15.1 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಸಂಸ್ಕಾರಯುತ ಸಮಾಜಕ್ಕೆ ನಾಟಕಗಳು ಪ್ರೇರಣೆ – ಬಸನಗೌಡ ಪಾಟೀಲ

ಸಂಸ್ಕಾರಯುತ ಸಮಾಜಕ್ಕೆ ನಾಟಕಗಳು ಪ್ರೇರಣೆ – ಬಸನಗೌಡ ಪಾಟೀಲ

ದೇವನ ಹಿಪ್ಪರಗಿ: ಸಮೀಪದ ಸುಕ್ಷೇತ್ರ ವಂದಾಲ ಗ್ರಾಮದ ಆರಾಧ್ಯ ದೈವ ಶ್ರೀ ಭೀರಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ “ಮಗ ಹೋದರೂ ಮಾಂಗಲ್ಯ ಬೇಕು” (ಹೆತ್ತವಳ ಹಾಲು ವಿಷವಾಯ್ತು) ಎಂಬ ಸಾಮಾಜಿಕ ನಾಟಕ ಪ್ರದರ್ಶನಕ್ಕೆ ದೇವನ ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಶ್ರೀ ಬಸನಗೌಡ ಎಸ್. ಪಾಟೀಲ (ಯಡಿಯಾಪುರ) ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಅವರು, ನಾಟಕದ ವಿಶ್ಲೇಷಣೆ ಕುರಿತು ಸುದೀರ್ಘವಾಗಿ ಮಾತನಾಡಿದರು. “ಗ್ರಾಮೀಣ ಭಾಗದ ಜಾತ್ರೆಗಳು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗಿಲ್ಲ. ಅವು ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಜೀವಂತವಾಗಿರಿಸುವ ಗಟ್ಟಿಯಾದ ವೇದಿಕೆಗಳಾಗಿವೆ. ಇಂದು ಪ್ರದರ್ಶನಗೊಳ್ಳುತ್ತಿರುವ ಈ ನಾಟಕವು ಕೇವಲ ಮನರಂಜನೆಯಲ್ಲ, ಬದಲಾಗಿ ಸಂಸ್ಕಾರಯುತ ಬದುಕಿನ ಮಹತ್ವವನ್ನು ಸಾರುವ ಕೃತಿಯಾಗಿದೆ” ಎಂದು ತಿಳಿಸಿದರು.

ಸಮಾಜಕ್ಕೆ ಕನ್ನಡಿ:
“ರಂಗಭೂಮಿ ಎಂಬುದು ಸಮಾಜದ ಕನ್ನಡಿ. ಕುಟುಂಬದ ಮೌಲ್ಯಗಳು ಕ್ಷೀಣಿಸುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಇಂತಹ ಕಥೆಗಳು ನಮಗೆ ದಾರಿದೀಪವಾಗಬೇಕು. ಸಂಸ್ಕಾರವಿದ್ದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು. ವಿಶೇಷವಾಗಿ ಯುವಜನತೆ ಇಂತಹ ಕಲೆಗಳಿಂದ ಸ್ಫೂರ್ತಿ ಪಡೆದು ಒಳ್ಳೆಯ ಹಾದಿಯಲ್ಲಿ ಸಾಗಬೇಕು” ಎಂದು ಅವರು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಜಾತ್ರಾ ಸಮಿತಿಯ ವತಿಯಿಂದ ಶ್ರೀ ಬಸನಗೌಡ ಪಾಟೀಲ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಪ್ರಮುಖರು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಟಕವನ್ನು ಆಸ್ವಾದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles