24.4 C
New York
Wednesday, September 30, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಪ್ರೋಟೀನ್ ಭರಿತ ಗೋಧಿ ಹಿಟ್ಟಿನ ಪ್ರಚಾರಕ್ಕಾಗಿ ಹೊಸ ಅಭಿಯಾನ ಆರಂಭಿಸಿದ ‘ಆಶೀರ್ವಾದ್’

ಪ್ರೋಟೀನ್ ಭರಿತ ಗೋಧಿ ಹಿಟ್ಟಿನ ಪ್ರಚಾರಕ್ಕಾಗಿ ಹೊಸ ಅಭಿಯಾನ ಆರಂಭಿಸಿದ ‘ಆಶೀರ್ವಾದ್’

ಬೆಂಗಳೂರು: ಸಾಮಾನ್ಯವಾಗಿ ನಾವು ಯಾರಾದರೂ ಅಸಾಧಾರಣ ಶಕ್ತಿ ಪ್ರದರ್ಶಿಸಿದಾಗ, ಕ್ರಿಕೆಟ್‌ನಲ್ಲಿ ದೊಡ್ಡ ಸಿಕ್ಸರ್ ಬಾರಿಸಿದಾಗ ಅಥವಾ ಮಕ್ಕಳು ವಿಪರೀತ ಎನರ್ಜಿಯಿಂದ ಕುಣಿದಾಡುತ್ತಿದ್ದರೆ ತಮಾಷೆಯಾಗಿ ʼಏನ್ ತಿಂದು ಬಂದಿದ್ದೀಯಪ್ಪಾ ಇವತ್ತು?ʼ (ಕ್ಯಾ ಖಾ ಕೆ ಆಯಾ ಹೈ ಭಾಯ್?) ಅಂತ ಕೇಳುತ್ತೇವೆ. ಇದೀಗ ಭಾರತೀಯರ ಈ ಜನಪ್ರಿಯ ಡೈಲಾಗ್ ಅನ್ನೇ ಬಳಸಿಕೊಂಡು ಐಟಿಸಿಯ ‘ಆಶೀರ್ವಾದ್ ಅಟ್ಟಾ’ ಹೊಸದೊಂದು ಅಭಿಯಾನ ಶುರು ಮಾಡಿದೆ.

ತನ್ನ ಹೊಸ ‘ಆಶೀರ್ವಾದ್ ಅಟ್ಟಾ ವಿತ್ ಹೈ-ಪ್ರೋಟೀನ್’ ಉತ್ಪನ್ನದ ಪ್ರಚಾರಕ್ಕಾಗಿ, ಐಪಿಎಲ್ ಹಿನ್ನೆಲೆಯನ್ನಿಟ್ಟುಕೊಂಡು ಹಾಸ್ಯಭರಿತವಾದ ಹಾಗೂ ಆಕರ್ಷಕವಾದ ಡಿಜಿಟಲ್ ಜಾಹೀರಾತುಗಳನ್ನು ಬಿಡುಗಡೆ ಮಾಡಿದೆ.

ದೈನಂದಿನ ಆಹಾರದಲ್ಲೇ ಸಿಗುತ್ತೆ ಪ್ರೋಟೀನ್!

ಸಾಮಾನ್ಯವಾಗಿ ‘ಪ್ರೋಟೀನ್’ ಎಂದರೆ ಕೇವಲ ಜಿಮ್‌ಗೆ ಹೋಗುವವರು, ಕ್ರೀಡಾಪಟುಗಳು ತೆಗೆದುಕೊಳ್ಳುವ ಪೌಡರ್ ಅಥವಾ ಸಪ್ಲಿಮೆಂಟ್‌ಗಳು ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಆದರೆ, ಪ್ರೋಟೀನ್ ಪಡೆಯಲು ಯಾವುದೇ ಕಷ್ಟಪಡಬೇಕಿಲ್ಲ, ದಿನನಿತ್ಯ ನಾವು-ನೀವು ಮನೆಯಲ್ಲಿ ತಿನ್ನುವ ಚಪಾತಿ ಮೂಲಕವೇ ಸುಲಭವಾಗಿ ಪ್ರೋಟೀನ್ ಪಡೆಯಬಹುದು ಎಂಬುದನ್ನು ಜನರಿಗೆ ತಿಳಿಸುವುದೇ ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

ಗೋಧಿ ಹಿಟ್ಟಿನಲ್ಲಿ ಎಷ್ಟಿದೆ ಪ್ರೋಟೀನ್?

ಈ ‘ಆಶೀರ್ವಾದ್ ಹೈ-ಪ್ರೋಟೀನ್ ಆಟ್ಟಾ’ವನ್ನು ಉತ್ತಮ ಗುಣಮಟ್ಟದ ಗೋಧಿ, ಶೇ. 10ರಷ್ಟು ಸೋಯಾ, ಕಡಲೆಬೇಳೆ ಮತ್ತು ಓಟ್ಸ್ ಬಳಸಿ ತಯಾರಿಸಲಾಗಿದೆ. ಇದು ಚಪಾತಿಯ ಮೃದುತ್ವ ಮತ್ತು ಸ್ವಾದವನ್ನು ಕಾಪಾಡಿಕೊಳ್ಳುವ ಜೊತೆಗೆ, ಪ್ರತಿ 100 ಗ್ರಾಂಗೆ ಸುಮಾರು 15 ಗ್ರಾಂ ಪ್ರೋಟೀನ್ ಅನ್ನು ಒದಗಿಸುತ್ತದೆ. ಈ ಹಿಟ್ಟಿನಿಂದ ಮಾಡಿದ ಕೇವಲ ಮೂರು ಚಪಾತಿಗಳನ್ನು ತಿಂದರೆ ಸಾಕು, ಮನುಷ್ಯನಿಗೆ ದಿನಕ್ಕೆ ಬೇಕಾದ ಒಟ್ಟು ಪ್ರೋಟೀನ್‌ನಲ್ಲಿ ಶೇ. 25ರಷ್ಟು ಪ್ರೋಟೀನ್ ಸುಲಭವಾಗಿ ಸಿಗುತ್ತದೆ.

ಜಾಹೀರಾತಿನಲ್ಲಿ ಏನಿದೆ?

ಐಪಿಎಲ್ ಹಿನ್ನೆಲೆಯಲ್ಲಿ ಬಿಡುಗಡೆಯಾಗಿರುವ ಹೊಸ ಜಾಹೀರಾತು ಬಹಳ ಮಜವಾಗಿದೆ. ಮೈದಾನದಲ್ಲಿ ಬ್ಯಾಟರ್ ಒಬ್ಬ ಬೃಹತ್ ಸಿಕ್ಸರ್ ಬಾರಿಸಿದಾಗ ʼಕ್ಯಾ ಖಾ ಕೆ ಆಯಾ ಹೈ ಭಾಯ್?ʼ ಎಂಬ ಪ್ರಶ್ನೆ ಕೇಳಿಬರುತ್ತದೆ. ಆಗ ಅದಕ್ಕೆ ಸಿಗುವ ಉತ್ತರ, ನಮ್ಮೆಲ್ಲರ ಮನೆಯಲ್ಲೂ ದಿನಾ ಮಾಡುವ ʼಚಪಾತಿʼ ಎಂಬುದು. ಅಂದರೆ, ದಿನನಿತ್ಯದ ನಮ್ಮ ಊಟವೇ ನಮ್ಮ ಶಕ್ತಿಯ ಮೂಲ ಎಂಬುದನ್ನು ಈ ಮೂಲಕ ತಿಳಿಸಲಾಗಿದೆ.

ಈ ಹೊಸ ಅಭಿಯಾನದ ಬಗ್ಗೆ ವಿವರ ನೀಡಿರುವ ಐಟಿಸಿ ಲಿಮಿಟೆಡ್‌ನ ಸ್ಟೇಪಲ್ಸ್ ವಿಭಾಗದ ಮುಖ್ಯಸ್ಥ ಅನುಜ್ ರುಸ್ತಗಿ, “ಕ್ಯಾ ಖಾ ಕೆ ಆಯಾ ಹೈ? ಕ್ಯಾಂಪೇನ್ ಮೂಲಕ ನಾವು ಕೇವಲ ಪ್ರಚಾರವಲ್ಲ, ಜನರ ಆಲೋಚನೆಯನ್ನೇ ಬದಲಾಯಿಸಲು ಹೊರಟಿದ್ದೇವೆ. ಪ್ರೋಟೀನ್ ಎಂದರೆ ಏನೋ ವಿಶೇಷವಾದದ್ದು ಎಂಬ ಭಾವನೆ ಜನರಲ್ಲಿದೆ. ಆದರೆ ಮನೆಯಲ್ಲಿ ತಿನ್ನುವ ಚಪಾತಿಯ ಮೂಲಕವೇ ಸುಲಭವಾಗಿ ಪ್ರೋಟೀನ್ ಪಡೆಯಬಹುದು ಎಂಬುದನ್ನು ನಾವು ತೋರಿಸಿಕೊಡುತ್ತಿದ್ದೇವೆ. ನಮ್ಮ ದಿನನಿತ್ಯದ ಸಣ್ಣಪುಟ್ಟ ಅಭ್ಯಾಸಗಳೇ ನಮ್ಮ ಶಕ್ತಿ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತವೆ,” ಎಂದು ಹೇಳಿದರು.

‘ಆಶೀರ್ವಾದ್ ಅಟ್ಟಾ ವಿತ್ ಹೈ-ಪ್ರೋಟೀನ್’ ಪ್ರಸ್ತುತ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ ಮತ್ತು ಕೋಲ್ಕತ್ತಾ ನಗರಗಳಲ್ಲಿನ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಇದು 1 ಕೆ.ಜಿ ಮತ್ತು 5 ಕೆ.ಜಿ ಪ್ಯಾಕ್‌ಗಳಲ್ಲಿ ದೊರೆಯಲಿದ್ದು, 1 ಕೆ.ಜಿಗೆ 80-86 ರೂ. ಹಾಗೂ 5 ಕೆ.ಜಿಗೆ 386-416 ರೂ. ದರ ನಿಗದಿಪಡಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles