17.8 C
New York
Wednesday, September 30, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

KPSC ಭ್ರಷ್ಟಾಚಾರ ತನಿಖೆಗೆ CBI ಆಗ್ರಹಿಸಿ KRS ಪಕ್ಷದಿಂದ ಉಪವಾಸ ಸತ್ಯಾಗ್ರಹ

ಚಡಚಣ: KPSC ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಕ್ರಮಗಳು ಹಾಗೂ ಭ್ರಷ್ಟಾಚಾರದ ಆರೋಪಗಳ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಚಡಚಣದಲ್ಲಿ ಮಂಗಳವಾರ ಉಪವಾಸ ಸತ್ಯಾಗ್ರಹ ನಡೆಸಲಾಯಿತು.

ಶಂಕರನಾಗ್ ಸರ್ಕಲ್ ಬಸ್ ನಿಲ್ದಾಣದ ಎದುರು ನಡೆದ ಉಪವಾಸ ಸತ್ಯಾಗ್ರಹದಲ್ಲಿ ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ, KPSC ನೇಮಕಾತಿ ಪ್ರಕ್ರಿಯೆಯಲ್ಲಿನ ಆರೋಪಗಳ ಸಂಪೂರ್ಣ ಸತ್ಯ ಹೊರಬರಬೇಕು ಎಂದು ಒತ್ತಾಯಿಸಿದರು.

KPSC ಪ್ರಕರಣವನ್ನು CBI ತನಿಖೆಗೆ ವಹಿಸಬೇಕು, ನೇಮಕಾತಿ ಅಕ್ರಮಗಳ ಸಂಪೂರ್ಣ ತನಿಖೆ ನಡೆಸಬೇಕು, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಡಲಾಯಿತು.

ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ KPSC ನೇಮಕಾತಿ ಅಕ್ರಮಗಳ ಕುರಿತು ಹೊಸ ಐದು ಸದಸ್ಯರ ವಿಶೇಷ CBI ತನಿಖಾ ತಂಡ ರಚಿಸಿ ತನಿಖೆ ನಡೆಸುವಂತೆ ನಿರ್ದೇಶಿಸಿದೆ. ತನಿಖೆಯ ವ್ಯಾಪ್ತಿಯನ್ನು KPSCಯ ವಿವಿಧ ನೇಮಕಾತಿ ಪರೀಕ್ಷೆಗಳಿಗೂ ವಿಸ್ತರಿಸುವ ಸಾಧ್ಯತೆಯ ಕುರಿತು ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ KPSC ಪ್ರಕರಣವನ್ನು ಮತ್ತಷ್ಟು ಸಮಗ್ರವಾಗಿ ಪರಿಶೀಲಿಸಿ, ಅಭ್ಯರ್ಥಿಗಳಲ್ಲಿ ಸಂಪೂರ್ಣ ವಿಶ್ವಾಸ ಮೂಡಿಸುವ ರೀತಿಯಲ್ಲಿ ತನಿಖೆ ನಡೆಯಬೇಕು ಎಂದು ಚಡಚಣದ ಪ್ರತಿಭಟನಾಕಾರರು ಆಗ್ರಹಿಸಿದರು.

“ಸರ್ಕಾರಿ ಉದ್ಯೋಗವು ಹಣ ಅಥವಾ ಪ್ರಭಾವದ ಆಧಾರದ ಮೇಲೆ ಸಿಗಬಾರದು. ಅರ್ಹತೆ ಮತ್ತು ಪಾರದರ್ಶಕತೆಯೇ ನೇಮಕಾತಿಯ ಆಧಾರವಾಗಬೇಕು. KPSC ವ್ಯವಸ್ಥೆಯ ಮೇಲಿನ ವಿದ್ಯಾರ್ಥಿಗಳ ಮತ್ತು ಯುವಜನರ ವಿಶ್ವಾಸವನ್ನು ಮರುಸ್ಥಾಪಿಸಲು ನಿಷ್ಪಕ್ಷಪಾತ ತನಿಖೆ ಅಗತ್ಯ” ಎಂದು ಪಕ್ಷದ ಮುಖಂಡರು ಒತ್ತಾಯಿಸಿದರು.

ಉಪವಾಸ ಸತ್ಯಾಗ್ರಹದ ಮೂಲಕ ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು ತಲುಪಿಸುವ ಪ್ರಯತ್ನ ಮಾಡಲಾಯಿತು. KPSC ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದರೆ, ಅದರ ಹಿಂದೆ ಇರುವ ಪ್ರತಿಯೊಬ್ಬರ ಪಾತ್ರವನ್ನು ಕಾನೂನುಬದ್ಧವಾಗಿ ತನಿಖೆಗೊಳಪಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂತು.

ವಿದ್ಯಾರ್ಥಿಗಳ ಭವಿಷ್ಯ ಮತ್ತು ಸರ್ಕಾರಿ ನೇಮಕಾತಿಗಳ ಮೇಲಿನ ಸಾರ್ವಜನಿಕ ವಿಶ್ವಾಸದ ದೃಷ್ಟಿಯಿಂದ KPSC ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಆಗ್ರಹವಾಗಿದೆ.

ಈ ಸಂದರ್ಭದಲ್ಲಿದಲ್ಲಿ ಗಣಪತಿ ರಾಠೋಡ್, ದೀಪಾ ಮನೂರ,ದ್ಯಾವಣ್ಣ ನಾಯಕ, ಅಶೋಕ್ ಜಾಧವ, ಚಂದ್ರಕಾಂತ ನಗರೆ, ನಾಭಿರಸೂಲ್ ಜಮಾಧಾರ, ನಾಗೇಶ ಸರಸಂಬಿ, ಅಮಸಿದ್ದ ತೊಳೆ,ರಮಜಾನ್ ಕೊಂಕಣಿ, ಸುನಿಲ್ ತೊಳೆ, ಮಲ್ಲಿಕಾರ್ಜುನ ಕಾಂಬಳೆ, ಮುತ್ತುರಾಜ್ ಹೋನಗೊಂಡ,ಸಂಗಣ್ಣ ಬ್ಯಾಕೋಡ,ರೇವಣಸಿದ್ಧ ಮುತ್ಯಾ, ಮಲ್ಲನಗೌಡ ಬಿರಾದಾರ, ಸುನಿಲ್ ರಾಠೋಡ್, ಭಗತ್ ತಳವಾರ, ಅಲ್ಲಭಕ್ಷಾ ಸಯ್ಯದ್,ಮಲ್ಲಿಕಾರ್ಜುನ ಬಿರಾದಾರ್,ನಿಂಗಪ್ಪ ಶಿವಶರಣ, ಉಮೇಶ ಖಡ್ದೆ, ಕಂಟೆಪ್ಪಾ ಹ್ಯಾಗಾರ, ಅಕ್ಬರ್ ನದಾಫ,ಪಕ್ಷದ ಕಾರ್ಯಕರ್ತರು, ವಿವಿಧ ಸಂಘಟನೆ ಮುಖಂಡರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles