14.6 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

Govt Recruitment: ಕರ್ನಾಟಕ ಸಾರಿಗೆ ಇಲಾಖೆಯಲ್ಲಿ 10,000 ಹುದ್ದೆಗಳ ಭರ್ತಿ! ನಿಗಮವಾರು ವಿವರ ಇಲ್ಲಿದೆ

Karnataka Transport Dept Recruitment: ಕರ್ನಾಟಕದಲ್ಲಿ ರಾಜ್ಯ ಸರ್ಕಾರಿ ಹುದ್ದೆಗಳ ನೇಮಕಾತಿ ಆಗಿಲ್ಲ ಎಂಬ ಆರೋಪ ಇದೆ. ಇದರಿಂದ ರಾಜ್ಯ ಸಾರಿಗೆ ಇಲಾಖೆ ಹೊರಗಿದೆ. ಏಕೆಂದರೆ ಸರ್ಕಾರ ಬಂದ ಎರಡೂವರೆ ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 10,000 ನೇಮಕಾತಿ ಮಾಡಿಕೊಳ್ಳಲಾಗಿದೆ.

ಇದರೊಂದಿಗೆ ಇನ್ನಷ್ಟು ಹುದ್ದೆಗಳ ನೇಮಕಾತಿಗೆ ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಮೂಲಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸ್ಥಾನ ನಿರ್ವಹಣೆಯಲ್ಲಿ ಯಶಸ್ವಿಯಾಗಿದ್ದಾರೆ.

ಸಾರಿಗೆ ಇಲಾಖೆಯ ನಾಲ್ಕು ನಿಗಮಗಳ ವ್ಯಾಪ್ತಿಯಲ್ಲಿ ಯಾವುದೇ ವಿವಾದವಿಲ್ಲದೇ, ಭ್ರಷ್ಟಾಚಾರ ರಹಿತ,‌ಪಾರದರ್ಶಕ ನೇಮಕಾತಿ ನಡೆಸಲಾಗಿದೆ. ಈ ಬಗ್ಗೆ ಟೀಕಿಸುತ್ತಿದ್ದ ವಿರೋಧ‌ಪಕ್ಷ ಬಿ.ಜೆ.ಪಿ ನಾಯಕರಿಗೆ ಸಚಿವರು ತಿರುಗೇಟು ನೀಡಿದ್ದಾರೆ. ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ 1,000 ಚಾಲನಾ ಹುದ್ದೆಗಳ ಭರ್ತಿಗೆ ಸಂಪುಟ ಒಪ್ಪಿದೆ. ಹಾಗಾದರೆ KSRTC, NWKRTC, BMTC ಮತ್ತು KSRTC ಪೈಕಿ ನಿಗಮವಾರು ಎಷ್ಟು ನೇಮಕಾತಿ ಆಗಿದೆ ಎಂಬ ಮಾಹಿತಿ ಇಲ್ಲಿದೆ.

ಸಾರಿಗೆ ನಿಗಮವಾರು ನೇಮಕಾತಿ ವಿವರ

ಕಾಂಗ್ರೆಸ್ ಸರ್ಕಾರ ಬಂದ ಎರಡೂವರೆ ವರ್ಷದಲ್ಲಿ ನಾಲ್ಲೂ ನಿಗಮಗಳಲ್ಲಿ ನೇಮಕಾತಿ ಆಗಿದೆ. ಒಟ್ಟು 9989 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC-2800 ಹುದ್ದೆಗಳು), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) 2828 ಹುದ್ದೆಗಳು, ಕರ್ನಾಟಕ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) 2261 ಹುದ್ದೆಗಳು ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಯಲ್ಲಿ 2900 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ.

KSRTC: ಬೆಂಗಳೂರಿನಿಂದ 2 ಜಿಲ್ಲೆಗಳಿಗೆ ಹೊಸದಾಗಿ ಎಸಿ, ನಾನ್ ಎಸಿ ಸ್ಲೀಪರ್ ಬಸ್ ಸೇವೆ: ಟಿಕೆಟ್ ದರ, ವೇಳಾಪಟ್ಟಿ

ಈ ನೇಮಕಾತಿಗಳಿಗೂ ಮೊದಲು ಕೋವಿಡ್ -19 ಆವರಿಸಿದ್ದ ಕಾರಣ ಅಂದು ಇದ್ದ ಬಿಜೆಪಿ ಸರ್ಕಾರದ ಎಲ್ಲಾ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವುದನ್ನು ತಡೆಹಿಡಿದಿತ್ತು. ಹಲವು ಬಾರಿ ವಾಯವ್ಯ ಸಾರಿಗೆ ಸಂಸ್ಥೆ ಸಿಬ್ಬಂದಿ ನಿರಂತರವಾಗಿ 2023 ರವರೆಗೆ 2 ವರ್ಷ 8 ತಿಂಗಳುಗಳ‌ ಕಾಲ ಮನವಿಯನ್ನು ಸಲ್ಲಿಸಿದರೂ ಅನುಮತಿ ನೀಡಿರಲಿಲ್ಲ.

ಅಧಿಸೂಚನೆಯಲ್ಲಿ ಮಾರ್ಪಾಡು..!

ಕಾಂಗ್ರೆಸ್ ಸರ್ಕಾರ ಬಂದ ನಂತರ 2024ರ ಮಾರ್ಚ್ 01 ಆದೇಶದಲ್ಲಿ ಚಾಲನಾ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ಗೆ ಅನುಮೋದನೆ ನೀಡಿತು. 2019 ರಲ್ಲಿ ಹೊರಡಿಸಲಾದ ಅಧಿಸೂಚನೆಯಲ್ಲಿ ಕೇವಲ ಚಾಲಕರ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ವಾಯವ್ಯ ಸಾರಿಗೆ ಸಂಸ್ಥೆಯ‌ ಮನವಿ ಮೇರೆಗೆ, ನಿರ್ವಾಹಕ‌ ಹುದ್ದೆಗಳನ್ನು ಭರ್ತಿಮಾಡಲು ಅಧಿಸೂಚನೆಯಲ್ಲಿ ಮಾರ್ಪಾಡು ಮಾಡಿ 1,000 ನಿರ್ವಾಹಕ‌ ಹುದ್ದೆಗಳಿಗೆ ಅನುಮತಿ ನೀಡಲಾಗಿತ್ತು.

ಈಗಾಗಲೇ ಚಾಲಕ‌ ಹುದ್ದೆಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವ ಅಭ್ಯರ್ಥಿಗಳ ವಯೋಮಿತಿ ಮೀರಿದ್ದು, ಬೇರೆ ಯಾವುದೇ ಸರ್ಕಾರಿ‌ ಹುದ್ದೆಗೆ ಅರ್ಹರಾಗಿರುವುದಿಲ್ಲ. ಆದ್ದರಿಂದ ನಮ್ಮ ಮನವಿಯನ್ನು ಪರಿಗಣಿಸಬೇಕೆಂದು ಮನವಿಯಲ್ಲಿ ಕೋರಲಾಗಿತ್ತು. ಅವರ ಬೇಡಿಕೆ, ಮನವಿಗೆ ಸ್ಪಂದಿಸಿದ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ಅನ್ವಯ ಹಂತ ಹಂತವಾಗಿ ನೇಮಕಾತಿ ಮಾಡಿಕೊಳ್ಳಲಾಗಿದೆ.

ಸಾರಿಗೆ ಹಾಗೂ ಮುಜರಾಯಿ ಸಚಿವರು ಹುಬ್ಬಳ್ಳಿಗೆ ತೆರಳಿದ್ದ ವೇಳೆ ಅಲ್ಲಿ ಅಭ್ಯರ್ಥಿಗಳಿಗೆ ಸ್ಪಂದಿಸಿದ್ದರು. ನ್ಯಾಯ ಒದಗಿಸಲಾಗುವುದು ಜೊತೆಗೆ ನೇಮಕಾತಿ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತಿರ್ಮಾನಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಬೆಳಗಾವಿ ಅಧಿವೇಶನ ಮೊದಲೇ ಹತ್ತು ಸಾವಿರ ನೇಮಕಾತಿಗಳು ಇಲಾಖೆ ವ್ಯಾಪ್ತಿಯಲ್ಲಿ ನಡೆದಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೇಮಕಾತಿ ಆಗುವ ನಿರೀಕ್ಷೆ ಇದೆ. ಜೊತೆಗೆ ಹೊಸ ಉದ್ದೇಶಿತ ಬಸ್‌ಗಳ ಖರೀದಿಯಲ್ಲೂ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles