ಗಾರೆ ಕಲಸ ಮಾಡುವವನ ಮಗಳು ಶಾಲೆಗೆ ಪ್ರಥಮ
ಯಾದಗಿರಿ : ಗಾರೆ ಕಲಸ ಮಾಡುವ ಕೂಲಿ ಕಾರ್ಮಿಕರು ಶೈಕ್ಷಣಿಕ ಸಾಧನೆ ಮೂಲಕ ಹೋಬಳಿ ಮಟ್ಟದ ಸರಕಾರಿ ಕನ್ಯಾ ಪ್ರೌಢಶಾಲೆ ಕೆಂಭಾವಿಗೆ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾಳೆ. ಒಟ್ಟು 625 ಅಂಕಗಳಲ್ಲಿ 594 (95.04%) ಅಂಕಗಳನ್ನು ಗಳಿಸಿ ಅಪೂರ್ವ ಸಾಧನೆ ಮಾಡಿದ್ದಾಳೆ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾರ್ಥಿನಿ ಮೀನಾಕ್ಷಿ ನಾಮದೇವ ಚೌಹಾಣ್ ಪರಿಶ್ರಮ ಮತ್ತು ಏಕಾಗ್ರತೆಯಿಂದ ಈ ಯಶಸ್ಸು ಗಳಿಸಿದ್ದಾಳೆ.
ಸಾಧಾರಣ ಕುಟುಂಬ ಹಿನ್ನೆಲೆಯಿಂದ ಬಂದಿದ್ದರೂ, ತನ್ನ ಗುರಿಯನ್ನು ಸಾಧಿಸಲು ನಿರಂತರ ಶ್ರಮ ಪಟ್ಟಿದ್ದಾಳೆ. ಈ ಸಾಧನೆಗೆ ಶಿಕ್ಷಕರು ಮತ್ತು ಪೋಷಕರ ಸಂತಸ ವ್ಯಕ್ತಪಡಿಸಿದ್ದು, ಇತರ ರೀತಿಯ ಪ್ರೇರಣೆಯಾಗಿದ್ದಾಳೆ.
👉 ಇದು ಬಡತನವಾದರೂ ಸಾಧನೆ ಸಾಧ್ಯ ಎಂಬುದಕ್ಕೆ ಒಳ್ಳೆಯ ಉದಾಹರಣೆ.
ವರದಿ : ವಿಜಯಕುಮಾರ ದರ್ಶನಾಪುರ

