22.7 C
New York
Wednesday, September 30, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಭಾರತದ ಅತಿದೊಡ್ಡ ಬಯೋ-ಗ್ಯಾಸ್ ಯೋಜನೆ ಅನುಷ್ಠಾನಕ್ಕೆ ಬೆಂಗಳೂರು ಜಲಮಂಡಳಿ ಸಜ್ಜು

ಭಾರತದ ಅತಿದೊಡ್ಡ ಬಯೋ-ಗ್ಯಾಸ್ ಯೋಜನೆ ಅನುಷ್ಠಾನಕ್ಕೆ ಬೆಂಗಳೂರು ಜಲಮಂಡಳಿ ಸಜ್ಜು

ಬೆಂಗಳೂರು : ಸುಸ್ಥಿರ ನಗರ ಜಲ ನಿರ್ವಹಣೆ ಮತ್ತು ಸರ್ಕ್ಯುಲರ್ ಎಕಾನಮಿ ನಿಟ್ಟಿನಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿರುವ ಬೆಂಗಳೂರು ಜಲಮಂಡಳಿ ಕೊಳಚೆ ನೀರಿನ ತ್ಯಾಜ್ಯವನ್ನು ಆದಾಯದ ಬೃಹತ್ ಮೂಲವಾಗಿ ಪರಿವರ್ತಿಸಲು ಸಜ್ಜಾಗಿದೆ. ತನ್ನ ಐದು ಪ್ರಮುಖ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ ಉತ್ಪತ್ತಿಯಾಗುವ ಕಚ್ಚಾ ಜೈವಿಕ ಅನಿಲವನ್ನು ಹೆಚ್ಚಿನ ಮೌಲ್ಯದ ಕಂಪ್ರೆಸ್ಡ್ ಬಯೋ-ಗ್ಯಾಸ್ ಆಗಿ ಮೇಲ್ದರ್ಜೆಗೇರಿಸುವ ಮೂಲಕ, ಮಂಡಳಿಯು ಮುಂದಿನ ಎರಡು ದಶಕಗಳಲ್ಲಿ ಅಂದಾಜು 𝟭𝟮𝟬 ಕೋಟಿ ರೂ. ಹೆಚ್ಚುವರಿ ಆದಾಯವನ್ನು ಗಳಿಸಲಿದೆ. ಇದು ದೇಶದಲ್ಲೇ ತನ್ನದೇ ಮಾದರಿಯ ಮೊದಲ ಮತ್ತು ಅತಿದೊಡ್ಡ ಯೋಜನೆ ಆಗಿರುವುದರಿಂದ ಇದೊಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಭಾರತದಲ್ಲಿ ಸೂರತ್‌ನಲ್ಲಿ ಕೇವಲ 𝟭𝟮𝟬 𝗠𝗟𝗗 ಸಾಮರ್ಥ್ಯದ ನೀರಿನ ಬಳಕೆಯೊಂದಿಗೆ ಇಂತಹ ಯೋಜನೆಗಳು ಕಾರ್ಯನಿರ್ವಹಿಸುತ್ತಿದ್ದರೆ, 𝗕𝗪𝗦𝗦𝗕 ಬರೋಬ್ಬರಿ 𝟱𝟱𝟬 𝗠𝗟𝗗 ಸಾಮರ್ಥ್ಯದ ತ್ಯಾಜ್ಯ ನೀರಿನ ಬಳಕೆಯೊಂದಿಗೆ ಈ ಬೃಹತ್ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಇದಲ್ಲದೆ, ಈ ಸಾಮರ್ಥ್ಯವನ್ನು ಗರಿಷ್ಠಗೊಳಿಸಲು, ನಗರದಾದ್ಯಂತ ಎಲ್ಲಿ 𝗦𝗧𝗣 ಗಳಲ್ಲಿ ಬಯೋ-ಡೈಜೆಸ್ಟರ್‌ಗಳಿವೆಯೋ ಅಲ್ಲೆಲ್ಲಾ ಈ ಅತ್ಯಾಧುನಿಕ ಯೋಜನೆಯನ್ನು ವಿಸ್ತರಿಸಲು ಮತ್ತು ಸ್ಥಾಪಿಸಲು ಜಲಮಂಡಳಿ ಅಧ್ಯಕ್ಷರು ಸೂಚನೆ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles