ಸುರಪುರ : ಕೆಂಭಾವಿ ಸಮೀಪದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ , ಮಾಲಗತ್ತಿಯ ಆವರಣದಲ್ಲಿ ಸಾಕ್ಷರತೆಯ ಕಲಿಕಾ ಹಬ್ಬ ಆಚರಣೆಯ ಕಾರ್ಯಕ್ರಮ ದಲ್ಲಿ ಆ ಯೋಜನೆ ಮಾಡಲಾಗಿರುವ ಮಕ್ಕಳಲ್ಲಿ ಅಕ್ಷರ ಮತ್ತು ಸಂಖ್ಯಾ ಜ್ಞಾನದ ಬುನಾದಿಯನ್ನು ಭದ್ರ ಪಡಿಸುವ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ( ಎಫ್ ಎಲ್ ಏನ್ ) ಕುರಿತಾದ ಹಬ್ಬವನ್ನು ಕರಡಕಲ್ ಕ್ಲಸ್ಟರ್ ಹಂತದ ಮಾಲಗತ್ತಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಲಿಕಾ ಹಬ್ಬವನ್ನು ಆಚರಿಸಲಾಯಿತು.
ಶಿಕ್ಷಕ ಸುರೇಶ್ ಮಾಳಿಗಿ ಮಾತನಾಡ, ಮಕ್ಕಳ ಕಲಿಕೆ ಇಂತಹ ಹಬ್ಬಗಳು ಪ್ರೇರಕವಾಗಿರುತ್ತವೆ ಎಂದು ಮಕ್ಕಳಿಗೆ ಕಲಿಕಾ ಹಬ್ಬಗಳು ಜ್ಞಾನಾರ್ಜನೆಗೆ ಸಹಕಾರಿಯಾಗಿದ್ದು ಗುಣಮಟ್ಟದ ಶಿಕ್ಷಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಳ್ಳುವುದು ಶ್ಲಾಘನೀಯ ಎಂದರು.
ಕೆಂಭಾವಿ ವಲಯ ಶಿಕ್ಷಣ ಸಂಯೋಜಕ ಶಿವಪುತ್ರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಬಸಪ್ಪ ಆರ್ ಮಲ್ಲೆ ಮಾತನಾಡಿದರು.
ಸಿ ಆರ್ ಪಿ ಸಿದ್ದು ಭಜಂತ್ರಿ, ಪರಸನಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ಮಲ್ಲಣ್ಣ ಸುರಪುರ, ಅರಿವು ಕೇಂದ್ರ ಗ್ರಾಮ ಪಂಚಾಯತ್ ಮೇಲ್ವಿಚಾರಕರು ವಿಜಯಕುಮಾರ ದರ್ಶನಾಪೂರ ಹಾಗೂ ನಾಗರಾಜ್ ಸಜ್ಜನ್ , ಮಲ್ಲಿಕಾರ್ಜುನ್ ಖರ್ಗೆ, ಬಾಬು ಪಟೇಲ್, ಬಂದೇ ನವಾಜ್ ನಾಲತವಾಡ, ರಂಗನಾಥ್, ಸಂಜೀವ ಬಂಡಿ, ಎಸ್ ಎನ್ ಪಾಟೀಲ್, ರಾಜಶೇಖರ್ ಕುಂಬಾರ್, ಉಪಸ್ಥಿತರಿದ್ದರು.
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಗುರುಗಳು ಮಾಣಿಕ್ಯಪ್ಪ ಕಲ್ಯಾಣಿ ಅಧ್ಯಕ್ಷತೆ ವಹಿಸಿದ್ದರು.
ಸಹ ಶಿಕ್ಷಕ ಸಾಹೇಬಣ್ಣ ಕುಣಿಗೇರಿ ಸ್ವಾಗತಿಸಿದರು. ಅತಿಥಿ ಶಿಕ್ಷಕರು ಮುತ್ತುರಾಜ್ ಬಡಿಗೇರ್ ನಿರೂಪಿಸಿದರು. ವೀರೇಶ್ ಬೊಮ್ಮನಹಳ್ಳಿ ವಂದಿಸಿದರು.

