14.6 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

Gold-Silver Rate: ಚಿನ್ನ ಪ್ರಿಯರಿಗೆ ಶಾಕ್‌, ಬೆಳ್ಳಿ ಪ್ರಿಯರಿಗೆ ಗುಡ್‌ ನ್ಯೂಸ್!‌ ಎಷ್ಟಿದೆ ಗೊತ್ತಾ?

ಚಿನ್ನದ ಮೇಲಿನ ಹೂಡಿಕೆಯನ್ನು ಸುರಕ್ಷಿತ ಎಂಬುದುರ ಎಲ್ಲರಿಗೂ ಗೊತ್ತಿರುವ ವಿಷಯ. ಅದೆಷ್ಟೋ ಮಂದಿ ಕೋಟಿ ಕೋಟಿ ಮೌಲ್ಯದಲ್ಲಿ ಚಿನ್ನದ ಮೇಲೆ ಹೂಡಿಕೆ (Investment) ಮಾಡಿ ಇಟ್ಟುಕೊಂಡಿದ್ದಾರೆ. ಆದರೆ ಇತ್ತೀಚೆಗೆ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರಂತೂ ಚಿನ್ನವನ್ನು ನೋಡೋಕು ಆಗದೇ, ಖರೀದಿಸೋಕು ಆಗದಂತೆ ಆಗಿಬಿಟ್ಟಿದೆ.

ಹೆಚ್ಚಿನ ಹೂಡಿಕೆದಾರರು ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಆದ್ರೆ ದಿನೇ ದಿನೇ ಚಿನ್ನದ ಬೆಲೆ (Gold Rate) ಮಾತ್ರ ಏರಿಕೆಯಾಗುತ್ತಲೇ ಇದೆ.

ಭಾರತದಲ್ಲಿ 24K ಚಿನ್ನದ ಬೆಲೆ:

24K ಚಿನ್ನದ ಒಂದು ಗ್ರಾಂ ಬೆಲೆಯಲ್ಲಿ ಇಂದು ಭಾರೀ ಏರಿಕೆ ಕಂಡಿದೆ. ಎರಡು ದಿನ ಸ್ಥಿರದಲ್ಲಿದ್ದ ಚಿನ್ನದ ದರ ಇಂದು ಏರಿಕೆಯ ಹಾದಿ ಹಿಡಿದಿದೆ. ಇಂದು 1 ಗ್ರಾಂ ಚಿನ್ನದ ಬೆಲೆ 13,042 ರೂ. ಆಗಿದೆ. ನಿನ್ನೆ 13,015 ರೂ. ಇತ್ತು. ನಿನ್ನೆಗಿಂತ ಇಂದು ಪ್ರತೀ ಗ್ರಾಂನಲ್ಲಿ ₹27 ರೂ. ಬದಲಾವಣೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 1,04,336 ರೂ. ಆಗಿದ್ದು, ನಿನ್ನೆ 1,04,120 ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹216 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,30,420 ರೂ. ಆಗಿದ್ದು, ನಿನ್ನೆ 1,30,150 ರೂ. ಇತ್ತು. ನಿನ್ನೆಗಿಂತ ಇಂದು ₹270 ರೂ. ಏರಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು ₹13,04,200 ರೂ. ಆಗಿದ್ದು, ನಿನ್ನೆ 13,01,500 ರೂ. ಇತ್ತು. ನಿನ್ನೆಗಿಂತ ಇಂದು 2,700 ರೂ. ಹೆಚ್ಚಳವಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ:

22K ಚಿನ್ನದ 1 ಗ್ರಾಂ ಬೆಲೆ ಇಂದು 11,955 ರೂ. ಆಗಿದ್ದು, ನಿನ್ನೆ 11,930 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಚಿನ್ನದ ಬೆಲೆಯಲ್ಲಿ ಒಟ್ಟು ₹25 ರೂ. ಏರಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 95,640 ರೂ. ಆಗಿದ್ದು, ನಿನ್ನೆ 95,440 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹200 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,19,550 ರೂ ಆಗಿದ್ದು, ನಿನ್ನೆ 1,19,300 ರೂ. ಇತ್ತು. ನಿನ್ನೆಗಿಂತ ಇಂದು ₹250 ರೂ ಹೆಚ್ಚಳವಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 11,95,500 ರೂ. ಆಗಿದ್ದು, ನಿನ್ನೆ ₹11,93,000 ರೂ. ಇತ್ತು. .

ಭಾರತದಲ್ಲಿ 18K ಚಿನ್ನದ ಬೆಲೆ:

18K ಚಿನ್ನದ 1 ಗ್ರಾಂ ಬೆಲೆ ₹9,782 ರೂ. ಆಗಿದ್ದು, ನಿನ್ನೆ 9,761 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹21 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹78,256 ರೂ. ಆಗಿದ್ದು, ನಿನ್ನೆ 78,088 ರೂ. ಇತ್ತು. ನಿನ್ನೆಗಿಂತ ಇಂದು ಚಿನ್ನದ ಬೆಲೆ ₹168 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 97,820 ರೂ. ಆಗಿದ್ದು, ನಿನ್ನೆ 97,610 ರೂ. ಇತ್ತು. ಒಟ್ಟು ₹210 ರೂ. ಬದಲಾವಣೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ 9,78,200 ರೂ. ಆಗಿದ್ದು, ನಿನ್ನೆ 9,76,100 ರೂ. ಇತ್ತು. ಒಟ್ಟು 2,100 ರೂ. ವ್ಯತ್ಯಾಸವಾಗಿದೆ.

ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:

ಚೆನ್ನೈ: 24K ರೂ. 13,135, 22K ರೂ. 12,040, 18K ರೂ. 10,040

ಮುಂಬೈ: 24K ರೂ. 13,042, 22K ರೂ. 11,955, 18K ರೂ. 9,782

ದೆಹಲಿ: 24K ರೂ. 13,057, 22K ರೂ. 11,970, 18K ರೂ. 9,797

ಕೋಲ್ಕತ್ತಾ: 24K ರೂ. 13,042, 22K ರೂ. 11,955, 18K ರೂ. 9,782

ಬೆಂಗಳೂರು: 24K ರೂ. 13,042, 22K ರೂ. 11,955, 18K ರೂ. 9,782

ಹೈದರಾಬಾದ್: 24K ರೂ. 13,042, 22K ರೂ. 11,955, 18K ರೂ. 9,782

ಕೇರಳ: 24K ರೂ. 13,042, 22K ರೂ. 11,955, 18K ರೂ. 9,782

ಪುಣೆ: 24K ರೂ. 13,042, 22K ರೂ. 11,955, 18K ರೂ. 9,782

ವಡೋದರಾ: 24K ರೂ. 13,047, 22K ರೂ. 11,960, 18K ರೂ. 9,787

ಅಹಮದಾಬಾದ್: 24K ರೂ. 13,047, 22K ರೂ. 11,960, 18K ರೂ. 9,787

ಬೆಳ್ಳಿ ಬೆಲೆ ಎಷ್ಷಿದೆ?

ಚಿನ್ನದ ಬೆಲೆ ಏರಿಕೆಯಾಗಿದ್ದು, ಇತ್ತ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಅಂತೂ ಬೆಳ್ಳಿ ಪ್ರಿಯರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. 1 ಗ್ರಾಂ ಬೆಳ್ಳಿ ದರ ಇಂದು ₹189 ರೂ. ಆಗಿದ್ದು, ನಿನ್ನೆ ₹190 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹1 ರೂ. ಇಳಿಕೆಯಾಗಿದೆ. ಇನ್ನು 8 ಗ್ರಾಂ ಬೆಳ್ಳಿ ಬೆಲೆ ₹1,512 ರೂ., 10 ಗ್ರಾಂ ಬೆಳ್ಳಿ ದರ ₹1,890 ರೂ., 100 ಗ್ರಾಂ ಬೆಳ್ಳಿ ದರ ₹18,900 ರೂ., 1000 ಗ್ರಾಂ ಬೆಳ್ಳಿ ಬೆಲೆ ₹1,89,000 ರೂ. ಆಗಿದೆ.

ಸ್ಪಾಟ್‌ ಗೋಲ್ಡ್‌ ವಿವರ:

ಡಿಸೆಂಬರ್‌ 5ರ ರಾಯಿಟರ್ಸ್‌ ವರದಿ ಪ್ರಕಾರ, ಡಾಲರ್‌ ಮೌಲ್ಯ ಇಳಿಕೆಯಾದ ಕಾರಣ ಸೋಮವಾರ ಚಿನ್ನದ ಬೆಲೆ ಏರಿಕೆ ಕಂಡಿದೆ. ಅಮೆರಿಕಾ ಫೆಡರಲ್‌ ರಿಸರ್ವ್‌ ದರ ಕಡಿತ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ.

GMT 0319 ವೇಳೆಗೆ ಸ್ಪಾಟ್‌ ಚಿನ್ನದ ದರವು ಪ್ರತೀ ಔನ್ಸ್‌ಗೆ $4,208.46 ನಲ್ಲಿ ಸ್ಥಿರವಾಗಿತ್ತು ಮತ್ತು ವಾರದಲ್ಲಿ 0.5% ದಷ್ಟು ಕುಸಿತ ಕಂಡಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles