15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ರೈತರಿಗಾಗಿ ಪಿಐ ಇಂಡಸ್ಟ್ರೀಸ್‌ನ ಹೊಸ ಕೀಟನಾಶಕ ‘ಕಾರ್ವಿಂಟ್’ ಬಿಡುಗಡೆ

ರೈತರಿಗಾಗಿ ಪಿಐ ಇಂಡಸ್ಟ್ರೀಸ್‌ನ ಹೊಸ ಕೀಟನಾಶಕ ‘ಕಾರ್ವಿಂಟ್’ ಬಿಡುಗಡೆ

  • ಮೆಣಸಿನಕಾಯಿ, ಎಲೆಕೋಸು ಮತ್ತು ಹೂಕೋಸು ಬೆಳೆಗಳಲ್ಲಿ ತ್ರಿಪ್ಸ್ ಹಾಗೂ ಡೈಮಂಡ್ ಬ್ಯಾಕ್ ಮಾತ್ ನಿಯಂತ್ರಣಕ್ಕೆ ಹೊಸ ಪರಿಹಾರ

ಬೆಂಗಳೂರು: ಪಿಐ ಇಂಡಸ್ಟ್ರೀಸ್ ಭಾರತೀಯ ರೈತರಿಗಾಗಿ ಹೊಸ ಪೀಳಿಗೆಯ ಕೀಟನಾಶಕ ‘ಕಾರ್ವಿಂಟ್’ ಅನ್ನು ಬಿಡುಗಡೆ ಮಾಡಿದೆ. ಫ್ಲೋಮೆಟೋಕ್ವಿನ್ 10% ಎಸ್‌ಸಿ ಸಂಯೋಜನೆಯ ಈ ಕೀಟನಾಶಕವು ಮೆಣಸಿನಕಾಯಿ, ಎಲೆಕೋಸು ಮತ್ತು ಹೂಕೋಸು ಬೆಳೆಗಳಲ್ಲಿ ಕಾಣಿಸಿಕೊಳ್ಳುವ ತ್ರಿಪ್ಸ್ ಮತ್ತು ವಜ್ರದ ಬೆನ್ನಿನ ಚಿಟ್ಟೆ (ಡೈಮಂಡ್ ಬ್ಯಾಕ್ ಮಾತ್) ಕೀಟಗಳ ನಿಯಂತ್ರಣಕ್ಕೆ ನೆರವಾಗಲಿದೆ.

ವಿಶಿಷ್ಟ ಕಾರ್ಯವಿಧಾನ ಮತ್ತು ದೀರ್ಘಕಾಲದ ಕೀಟ ನಿಯಂತ್ರಣ ಸಾಮರ್ಥ್ಯ ಹೊಂದಿರುವ ಕಾರ್ವಿಂಟ್ ಅನ್ನು ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶದ ಪ್ರಮುಖ ಕೃಷಿ ಮಾರುಕಟ್ಟೆಗಳಲ್ಲಿ ಪರಿಚಯಿಸಲಾಗುತ್ತಿದೆ.

ಮೆಣಸಿನಕಾಯಿ ಮತ್ತು ಕೋಸು ವರ್ಗದ ಹೆಚ್ಚಿನ ಮೌಲ್ಯದ ಬೆಳೆಗಳಲ್ಲಿ ಕೀಟಬಾಧೆ ರೈತರಿಗೆ ಪ್ರಮುಖ ಸವಾಲಾಗಿದೆ. ತ್ರಿಪ್ಸ್ ಕೀಟದ ಹಾನಿಯಿಂದ ಮೆಣಸಿನಕಾಯಿ ಇಳುವರಿ ಶೇ 25ರಿಂದ 50ರವರೆಗೆ ಕುಸಿಯುವ ಸಾಧ್ಯತೆ ಇದ್ದರೆ, ಡೈಮಂಡ್ ಬ್ಯಾಕ್ ಮಾತ್ ಕೀಟವು ಎಲೆಕೋಸು ಬೆಳೆಗೆ ಗಣನೀಯ ಹಾನಿ ಉಂಟುಮಾಡುತ್ತದೆ.

ಪದೇ ಪದೇ ಕೀಟನಾಶಕ ಸಿಂಪಡಿಸುವ ಅಗತ್ಯ, ಅಲ್ಪಾವಧಿಯ ಕೀಟ ನಿಯಂತ್ರಣ, ಹೆಚ್ಚುತ್ತಿರುವ ಬೆಳೆ ನಿರ್ವಹಣಾ ವೆಚ್ಚ ಹಾಗೂ ಈಗಿರುವ ಕೆಲವು ರಾಸಾಯನಿಕಗಳ ವಿರುದ್ಧ ಕೀಟಗಳಲ್ಲಿ ಹೆಚ್ಚುತ್ತಿರುವ ನಿರೋಧಕ ಶಕ್ತಿ ರೈತರಿಗೆ ಮತ್ತಷ್ಟು ಸವಾಲು ತಂದೊಡ್ಡುತ್ತಿದೆ ಎಂದು ಕಂಪನಿ ತಿಳಿಸಿದೆ.

ಕಾರ್ವಿಂಟ್‌ನಲ್ಲಿರುವ ಫ್ಲೋಮೆಟೋಕ್ವಿನ್ 10% ಎಸ್‌ಸಿ ಹೊಸ ರೀತಿಯ ಸಕ್ರಿಯ ಘಟಕಾಂಶವಾಗಿದ್ದು, ಇದು ಐಆರ್‌ಎಸಿ ಗುಂಪು 34ಕ್ಕೆ ಸೇರಿದೆ. ಭಾರತೀಯ ಮಾರುಕಟ್ಟೆಗೆ ಇದು ಹೊಸ ವರ್ಗದ ಕೀಟನಾಶಕವಾಗಿದ್ದು, ಈಗಿರುವ ಕೀಟನಾಶಕಗಳೊಂದಿಗೆ ಸರದಿಯಂತೆ ಬಳಸುವುದರಿಂದ ಕೀಟಗಳ ನಿರೋಧಕ ಶಕ್ತಿ ನಿರ್ವಹಣೆಗೆ ಸಹಕಾರಿಯಾಗಲಿದೆ.

ಪಿಐ ಆಗ್‌ಸೈನ್ಸಸ್‌ನ ಇಂಡಿಯಾ ಬ್ರಾಂಡ್ಸ್ ವಿಭಾಗದ ಸಿಇಒ ಸಾಕೆತ್ ಭಟ್ನಾಗರ್ ಮಾತನಾಡಿ, “ಇಂದಿನ ರೈತರು ಕೀಟಗಳಲ್ಲಿ ಹೆಚ್ಚುತ್ತಿರುವ ನಿರೋಧಕ ಶಕ್ತಿ, ಪದೇ ಪದೇ ಸಿಂಪಡಿಸುವ ಅಗತ್ಯ, ಕಡಿಮೆ ಅವಧಿಯ ನಿಯಂತ್ರಣ ಮತ್ತು ಹೆಚ್ಚುತ್ತಿರುವ ಬೆಳೆ ನಿರ್ವಹಣಾ ವೆಚ್ಚದಂತಹ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕಾರ್ವಿಂಟ್ ತನ್ನ ವಿಶಿಷ್ಟ ಕಾರ್ಯವಿಧಾನದ ಮೂಲಕ ಪರಿಣಾಮಕಾರಿ ಮತ್ತು ಸುಸ್ಥಿರ ಕೀಟ ನಿರ್ವಹಣೆಗೆ ಹೊಸ ಆಯ್ಕೆಯನ್ನು ನೀಡಲಿದೆ,” ಎಂದು ಹೇಳಿದರು.

“ಕೀಟನಾಶಕಗಳನ್ನು ಜವಾಬ್ದಾರಿಯುತವಾಗಿ ಸರದಿಯಂತೆ ಬಳಸುವ ನಿರೋಧಕ ಶಕ್ತಿ ನಿರ್ವಹಣಾ ಕಾರ್ಯಕ್ರಮಗಳಿಗೂ ಕಾರ್ವಿಂಟ್ ನೆರವಾಗಲಿದೆ. ಭಾರತೀಯ ಕೃಷಿಗೆ ವಿಭಿನ್ನ ಹಾಗೂ ಸುಧಾರಿತ ಪರಿಹಾರಗಳನ್ನು ತರುವ ಮೂಲಕ ಬದಲಾಗುತ್ತಿರುವ ಸವಾಲುಗಳನ್ನು ಎದುರಿಸಲು ರೈತರಿಗೆ ಬೆಂಬಲ ನೀಡುವುದು ನಮ್ಮ ಬದ್ಧತೆ,” ಎಂದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles