಿ ರೂ. ಬಂಡವಾಳ ತೊಡಗಿಸಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯಲ್, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಮುಂತಾದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles